ರಾಜಧಾನಿಯಲ್ಲಿ ಕಾಲೇಜಿನ ಮೊದಲ ದಿನಗಳು
ಹುಟ್ಟಿದ್ದು ರಾಜಧಾನಿಯಲ್ಲಾದರೂ ಓದಿದ್ದು ಬೆಳೆದ್ದಿದ್ದೆಲ್ಲ ಸುಂದರ ಮಲೆನಾಡಲ್ಲಿ.ಹಾಗೆ ಮನೆಯಲ್ಲಿ ಕುಂದಗನ್ನಡದ ಛಾಪು ಇದ್ದರೂ ನಾನು ಕುಂದಾಪುರಕ್ಕೆ ಹೋಗುವ ತನಕ ಅಷ್ಟಾಗಿ ಆ ಭಾಷೆಯಲ್ಲಿ ಇನ್ನೊಬ್ಬರ ಜೊತೆ ಮಾತನಾಡುವಷ್ಟು ಪ್ರಾವೀಣ್ಯತೆ ಇರಲಿಲ್ಲ.ಅಲ್ಲಿದ್ದ ೨ ವರ್ಷದಲ್ಲಿ ಸ್ನೇಹಿತರ ಜೊತೆಗೆ ಮಾತಾಡಿ ಕುಂದಗನ್ನಡ ವನ್ನೇನೋ ಕಲಿತೆ.ಇದೇನೋ ಸರಿ ಆದರೆ ಮತ್ತೆ ರಾಜಧಾನಿಗೆ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಬಂದಾಗ ಎರಡು ಪ್ರಶ್ನೆಗಳು ಎದುರಾದವು.
ಒಂದು ,ಇಲ್ಲಿ ಜನರ(ಎಲ್ಲರು ಅಲ್ಲ ) ಕನ್ನಡ ನೋಡಿ ಇವರೆಲ್ಲ ಶಾಲೆ ಯಲ್ಲಿ ಕನ್ನಡ ಪಾಠ ಕೇಳಿಲ್ಲ ವೇನೋ ಅನ್ನುವಷ್ಟು ಅನ್ನಿಸಿದರೂ ,ಆಮೇಲೆ ಒಬ್ಬ ರಾಜಕಾರಣಿಯ ಮಾತು ಕೇಳಿ ಜನರ ಭಾಷೆಯೇ ಹೀಗೆ ಅಂತ ಅನ್ನಿಸ್ತು.'ಹ ' ಮತ್ತು 'ಅ ' ಕಾರ ಗಳೆಲ್ಲವೂ ಅವರ ಅಂಕೆಯಲ್ಲಿ ಗ್ರಹಿಸಿದರೆ ಮಾತ್ರ ಅರ್ಥ ಆಗುತ್ತಿತ್ತು.ಅದು ಅವರಿಗೆ ಪಾಠ ಹೇಳಿಕೊಟ್ಟ ಮೇಷ್ಟ್ರಿನ ತಪ್ಪೂ ಅಲ್ಲ ,ಅವರಿಗೆ ತಿದ್ದಿಕೊಳ್ಳಲಾಗದ ಸಮಸ್ಯೆ...
ಆದರೆ ಇನ್ನೊಂದಕ್ಕೆ ನಾನೂ ಒಗ್ಗಿ ಹೋದೆ ,ತಿಳಿದೋ ತಿಳಿಯದೆಯೋ ಹೇಗೋ ನನ್ನ ಕನ್ನಡಕ್ಕು ಅಂಟಿಕೊಂಡಿತು.ಇನ್ನೂಕಾಲೇಜ್ ನ ಸಹಪಾಟಿ ಗಳೊಂದಿಗೆ ಕೆಲವು ಪದಗಳು ಅವರ ಜೊತೆಗೆ ಮಾತಿನಲ್ಲಿ,ನಗೆ ಚಾಟಿಕೆ ಯಲ್ಲಿ ಉಪಯೋಗಿಸುವುದುಂಟು.ಅದರಲ್ಲಿ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, prefix ಆಗಿ suffix ಆಗಿ ಬಳಸಬಹುದಾದ "ಮಗ " ಎನ್ನ್ನುವ ಪದ. ಇನ್ನೂ ನನ್ನ ನಿಘ೦ಟಿನಿಂದ ತೆಗೆಯಲಾಗದ ಪದ.
೨ ನೆಯದೆಂದರೆ,ಸ್ವಲ್ಪ ಕನ್ನಡ ಮೀಡಿಯಂ ನಲ್ಲಿ ಓದಿದ ನಮಗೆ ಇಂಗ್ಲಿಷ್ ಸರಿ ಆಗಿ ಸ್ಪೆಲ್ಲಿಂಗ್ ತಪ್ಪಿಲ್ಲದೆ ಬರೆಯಲಿಕ್ಕೆ ಬಂದರೂ,ಮಾತನಾಡಲು ಬರುತ್ತಿದ್ದದು ಅಷ್ಟಕ್ಕಷ್ಟೇ.ಆದರು ಕ್ರಿಕೆಟ್ ನೋಡುವ ಚಟ ಇದ್ದ ಕಾರಣ ನಾವು ಇಂಗ್ಲಿಷ್ ನಲ್ಲಿ ಅವರಿವರ ಕಾಮ್ಮೆನ್ತರಿ ಮಿಮಿಕ್ರಿ ಮಾಡಿ ಅಲ್ಪಸ್ವಲ್ಪ ಕಲ್ತಿದ್ದೆವು.ಹೀಗೆ ಗೆಳೆಯರೆಲ್ಲ ಸೇರಿದಾಗ ಯಾರಿಗೆ ಕನ್ನಡ ಬರುತ್ತೆ ಅನ್ನೋ ಟೆಸ್ಟ್ ನಾವೇ ಮಾಡೋದು.ಎಲ್ಲ ಕನ್ನಡದವರೇ ಆಗಿದ್ದರು ಕನ್ನಡ ಮಾತಾಡೋರು ಕಡಿಮೆ.ಆದರೆ ಕಾಲೇಜ್ ಡೇಸ್ ಶುರು ಆದ ೧೫ ದಿನಕ್ಕೆ ಹುಡುಗರಿಗೆ ಕನ್ನಡದಲ್ಲಿ ಮಾತಾಡೋಕಂತು ಬರತ್ತೆ ಅಂತ ಗೊತ್ತಾಯಿ ತು.ಆದರೂ ವಿದ್ಯಾರ್ಥಿಗಳು ಕನ್ನಡ ಮಾತಾಡೋಕೆ ಹಿಂಜರಿತಾರೆ ಇಲ್ಲಿ ಅನ್ನೋದು ಖಚಿತ....
Comments
ಉ: ರಾಜಧಾನಿಯಲ್ಲಿ ಕಾಲೇಜಿನ ಮೊದಲ ದಿನಗಳು
In reply to ಉ: ರಾಜಧಾನಿಯಲ್ಲಿ ಕಾಲೇಜಿನ ಮೊದಲ ದಿನಗಳು by vani shetty
ಉ: ರಾಜಧಾನಿಯಲ್ಲಿ ಕಾಲೇಜಿನ ಮೊದಲ ದಿನಗಳು