ವಿಷ್ಣುವಿ ಮನೆ ಮೇಲೆ ಲೋಕಾಯುಕ್ತ ದಾಳಿ -ಕುರಿತು.

ವಿಷ್ಣುವಿ ಮನೆ ಮೇಲೆ ಲೋಕಾಯುಕ್ತ ದಾಳಿ -ಕುರಿತು.

ಕವನ

 


ಪ್ರಿಯ ಓದುಗರೆ,


ಮಾನ್ಯ ಲೋಕಾಯುಕ್ತರು ಮಾಡುತ್ತಿರುವ ದಾಳಿಯ ಬಗ್ಗೆ ಅಭಿಮಾನ ಮತ್ತು ವಂದನೆಗಳನ್ನು ಹೇಳಿ ಕವನದ ಮಜಲಿನಲ್ಲಿ ಯೋಚಿಸಿ ಬರೆದಿರುವೆ. ಓದಿರಿ.


 


ಸಿಬ್ಬಂಧಿಯ ಕೊರತೆ


ಲೋಕಾಯುಕ್ತರು ಮಾಡಿದರು


ವಿಷ್ಣುವಿನ ಮನೆ ಮೇಲೆ


ದಾಳಿ;


ಏನೂ ಸಿಕ್ಕಲಿಲ್ಲ


ಕುಡಿದದ್ದೇ ಬಂತು


ಉಪ್ಪು ನೀರು! ;


ಮರು ಪ್ರಯತ್ನವ ಮಾಡಲು


ಸಬ್ ಮೆರಿನ್ ಬಳಸಿ


ಆಳಕ್ಕೆ ಇಳಿಸದರು !


ಮುತ್ತು ರತ್ನ ಇತ್ಯಾದಿ


ಆಸ್ತಿಗಳ


ವಿವರವ ಪಡೆದರು;


ಅವನ್ನೆಲ್ಲಾ


ಮುಟ್ಟುಗೋಲು ಹಾಕಿಕೊಳ್ಳಲು


ಸಿಬ್ಬಂಧಿಯ ಕೊರತೆಯೆಂದು


ಸರ್ಕಾರಕ್ಕೆ ಪತ್ರವ ಬರೆದರು!.


ದೊಡ್ಡವರನ್ನು ಅವರು


ಏನೂ ಮಾಡಲಾಗದು


ಎಂದು ಮತ್ತೊಮ್ಮೆ


ಸಾರಿದರು.


000000000000000


 


ಕಲ್ಪಿಸಿ,ರಚಿಸಿ ಟೈಪಿಸಿದವರು - ಶಿವಶಶಿ


ದಿನಾಂಕ 3-12-2010


 


 

Comments