ದೊಗ್ನಾಳ್ ಮುನ್ಯಪ್ಪಾರ್ ತಾವ ಸಂವಾದ !
ರಿಪೋರ್ಟೃ : ನಮಸ್ಕಾರ ದೊಗ್ನಾಳ್ರಿಗೆ, ಎಂಗಿದಿರ ? ಮನ್ಯಾಗೆಲ್ಲ ಪಾಡೈತ ?
ದೊಗ್ನಾಳ್ ಮುನ್ಯಪ್ಪ : ವಯಸ್ಸಾಯ್ತ್ ನೋಡ್ರಿ. ಬಾರಿ ನಿತ್ರಾಣ ಯಾವಾಗ್ಲೂ ಮಲ್ಗಿರಾದೆ ಆಗದೆ. ಎಲ್ಲೂ ಓಗೊದೆ ಇಲ್ಲ. ಪೇಪರ್ ಓದಾದ್ ಒಂದ್ ಉಚ್ಚ್ ಇನ್ನೂ ಐತೆ. ಅದನ್ನೂ ಯಾವಗ್ಲೋ ಬಿಡ್ವಾದಗ್ ಮಾತ್ರ. ಒಂದೊಂದ್ ಸರಿ, ಎಲ್ಡೇಲ್ಡ್ ದಿನ ಅದನ್ನೂ ಓದಲ್ಲ. ರೇಡ್ಯೊದಾಗೆ ಕೇಳ್ತಿನಷ್ಟೆ.
ಏನಂದ್ರಿ ? ಬಾಳದಿನಆಮ್ಯಾಗ್ ಬಂದ್ರಿ. ನನಗೋ ಈ ರಾಜ್ಕೀಯ ಎಲ್ಲಾ ತಿಳಿದಂಗಾಗೊಗದೆ, ಸ್ವಾಮಿ. ಕಣ್ಣ್ ಸರಯಾಗ್ ಕಾಣ್ವಲ್ದು. ಏನೇಳಿ ಪ್ಯಾಪರ್ ನಾಗೆ ಏನೈತೆ ಅಂತ ? ಅವನ್ಕಾಲ್ ಇವ್ನು ಇವನ್ ತಲೆಕೂದ್ಲ್ ಅವನು ಇಡ್ಕಂಡ್ ಉಚ್ಚಂರಂಗೆ ಒಡ್ದಾಡೋದ್ ಬಿಟ್ರೆ ಇನ್ನೇನೈತೆ ನೀವೇ ಏಳಿ. ನಾನಂತು ಬಿಜೆಪಿ ಒಳ್ಳೆ ಪಾರ್ಟಿ ಆ ದ್ಯಾವೇ ಗೌಡ್ರ್ ಪಕ್ಸಕ್ಕಿಂತ ಮೇಲು ಅಂದ್ಕಂಡಿದ್ದೆ. ಏನಾತು ? ಯಡ್ಯೂರಪ್ಪರೇನ್ ಕಡ್ಮೆ ಇಲ್ಲ ಕಂಣ್ರಿ. ಐನಾತಿ ಬೂಮಿ, ಕಾಣಿ ಎಲ್ಲಾ ನುಂಗವ್ರೆ, ಮಕ್ಳಿಗೆಲ್ಲಾ ಆಸ್ತಿ ಮಾಡವ್ರೆ ! ಯಾರೂ ಚಾನ್ಸ್ ಬಂದ್ರೆ ಸುಮ್ಕಿರೊರರಲ್ಲ ನುಂಗಿ ನೀರ್ಕುಡ್ಯೋದ್ರಲ್ಲಿ ಯಾರೂ ಕಮ್ಮಿ ಇಲ್ಲ. ನನಗೇನು ಕೇಳ್ಬ್ಯಾಡ್ರಿ. ಮನೇಗೂ ಯಾರೂ ಇಲ್ಲ. ಎಲ್ಲಾ ಒಳಲ್ಕೆರೆ ಕೆರೆ ಕೋಡಿ ಬಿದ್ದೈತೆ ಅಂತ ಅದನ್ ನೋಡಕ್ಕ್ ಓಗೌರೆ. ನಾನು ಓಗೊನೆ. ಬಸ್ ಪ್ರಯಾಣ ಈಗ ಬಾಳ ಫಜೀತಿ ಆಗದೆ.
ರಿಪೋರ್ಟೃ : ಆಗ್ಲಿ ಸಾ ಬಿಜ್ಯಾಗಿದಿರ. ಮತ್ತಿನ್ನೊನ್ಸಲ ಬರ್ತೀನಿ. ಬಿಡ್ವ್ ಮಾಡ್ಕಂಡ್ ನಿಮ್ತಾವ ಬಾಳ ಮಾತಾಡೊದ್ ಇದೆ.ಆ... ಒಳಲ್ಕೆರೆ ಇಸ್ಯ ನಾನೆ ಏಳ್ಬಿಡ್ತಿನಿ ಕೇಳ್ಕೊಳಿ. ಅದೇನ್ ನೀರು ಅಂತೀರ. ಊರ್ ಬಂಡಮ್ ನ್ ದೇವಸ್ತಾನ್ದ್ ವರ್ಗೂ ನೀರೆ ನೀರು. ಆ ತಿಪ್ಪೆಗಳು ಮುಳ್ಗೊಗವೆ. ರಾಗಿ ಬೆಳೆನೂ ಆಳಾಗದೆ ಅಂತವ ರೈತೃ ಏಳ್ತಿದ್ದಿದ್ ಕಿವಿ ಬಿತ್ತು.
ದೊಗ್ನಾಳ್ ಮುನ್ಯಪ್ಪ : ಆಗ್ಲಿ ಒಗ್ಬನ್ರಿ. ಅಲ್ಲಿವರ್ಗು ನಾನಿರ್ಬೇಕಲ್ಲ. ಒಗಿ. ಪರ್ವಾವರಗಿಲ್ಲ.