‘ಸಂಪದ’ ನಗೆಬುಗ್ಗೆ - ಭಾಗ ೧೧೬

‘ಸಂಪದ’ ನಗೆಬುಗ್ಗೆ - ಭಾಗ ೧೧೬

ಪೈಲೆಟ್

ಸೂರಿ ಮತ್ತು ಶ್ರೀಮತಿ ಇಬ್ಬರೂ ವಿಮಾನದಲ್ಲಿ ಕೂತಿದ್ದರು. ವಿಮಾನ ಮುಂಬೈ ಇಂದ ದೆಹಲಿಗೆ ಹೋಗ್ತಾ ಇತ್ತು. ಸ್ವಲ್ಪ ಹೊತ್ತಿನ ಪ್ರಯಾಣದ ನಂತರ ಮಧ್ಯದಲ್ಲಿ ಏನೋ ತೊಂದರೆ ಆಗಿದೆ ಅಂತ ಗಗನಸಖಿ ಕಡೆಯಿಂದ ಮಾಹಿತಿ ಬಂತು. ಈ ವಿಮಾನ ಮುಂದೆ ಹೋಗಲ್ಲ ಅಂತ ಹೇಳಿ ಜೈಪುರದಲ್ಲಿ ಅದನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ‘ನಿಮ್ಮನ್ನು ಇನ್ನೊಂದು ವಿಮಾನಕ್ಕೆ ವರ್ಗಾಯಿಸಲಾಗುವುದು ಅಂತ ಎಲ್ಲಾ ಪ್ರಯಾಣಿಕರಿಗೆ ಹೇಳಲಾಯಿತು. ಎಲ್ಲರೂ ಕೆಳಗಿಳಿದು ಬಂದು ನಿಂತರು. ಆದರೆ ಒಬ್ಬ ಅಜ್ಜಿ ಮಾತ್ರ ಅಲ್ಲೇ ಕೂತಿದ್ದಳು. ಆಕೆ ಕುರುಡಿ. ತಮಗೆ ದಾರಿ ತೋರಿಸಲಿಕ್ಕೆ ಅಂತ ಅಜ್ಜಿ ಯಾವಾಗಲೂ ಒಂದು ನಾಯಿಯನ್ನು ಕರೆದುಕೊಂಡು ಓಡಾಡುತ್ತಿದ್ದಳು. ಅದು ಆಕೆಯ ಕೆಳಗೆ ಕುಳಿತಿತ್ತು. ಅಜ್ಜಿಯನ್ನು ನೋಡಿದ ಪೈಲೆಟ್ ‘ಯಾಕೆ ಕೂತಿದ್ದೀರಿ? ನೀವು ಕೆಳಗೆ ಇಳಿದು ಸ್ವಲ್ಪ ರಿಲ್ಯಾಕ್ಸ್ ಆಗಬಹುದಲ್ಲಾ? ಎಂದು ಕೇಳಿದ. ಅದಕ್ಕೆ ಅಜ್ಜಿ ‘ನನಗೆ ಕಣ್ಣು ಕಾಣಿಸೋಲ್ಲ. ಮುಂದಿನ ಪ್ರಯಾಣದ ಮಾಹಿತಿ ನೀಡುವವರೆಗೆ ನಾನು ಇಲ್ಲೇ ಕೂತಿರುತ್ತೇನೆ. ನನ್ನ ನಾಯಿಯನ್ನು ಸ್ವಲ್ಪ ಓಡಾಡಿಸಿಕೊಂಡು ಬರಬಹುದೇ?’ ಎಂದು ಕೇಳಿದರು. ‘ಖಂಡಿತಾ’ ಅಂತ ಹೇಳಿದ ಪೈಲೆಟ್ ದಾರಿ ತೋರಿಸುವ ನಾಯಿಯನ್ನು ಕರೆದುಕೊಂಡು ವಿಮಾನದಿಂದ ಇಳಿಯುತ್ತಿದ್ದ. ಅವನು ಬಿಸಿಲು ಜೋರು ಇದ್ದಕಾರಣ ಕಪ್ಪು ಕನ್ನಡಕ ಹಾಕಿಕೊಂಡಿದ್ದ. ಅವನು ಇಳಿದು ಬರುತ್ತಿದ್ದುದನ್ನು ನೋಡಿ ಕೆಳಗೆ ನಿಂತಿದ್ದ ಸೂರಿ ಒಮ್ಮೆಲೇ ಗಾಬರಿಯಾಗಿ ಕೂಗಿದ, ‘ಅಯ್ಯೋ, ಅಲ್ ನೋಡೇ, ಬರೀ ವಿಮಾನ ಅಲ್ಲ, ಈ ವಿಮಾನದ ಕಂಪೆನಿಯನ್ನೇ ಬದಲಾಯಿಸಬೇಕು. ಬಡ್ಡಿ ಮಕ್ಕಳು ಕುರುಡರನ್ನೆಲ್ಲಾ ಪೈಲೆಟ್ ಮಾಡಿದ್ದಾರೆ.’

***

ವಿಶ್ವಾಸ

ಸೂರಿ: ಸೊಳ್ಳೆಗಳು ಏಕೆ ಆಷ್ಟು ವಿಶ್ವಾಸದಿಂದ ಹಾರಾಡುತ್ತವೆ?

ಗಾಂಪ: ಏಕೆಂದರೆ ಅವು ಎಲ್ಲಿ ಹೋದರೂ ಜನ ಚಪ್ಪಾಳೆ ಹೊಡೆಯುತ್ತಾರೆ ಅದಕ್ಕೆ.

***

ರೆಕಾರ್ಡ್

ಸೂರಿ: ಮುಂಜಾನೆಯಿಂದ ನದಿಯಲ್ಲೇ ಈಜಾಡುತ್ತಿದ್ದೀರಿ. ಯಾಕೆ ಸರ್? ಗಿನ್ನೆಸ್ ರೆಕಾರ್ಡ್ ಮಾಡೋಕೆ ಏನಾದರೂ ಟ್ರೈ ಮಾಡ್ತಾ ಇದ್ದೀರಾ?

ಗಾಂಪ: ಅದೆಲ್ಲ ಏನೂ ಇಲ್ಲ. ರೀ.. ನಾನು ಈಜಲು ನದಿಗೆ ಇಳಿದ ತಕ್ಷಣ ದಡದ ಮೇಲಿದ್ದ ನನ್ನ ಬಟ್ಟೆಗಳನ್ನು ಯಾರೋ ಕಳ್ಳತನ ಮಾಡಿದ್ದಾರೆ.

***

ಕಾರಣ

ಸೂರಿ: ನಿನ್ನೆ ಊರಿಗೆ ಏಕೆ ಹೋಗಲಿಲ್ಲ?

ಶ್ರೀಮತಿ: ಟಿಕೆಟ್ ತಕೊಂಡು ಹೋಗುವಷ್ಟರಲ್ಲಿ ರೈಲು ನನ್ನ ಬಿಟ್ಟು ಹೋಗಿಬಿಟ್ಟಿತ್ತು.

ಸೂರಿ: ಇವತ್ತಾದ್ರೂ ಸಮಯಕ್ಕೆ ಸರಿಯಾಗಿ ಹೋಗಬೇಕಿತ್ತು.

ಶ್ರೀಮತಿ: ಇವತ್ತು ಸರಿಯಾದ ಸಮಯಕ್ಕೆ ಹೋಗಿ ಟಿಕೆಟ್ ತಗೊಂಡು ಹೋದೆ. ರೈಲು ನಿಂತಿತ್ತು. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ನಾನೇ ರೈಲು ಬಿಟ್ಟು ಮನೆಗೆ ವಾಪಾಸ್ ಬಂದೆ.

***

ಮೊಬೈಲ್

ಸೂರಿ: ಅರೇ ವಾವ್… ಇವತ್ತು ಮನೆಯೆಲ್ಲಾ ಎಷ್ಟು ಕ್ಲೀನ್ ಇಟ್ಟಿದ್ದೀಯಾ. ಯಾಕೆ ಇವತ್ತು ವಾಟ್ಸಾಪ್, ರೀಲ್ಸ್ ಅಂತ ಮೊಬೈಲ್ ನೋಡಲಿಲ್ಲವಾ?

ಶ್ರೀಮತಿ: ಮೊಬೈಲ್ ಸಿಗ್ತಾ ಇರಲಿಲ್ಲ. ಅದನ್ನು ಹುಡುಕಲು ಎಲ್ಲಾ ಸಾಮಾನುಗಳನ್ನು ಎತ್ತಿ ಸರಿಯಾಗಿ ನೋಡಿ ಸರಿಯಾಗಿ ಇಡ್ತಾ ಹೋದೆ. ಮನೆ ಆಟೋಮ್ಯಾಟಿಕ್ ಆಗಿ ಕ್ಲೀನ್ ಆಯ್ತು.!

***

ಗರ್ಲ್ ಫ್ರೆಂಡ್

ಸೂರಿ: ಗರ್ಲ್ ಫ್ರೆಂಡ್ ಅಂದರೆ ಯಾರು?

ಗಾಂಪ: ಯಾವಳು ಒಬ್ಬ ಹುಡುಗನನ್ನು ಒಂದೇ ವರ್ಷದೊಳಗಾಗಿ ಸಂಪೂರ್ಣವಾಗಿ ಬದಲಾಯಿಸುತ್ತಾಳೋ ಮತ್ತು ಒಂದು ವರ್ಷದ ನಂತರ ‘ನೀನೀಗ ಮೊದಲಿನಂತಿಲ್ಲ. ತುಂಬಾ ಬದಲಾಗಿದ್ದೀಯಾ.. ಐ ಹೇಟ್ ಯೂ’ ಅನ್ನುತ್ತಾಳೋ ಅವಳು.

***

ಪ್ರಬಂಧ

ಟೀಚರ್ ಸೂರಿಗೆ ಚೆನ್ನಾಗಿ ಹೊಡೀತಾ ಇದ್ರು. ಅಲ್ಲೇ ಬರುತ್ತಿದ್ದ ಮುಖ್ಯೋಪಾಧ್ಯಾಯರು ಟೀಚರ್ ನ ಕೇಳಿದರು.

‘ಯಾಕ್ರೀ ಅವನಿಗೆ ಹೊಡಿತಾ ಇದ್ದೀರಾ?’

ಟೀಚರ್: ಸರ್, ಗಾಂಧಿ ಬಗ್ಗೆ ಪ್ರಬಂಧ ಬರಿ ಅಂದ್ರೆ ಪೂಜಾ ಗಾಂಧಿ ಬಗ್ಗೆ ಬರ್ದಿದ್ದಾನೆ.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ