ಭಿನ್ನತೆ
ಒಂದರಂತೊಂದಿಲ್ಲ ,ನಮ್ಮ ಲೋಕದಲಿ
ಒಬ್ಬರಂತಿನ್ನೋ ಬ್ಬರಿಲ್ಲ ಬದುಕಿನಲಿ
ಭಿನ್ನತೆಯ ಸತ್ಯದಲಿ ಲೋಕ ನಡೆಯುವುದು
ಮುನ್ನ ಹಣೆಯಲಿ ಬೊಮ್ಮನದನೆ ಬರೆಯುವುದು.
[ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]
- Read more about ಭಿನ್ನತೆ
- Log in or register to post comments
ಒಂದರಂತೊಂದಿಲ್ಲ ,ನಮ್ಮ ಲೋಕದಲಿ
ಒಬ್ಬರಂತಿನ್ನೋ ಬ್ಬರಿಲ್ಲ ಬದುಕಿನಲಿ
ಭಿನ್ನತೆಯ ಸತ್ಯದಲಿ ಲೋಕ ನಡೆಯುವುದು
ಮುನ್ನ ಹಣೆಯಲಿ ಬೊಮ್ಮನದನೆ ಬರೆಯುವುದು.
[ನನ್ನ ಕವನ ಸಂಕಲನ ಬೇರು -ಚಿಗುರು ನೋಡಬಹುದು]
ಕತ್ತಿಗೆ ಕಲ್ಲನು ಕಟ್ಟಿ ನೀರಿಗೆ
ತಳ್ಳುವುದೊಳಿತು ಇಬ್ಬರನು;
ಇದ್ದರೂ ಪರರಿಗೆ ಕೊಡದವನ
ಉಜ್ಜುಗಿಸದ ಹಣವಿರದವನ!
ಸಂಸ್ಕೃತ ಮೂಲ:
ದ್ವೌ ಅಂಭಸಿ ನಿವೇಷ್ಟವ್ಯೋ ಗಲೇ ಬದ್ಧ್ವಾ ದೃಢಾಂ ಶಿಲಾಮ್ |
ಧನವಂತಂ ಅದಾತಾರಂ ದರಿದ್ರಂ ಚ ಅತಪಸ್ವಿನಮ್ ||
द्वौ अम्भसि निवेष्टव्यौ गले बद्ध्वा दॄढां शिलाम् ।
धनवन्तम् अदातारम् दरिद्रं च अतपस्विनम् ॥
-ಹಂಸಾನಂದಿ
ರಿಪೋರ್ಟೃ : ನಮಸ್ಕಾರ ದೊಗ್ನಾಳ್ರಿಗೆ, ಎಂಗಿದಿರ ? ಮನ್ಯಾಗೆಲ್ಲ ಪಾಡೈತ ?
ದೊಗ್ನಾಳ್ ಮುನ್ಯಪ್ಪ : ವಯಸ್ಸಾಯ್ತ್ ನೋಡ್ರಿ. ಬಾರಿ ನಿತ್ರಾಣ ಯಾವಾಗ್ಲೂ ಮಲ್ಗಿರಾದೆ ಆಗದೆ. ಎಲ್ಲೂ ಓಗೊದೆ ಇಲ್ಲ. ಪೇಪರ್ ಓದಾದ್ ಒಂದ್ ಉಚ್ಚ್ ಇನ್ನೂ ಐತೆ. ಅದನ್ನೂ ಯಾವಗ್ಲೋ ಬಿಡ್ವಾದಗ್ ಮಾತ್ರ. ಒಂದೊಂದ್ ಸರಿ, ಎಲ್ಡೇಲ್ಡ್ ದಿನ ಅದನ್ನೂ ಓದಲ್ಲ. ರೇಡ್ಯೊದಾಗೆ ಕೇಳ್ತಿನಷ್ಟೆ.
ಸ್ನೇಹಿತನ ಮದುವೆಗೆಂದು ಗುರುವಾರ ಸಂಜೆ ಹಾಸನಕ್ಕೆ ಹೋಗುತ್ತಿದ್ದಾಗ ಯಡಿಯೂರಿನ ಸಮೀಪ ಹಂಪ್ ಒಂದನ್ನು ಇಳಿಸುತ್ತಿರಬೇಕಾದರೆ ಮೈನಾ ಹಕ್ಕಿಯೊಂದು ನನ್ನ ಕಾರಿಗೆ ಬಡಿದು ನೆಲಕ್ಕೆ ಬಿತ್ತು ಸದ್ಯ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳಲಿಲ್ಲ. ಹಕ್ಕಿಗಳು ಸಾಮಾನ್ಯವಾಗಿ ವಾಹನಕ್ಕೆ ಸಿಕ್ಕಿಹಾಕಿಕೊಳ್ಳೊವುದಿಲ್ಲ ಛೇ! ಎಂದು ತಲೆ ಚಚ್ಚಿಕೊಂಡೆ ಅನ್ಯಾಯವಾಗಿ ಒಂದು ಪಕ್ಷಿ ಬಲಿಯಾಯಿತೇನೊ ಎಂದು ಕೊಂಡು ಹಿಂತಿರುಗಿ ನೋಡಿದೆ ಹಕ್ಕಿ ಸತ್ತಿರಲಿಲ್ಲ. ಸರಿ ಹಾರಿಹೋಗಬಹುದೆಂದು ೧೦೦ ಮೀ ಮುಂದಕ್ಕೆ ಹೋದಾಗ ಅದೆ ತೆರನಾದ ಮೈನಾ ಹಕ್ಕಿ ಯಾವುದೋ ವಾಹನದ ಚಕ್ರಕ್ಕೆ ಸಿಕ್ಕಿ ಪಜ್ಜಿಯಾಗಿತ್ತು. ಮನಸ್ಸು ಕೇಳಲಿಲ್ಲ ಕಾರನ್ನು ಹಿಂತಿರುಗಿಸಿ ಬಂದೆ ಏಕಮುಖ ರಸ್ತೆಯಾದ್ದರಿಂದ ಪಕ್ಷಿ ಅಲ್ಲೆ ಅಗಲವಾಗಿ ಬಾಯಿ ತೆರೆದು ಕೊಂಡು ಬಿದ್ದು ಒದ್ದಾಡುತ್ತಿತ್ತು.
ಪ್ರಿಯ ಓದುಗರೆ,
ಮಾನ್ಯ ಲೋಕಾಯುಕ್ತರು ಮಾಡುತ್ತಿರುವ ದಾಳಿಯ ಬಗ್ಗೆ ಅಭಿಮಾನ ಮತ್ತು ವಂದನೆಗಳನ್ನು ಹೇಳಿ ಕವನದ ಮಜಲಿನಲ್ಲಿ ಯೋಚಿಸಿ ಬರೆದಿರುವೆ. ಓದಿರಿ.
ಸಿಬ್ಬಂಧಿಯ ಕೊರತೆ
ಲೋಕಾಯುಕ್ತರು ಮಾಡಿದರು
ವಿಷ್ಣುವಿನ ಮನೆ ಮೇಲೆ
ದಾಳಿ;
ಏನೂ ಸಿಕ್ಕಲಿಲ್ಲ
ಕುಡಿದದ್ದೇ ಬಂತು
ಉಪ್ಪು ನೀರು! ;
ಮರು ಪ್ರಯತ್ನವ ಮಾಡಲು
ಸಬ್ ಮೆರಿನ್ ಬಳಸಿ
ಆಳಕ್ಕೆ ಇಳಿಸದರು !
ಮುತ್ತು ರತ್ನ ಇತ್ಯಾದಿ
ಆಸ್ತಿಗಳ
ವಿವರವ ಪಡೆದರು;
ಅವನ್ನೆಲ್ಲಾ
ಮುಟ್ಟುಗೋಲು ಹಾಕಿಕೊಳ್ಳಲು
ಸಿಬ್ಬಂಧಿಯ ಕೊರತೆಯೆಂದು
ಸರ್ಕಾರಕ್ಕೆ ಪತ್ರವ ಬರೆದರು!.
ದೊಡ್ಡವರನ್ನು ಅವರು
ಏನೂ ಮಾಡಲಾಗದು
ಎಂದು ಮತ್ತೊಮ್ಮೆ
ಸಾರಿದರು.
000000000000000
ಸಂಪದಿಗರೆಲ್ಲರಿಗೂ ನಮಸ್ಕಾರ, ತುಂಬಾದಿನಗಳಿಂದ ಬರಹ ಬರವಣಿಗೆಗಳಿಂದ ದೂರವಾಗಿದ್ದು, ಇದು ಬಿಡಲಾರದ ಚಟ ಎನಿಸಿ ಮತ್ತೆ ಮರಳಿರುವೆ. ಸಂಪದದ ಹೊಸ ರೂಪ ಕಂಡು ಖುಷಿಯಾಯ್ತು. ಸಂಪದಿಗರ ಬುದ್ದಿವಂತ ಚರ್ಚೆಗಳು, ಚುರುಕು ಕಮೆಂಟುಗಳು, ತೀಕ್ಷ್ಣ ಬರಹಗಳು ಎಲ್ಲವೂ ಇನ್ನೂ ಮುಂದುವರೆಯುತ್ತಿರುವುದು ಸಂತಸದ ವಿಷಯ. ಇಷ್ಟು ದಿನ ಪಾಲ್ಗೊಳ್ಳದೇ ಇದ್ದದ್ದಕ್ಕೆ ನಿರಾಶೆಗೊಂಡು ಮತ್ತೆ ಮರಳಿರುವುದಕ್ಕೆ ಖುಷಿಯಾಗಿರುವೆ, ಇದಿಷ್ಟೂ ಇಲ್ಲಿವರೆಗಿನ ಅಪ್ ಡೇಟ್, ಮಿಕ್ಕಿದ್ದು ಮುಂದಿನ ಬರಹಗಳಲ್ಲಿ ಮುಂದುವರೆಸುವೆ...
ಪ್ರೀತಿಯಿಂದ ಹೇಮ ಪವಾರ್
ಹುಟ್ಟಿದ್ದು ರಾಜಧಾನಿಯಲ್ಲಾದರೂ ಓದಿದ್ದು ಬೆಳೆದ್ದಿದ್ದೆಲ್ಲ ಸುಂದರ ಮಲೆನಾಡಲ್ಲಿ.ಹಾಗೆ ಮನೆಯಲ್ಲಿ ಕುಂದಗನ್ನಡದ ಛಾಪು ಇದ್ದರೂ ನಾನು ಕುಂದಾಪುರಕ್ಕೆ ಹೋಗುವ ತನಕ ಅಷ್ಟಾಗಿ ಆ ಭಾಷೆಯಲ್ಲಿ ಇನ್ನೊಬ್ಬರ ಜೊತೆ ಮಾತನಾಡುವಷ್ಟು ಪ್ರಾವೀಣ್ಯತೆ ಇರಲಿಲ್ಲ.ಅಲ್ಲಿದ್ದ ೨ ವರ್ಷದಲ್ಲಿ ಸ್ನೇಹಿತರ ಜೊತೆಗೆ ಮಾತಾಡಿ ಕುಂದಗನ್ನಡ ವನ್ನೇನೋ ಕಲಿತೆ.ಇದೇನೋ ಸರಿ ಆದರೆ ಮತ್ತೆ ರಾಜಧಾನಿಗೆ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಬಂದಾಗ ಎರಡು ಪ್ರಶ್ನೆಗಳು ಎದುರಾದವು.
ಹುಚ್ಚು ಹುಡುಗಿ
ಏನೇನೋ ಕೇಳುತ್ತಿರುತ್ತಾಳೆ
ಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆ
ನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!
ಹುಚ್ಚು ಹುಡುಗಿ
ವಯಸ್ಸಾಗಿಲ್ಲ ನನ್ನ ಅರ್ಧದಷ್ಟೂ
ತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟು
ಹೊಗಳುತ್ತಿರುತ್ತಾಳೆ ನನ್ನನ್ನು ಅಷ್ಟೊಂದು ಇಷ್ಟಪಟ್ಟು!
ಹುಚ್ಚು ಹುಡುಗಿ
ಮನದ ನೋವ ಮರೆ ಮಾಚುತ್ತಾಳೆ
ನಗುವಿನ ಮುಖವಾಡ ಹೊತ್ತು ನಗುತ್ತಿರುತ್ತಾಳೆ
ನನ್ನ ಅರಿವಿಗೆ ತಾರದಿರಲು ಯತ್ನಿಸಿ ಸೋಲುತ್ತಿರುತ್ತಾಳೆ!
ಹುಚ್ಚು ಹುಡುಗಿ
ನನಗೇ ಪಾಠ ಮಾಡುತ್ತಿರುತ್ತಾಳೆ
ನನ್ನ ಜೀವನದ ಅನುಭವ ಏನೂ ಅಲ್ಲ ಅನ್ನುತ್ತಾಳೆ