ಆ ಬಸ್ ಟಿಕೆಟ್ಟು
’ಅವಳ ಕೈಯಲ್ಲಿ ತಾನು ನೋಡಿದ್ದು ನಿಜವಾಗಿಯೂ ಬಸ್ ಟಿಕೆಟ್ಟಾ? ಅವಳು ನಿಜವಾಗಿಯೂ ಬೆಂಗಳೂರಿಗೆ ಹೋಗುತ್ತಿದ್ದಾಳಾ?’ ಎಂಬ ಪ್ರಶ್ನೆಗಳು ರಾತ್ರಿಯಿಂದ ಇವಳ ಮನಸ್ಸಿನಲ್ಲಿ ತುಯ್ದಾಡುತ್ತಿತ್ತು. ಅಪರಿಚಿತ ವ್ಯಕ್ತಿಯನ್ನು ಅಷ್ಟು ಹೇಗೆ ನಂಬುತ್ತಿ ಎಂದು ಯಾವಾಗಲೋ ಒಮ್ಮೆ ಕೇಳಿದ್ದಕ್ಕೆ, ’ಈವನ್ ಮೊಮ್ ಇಸ್ ಸ್ಟ್ರೇಂಜರ್ ವೆನ್ ವಿ ಬೊರ್ನ್ ರೈಟ್? ಡೋಂಟ್ ಅಡ್ವೈಸ್ ಮಿ, ಐ ನೊ ವ್ಹಾಟ್ ಐ ಅಮ್ ಡೂಯಿಂಗ್’ ಎಂದು ಡೈಲಾಗ್ ಹೊಡೆದು ತನ್ನ ಉಳಿದ ಮಾತುಗಳಿಗೆ ಕತ್ತರಿಯಿಟ್ಟಾಗ ಕೇವಲ ಮುಖವನ್ನೂ ನೋಡದ ಹುಡುಗನ ಪರವಹಿಸಿ ನನ್ನ ಬಳಿ ಹೀಗೆ ಮಾತನಾಡುವುದೇ ಎಂದೆನಿಸಿತ್ತು.
ಇಷ್ಟಕ್ಕೂ ತನಗೇಕೆ ತೊಂದರೆ, ಯಾರೂ ಬಾಯ್ ಫ್ರೆಂಡ್ ಇಲ್ಲದ ನನಗೆ ಇದ್ದವರ ಭಾವನೆ ಅರ್ಥವಾಗಬಲ್ಲುದೇ? ’ಮೊನ್ನೆ ಅವನು ಉಡುಪಿಗೆ ಬಂದಿದ್ದ, ರಾತ್ರಿಯಿಡೀ ಅವನೊಂದಿಗೆ ಇದ್ದೆ’ ಎಂದು ಅವಳು ಹೇಳಿದ್ದಾಗ ತಾನು ಬಿಕ್ಕಿ ಬಿಕ್ಕಿ ಅತ್ತಿದ್ದು ಅವಳ ಮೇಲಿನ ಪ್ರೀತಿಯಿಂದಲೋ ಅಥವಾ ನನ್ನ ಮತ್ಸರದಿಂದಲೋ... ಮತ್ತೆ ಅವಳು ಸಮಾಧಾನ ಮಾಡುತ್ತಾ ಹಾಗೇನೂ ಇಲ್ಲ ಎಂದು ಹೇಳಿದ ನಂತರವೂ ತನ್ನನ್ನು ಓಲೈಸಲೆಂದೇ ಸುಳ್ಳು ಹೇಳಿದಳು ಎಂದು ಅನಿಸಿದ್ದೇಕೆ. ನೆಟ್ ಚಾಟಿಂಗ್ ಮಾಡಿ ಪರಿಚಯವಾಗಿದ್ದ ಆ ಹುಡುಗ ಅವಳನ್ನು ಮೋಸ ಮಾಡುತ್ತಾನೋ ಏನೋ ಎಂದು ಅನಿಸುವುದೇಕೆ?
ಪೆನ್ನಿನ ಟಾಪ್ ಇನ್ನೂ ಬಾಯಲ್ಲಿ ಇತ್ತು, ಅನಾಟಮಿ ಕ್ಲಾಸ್ ನಡೆಯುತ್ತಿತ್ತು, ಇವಳ ಮನಸ್ಸು ಬೇರೆಲ್ಲೋ ಇತ್ತು. ಯಾರೋ ಏನೋ ನನಗೇನು ಎಂದು ಬಿಟ್ಟು ಬಿಡಲು ಆಗುತ್ತದೆಯೇ? ನನ್ನ ಆತ್ಮೀಯ ಗೆಳತಿ! ಅವಳು ಚೆನ್ನಾಗಿರಬೇಕು. ಆದರೆ ಇಂದು ಕ್ಲಾಸಿಗೆ ಕೂಡ ಬರಲಿಲ್ಲವಲ್ಲ ಅವಳು! ಅವಳಿಗೆ ಭಯವಾಗತೊಡಗಿತು. ಊರಿನ ಫೀಸ್ಟ್ ಎಂದು ಮನೆಗೆ ಹೋಗಬೇಕು ಎಂದು ಬೆಳಿಗ್ಗೆ ಹೋದವಳು ಬರುತ್ತಾಳೋ ಅಥವಾ ಹೋಗಿಯೇ ಬಿಟ್ಟಳೋ..? ಅವಳ ತಲೆ ಕೆಡುತ್ತಿತ್ತು. ಲೆಕ್ಚರ್ ಕೇಳೋಣವೆಂದರೆ ಅದೇ ಬೋರಿಂಗ್ ಅನಾಟಮಿ, ವಾಕರಿಕೆ ತರಿಸುವಂಥ ವಿವರಣೆ!
ಕಾಲೇಜಿಂದ ಲೈಬ್ರರಿಗೆ ಹೋಗಿ, ಸ್ವಲ್ಪ ಹೊತ್ತು ವಾಲಿಬಾಲ್ ಆಡಿ ವಿಷಯವನ್ನು ಮರೆತವಳಿಗೆ ಹಾಸ್ಟೆಲಿಗೆ ಮರಳಿ ಬರುತ್ತಿದ್ದಂತೆ ಪುನಃ ಅದೇ ವಿಷಯ ಕಾಡತೊಡಗಿತು. ತನ್ನ ರೂಮಿಗೆ ಬಂದು ನೋಡಿದಾಗ ಅವಳು ಬಂದ ಹಾಗಿತ್ತು. ಅವಳ ಪರ್ಸ್ ಬೆಡ್ಡಿನ ಮೇಲೆ ಬಿದ್ದಿತ್ತು. ಕುತೂಹಲದಿಂದ ಆ ಬಸ್ ಟಿಕೆಟ್ ಇನ್ನೂ ಇದೆಯೇ ಅಥವಾ ಅದು ಬಸ್ ಟಿಕೆಟ್ ಹೌದೇ ಎಂದು ನೋಡಲು ಪರ್ಸಿಗೆ ಕೈ ಹಾಕಿದಳು. ಹಣ ಮತ್ತು ಒಂದೆರಡು ಬಿಲ್ಲು ಬಿಟ್ಟರೆ ಏನೂ ಇರಲಿಲ್ಲ.
’ವ್ಹಾಟ್ ಆರ್ ಯೂ ಸರ್ಚಿಂಗ್?’ ಹಿಂದಿನಿಂದ ದನಿ ಬಂತು. ಪರ್ಸನ್ನು ಬಿಟ್ಟವಳೇ ತಿರುಗಿ ನಿಂತಳು.
’ನೆವರ್ ಟಚ್ ಮೈ ಪರ್ಸ್’ ಎಂದವಳು ಪರ್ಸನ್ನು ಕಿತ್ತು ಕೊಂಡಳು.
’ಐ ಬ್ರೋಕ್ ಅಪ್ ವಿತ್ ದ್ಯಾಟ್ ಗೈ, ನಾಟ್ ಗೋಯಿಂಗ್ ಟು ಮೀಟ್ ಹಿಮ್’ ಎಂದಳು, ಅತ್ತು ಬಂದಿದ್ದಂತೆ ಇವಳಿಗನಿಸಿತು.
ಇವಳ ಮುಖದಲ್ಲಿ ಮಂದಹಾಸ ಮಿನುಗಿತ್ತು. ಬ್ರೇಕಪ್ಪಿನ ಕಾರಣ ಇವಳಿಗೆ ಬೇಕಿರಲಿಲ್ಲ.
Comments
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by Jayanth Ramachar
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by manju787
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by Jayanth Ramachar
ಉ: ಆ ಬಸ್ ಟಿಕೆಟ್ಟು
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by gopinatha
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by santhosh_87
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by gopinatha
ಉ: ಆ ಬಸ್ ಟಿಕೆಟ್ಟು
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by pramods1729
ಉ: ಆ ಬಸ್ ಟಿಕೆಟ್ಟು
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by Tejaswi_ac
ಉ: ಆ ಬಸ್ ಟಿಕೆಟ್ಟು
ಉ: ಆ ಬಸ್ ಟಿಕೆಟ್ಟು
In reply to ಉ: ಆ ಬಸ್ ಟಿಕೆಟ್ಟು by ksraghavendranavada
ಉ: ಆ ಬಸ್ ಟಿಕೆಟ್ಟು