ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ

ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ "ವಿದ್ಯುತ್ ಬಳಕೆದಾರ"

ಬೆಂಗಳೂರು ಮಹಾತ್ಮಾ ಗಾಂಧಿ ರಸ್ತೆಯ ಮಹಾಲಕ್ಷ್ಮೀ ಚೇಂಬರ್ಸ್ ನಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ‌ನಿಯಂತ್ರಣ ಆಯೋಗವು ಪ್ರಕಟಿಸುವ (ಖಾಸಗಿ ಪ್ರಸಾರ) ಮಾಸಪತ್ರಿಕೆಯಾಗಿದೆ "ವಿದ್ಯುತ್ ಬಳಕೆದಾರ". ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಲ್ಲಿ ಪ್ರತ್ಯೇಕವಾಗಿ ಬಳಕೆದಾರರ ವ್ಯವಹಾರಗಳ ವಿಭಾಗದ ಕಚೇರಿ ಇದ್ದು, ಈ ವಿಭಾಗದಿಂದ ಪತ್ರಿಕೆಯನ್ನು ಹೊರತರಲಾಗುತ್ತಿದೆ.

2002ರ ಜನವರಿಯಲ್ಲಿ ಪತ್ರಿಕೆಯನ್ನು ಆರಂಭಿಸಲಾಗಿದೆ. ನಾಲ್ಕು ಪುಟಗಳ ಈ ಪತ್ರಿಕೆಗೆ ವೈ. ಜಿ. ಮುರಳೀಧರನ್ ಅವರು ಸಂಪಾದಕರು. ಆನಂದ್ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ವಿದ್ಯುತ್ ಗೆ ಸಂಬಂಧಿಸಿದ ಸರಕಾರದ ಯೋಜನೆಗಳು, ಕಾರ್ಯಕ್ರಮಗಳು, ಪ್ರಕಟಣೆಗಳು, ವಿದ್ಯುತ್ ಗೆ ಸಂಬಂಧಪಟ್ಟು ಗ್ರಾಹಕ ವೇದಿಕೆಗಳ ತೀರ್ಪುಗಳು, ಕೆಲ ಆಯ್ದ ವಿದ್ಯುತ್ ಸಂಬಂಧಿ ವರದಿಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತವೆ.

~ ಶ್ರೀರಾಮ ದಿವಾಣ