ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..
ನನ್ನ ಸ೦ಪದಿಗ ಮಿತ್ರ ಮಹನೀಯರುಗಳೇ,
ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು.