ಮೈನಾ: ನಾನು ಮಾಡಿದ್ದು ಸರಿಯೆ?
ಸ್ನೇಹಿತನ ಮದುವೆಗೆಂದು ಗುರುವಾರ ಸಂಜೆ ಹಾಸನಕ್ಕೆ ಹೋಗುತ್ತಿದ್ದಾಗ ಯಡಿಯೂರಿನ ಸಮೀಪ ಹಂಪ್ ಒಂದನ್ನು ಇಳಿಸುತ್ತಿರಬೇಕಾದರೆ ಮೈನಾ ಹಕ್ಕಿಯೊಂದು ನನ್ನ ಕಾರಿಗೆ ಬಡಿದು ನೆಲಕ್ಕೆ ಬಿತ್ತು ಸದ್ಯ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳಲಿಲ್ಲ. ಹಕ್ಕಿಗಳು ಸಾಮಾನ್ಯವಾಗಿ ವಾಹನಕ್ಕೆ ಸಿಕ್ಕಿಹಾಕಿಕೊಳ್ಳೊವುದಿಲ್ಲ ಛೇ! ಎಂದು ತಲೆ ಚಚ್ಚಿಕೊಂಡೆ ಅನ್ಯಾಯವಾಗಿ ಒಂದು ಪಕ್ಷಿ ಬಲಿಯಾಯಿತೇನೊ ಎಂದು ಕೊಂಡು ಹಿಂತಿರುಗಿ ನೋಡಿದೆ ಹಕ್ಕಿ ಸತ್ತಿರಲಿಲ್ಲ. ಸರಿ ಹಾರಿಹೋಗಬಹುದೆಂದು ೧೦೦ ಮೀ ಮುಂದಕ್ಕೆ ಹೋದಾಗ ಅದೆ ತೆರನಾದ ಮೈನಾ ಹಕ್ಕಿ ಯಾವುದೋ ವಾಹನದ ಚಕ್ರಕ್ಕೆ ಸಿಕ್ಕಿ ಪಜ್ಜಿಯಾಗಿತ್ತು. ಮನಸ್ಸು ಕೇಳಲಿಲ್ಲ ಕಾರನ್ನು ಹಿಂತಿರುಗಿಸಿ ಬಂದೆ ಏಕಮುಖ ರಸ್ತೆಯಾದ್ದರಿಂದ ಪಕ್ಷಿ ಅಲ್ಲೆ ಅಗಲವಾಗಿ ಬಾಯಿ ತೆರೆದು ಕೊಂಡು ಬಿದ್ದು ಒದ್ದಾಡುತ್ತಿತ್ತು. ತಕ್ಷಣವೆ ಕಾರಿನಲ್ಲಿದ್ದ ಶೀಷೆಯಿಂದ ಒಂದು ಹನಿ ನೀರು ಬಾಯಿಗೆ ಹಾಕಿದೆ ತಲೆಯನ್ನೊಮ್ಮೆ ಕೊಡವಿ ಎಂದು ಕಾಲಿನ ಮೇಲೆ ನಿಂತಿತು ಆದರೆ ಹಾರಲಾಗುತ್ತಿರಲಿಲ್ಲ. ಸ್ವಲ್ಪ ಸಮಯ ಪ್ರಯತ್ನಿಸಲಿ ಎಂದು ಅಲ್ಲೆ ಕಾವಲು ನಿಂತೆ ನಾಯಿಗಳು ಮತ್ತು ಕಾಗೆಗಳು ಹತ್ತಿರದಲ್ಲೆ ಇದ್ದವು. ಊಹೂಂ ಹಾರಲು ಸಾಧ್ಯವಾಗುತ್ತಿರಲಿಲ್ಲ. ಏನ್ಮಾಡುವುದೆಂದು ಗೊತ್ತಾಗಲಿಲ್ಲ. ಅಲ್ಲೆ ಬಿಟ್ಟರೆ ಯಾವುದೋ ಚಕ್ರಕ್ಕೊ ಇಲ್ಲ ಪ್ರಾಣಿಗೊ ಆಹಾರವಾಗುವುದಂತು ನಿಶ್ಚಿತ. ಸರಿ ಎತ್ತಿ ಕಾರಿನಲ್ಲಿ ಕೂರಿಸಿಕೊಂಡು ನನ್ನ ಗಮ್ಯದ ಕಡೆಗೆ ಹೊರಟೆ ಬಹುಶಃ ನೋವಿನಿಂದ ಹಾರಲಾಗುತ್ತಿಲ್ಲ ನಾಳೆಯ ಹೊತ್ತಿಗೆ ಸರಿ ಹೋಗಬಹುದೆಂಬ ಆಶಯದಿಂದ. ಊಹೂಂ ಇಂದೂ ಕೂಡ ಅದಕ್ಕೆ ಹಾರಲಾಗುತ್ತಿಲ್ಲ. ದಾರಿಯುದ್ದಕ್ಕೂ ನಾಲ್ಕು ಮೈನಾ ಮತ್ತು ರಾಜಬೆಸ್ತ ವಾಹನಗಳಿಗೆ ಬಲಿಯಾದದ್ದು ಕಂಡು ಬಂತು ಕಾರಣ ರಸ್ತೆಯ ಮೇಲೆ ವಾಹನಗಳಿಗೆ ಬಡಿದು ಸತ್ತು ಬಿದ್ದಿರುವ ಹುಳುಗಳನ್ನು ತಿನ್ನುವ ಸಾಹಸ ಗಮನಕ್ಕೆ ಬಂತು. ನನ್ನೊಡನೆಯ ಮನೆಗೆ ಕರೆತಂದಿದ್ದೇನೆ. ಆದರೆ ಸಮಸ್ಯೆ ಅದರ ಆಹಾರದ್ದು. ವಿಕೀಪೀಡಿಯದವರು ಬರಿ ಹುಳುಗಳು ಮತ್ತು ಹಣ್ಣುಗಳು ಅದರ ಆಹಾರ ಎಂದು ತಿಳಿಸುತ್ತಿದ್ದಾರೆ! ಆಸ್ಪತ್ರೆಗಂತೂ ಬೆಳಿಗ್ಗೆಯೆ ಕರೆದೊಯ್ಯಬೇಕು. ಅದರ ವರ್ತನೆ ಗಮನಿಸಿದರೆ ಸ್ವಾತಂತ್ರ್ಯ ಬಯಸುತ್ತಿದೆ. ಆದರೆ ಹೊರಗೆ ಬಿಟ್ಟರೆ ಬಲಿಯಾಗುತ್ತದೆ. ಪಾಪ ಅದರ ಮರಿಗಳಿದ್ದರೆ ತಾಯಿಯ ಬರುವನ್ನೆ ಕಾಯುತ್ತಿರಬಹುದಲ್ಲವೆ? ನಾನು ಮಾಡಿದ್ದು ಸರಿಯೆ? ಇದನ್ನು ಬದುಕಿಸಿಕೊಳ್ಳವ ಮತ್ತು ಸಾಕುವ ಬಗೆ ಹೇಗೆ? ಚೇತರಿಸ್ಕೊಂಡ ಮೇಲೆ ಅದೇ ಜಾಗದಲ್ಲಿ ಬಿಟ್ಟರೆ ತನ್ನ ಗುಂಪು ಸೇರಿಕೊಳ್ಳುತ್ತದೆಯೆ?
ಚಿತ್ರಕೃಪೆ: ಗೂಗಲ್
Comments
ಉ: ಮೈನಾ: ನಾನು ಮಾಡಿದ್ದು ಸರಿಯೆ?
ಉ: ಮೈನಾ: ನಾನು ಮಾಡಿದ್ದು ಸರಿಯೆ?
ಉ: ಮೈನಾ: ನಾನು ಮಾಡಿದ್ದು ಸರಿಯೆ?
ಉ: ಮೈನಾ: ನಾನು ಮಾಡಿದ್ದು ಸರಿಯೆ?
ಉ: ಮೈನಾ: ನಾನು ಮಾಡಿದ್ದು ಸರಿಯೆ?