ವಿಮಾನ ದುರಂತ

ವಿಮಾನ ದುರಂತ

ಬರಹ

ಮಿಂಚಂಚೆಯಲ್ಲಿ ಬಂದ ಆಂಗ್ಲ ಲೇಖನ...ಅನುವಾದಿಸಿದ್ದೇನೆ...

 

ನಾನು ವಿಮಾನದಲ್ಲಿದ್ದೆ...ಕೆಲಸದ ಮೇಲೆ ಮತ್ತೊಮ್ಮೆ ವಿದೇಶಕ್ಕೆ ಹೊರಡುತ್ತಿದ್ದೆ..ಬಹಳ ಖುಶಿಯಲ್ಲಿದ್ದೆ.. ಕಿಟಕಿಯ ಆಚೆ ಮುಸ್ಸಂಜೆಯ ಸವಿಯನ್ನು ಸವಿಯುತ್ತಿದ್ದೆ...

ಸ್ವರ್ಗದಲ್ಲಿದ್ದಂತೆ ಭಾಸವಾಗುತ್ತಿತ್ತು..ನನ್ನನ್ನು ನಾನು ಮೈ ಮರೆತಿತಿದ್ದೆ ಆ ಸೌಂದರ್ಯದಲ್ಲಿ.. ಅಷ್ಟರಲ್ಲಿ ಒಂದು ದನಿ ನನ್ನನ್ನು ವಾಸ್ತವಕ್ಕೆ ಕರೆದುಕೊಂಡು ಬಂತು...

 

" ಸರ್, ತಿನ್ನಲು ಅಥವಾ ಕುಡಿಯಲು ಏನಾದರು ತೆಗೆದುಕೊಳ್ಳುವಿರ? "

 

ನಾನು ತಿರುಗಿ ನೋಡಿದೆ, ಆಶ್ಚರ್ಯ ಚಕಿತನಾದೆ ನನ್ನ ಕಾಲೇಜ್ ಸಹಪಾಟಿಯನ್ನು ಕಂಡು..ಸುಂದರವಾದ "ಸಾಕ್ಷಿ".

 

"ಹೇ ಸಾಕ್ಷಿ, ನೀನೇನಾ, ಅದು ನೀನು,,ಇಷ್ಟು ಸುಂದರವಾಗಿ ಈ ಗಗನ ಸಖಿಯ ಪೋಷಾಕಿನಲ್ಲಿ.."

 

" ಸಾತ್ವಿಕ್..'ವಾವ್' . ನನಗೆ ನಂಬಲು ಸಾಧ್ಯವಾಗುತ್ತಿಲ್ಲ...ಕ್ಷಮಿಸು ನಾನೀಗ ಕೆಲಸದಲ್ಲಿದ್ದೇನೆ...ಬಿಡುವಾದಾಗ ಮಾತಾಡುತ್ತೇನೆ."

 

ನನ್ನ ಮುಖದ ಮೇಲೆ ಮಂದಹಾಸ ಮೂಡಿಸಿದಳು..ನನ್ನ ಕಣ್ಣನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ.. ನನ್ನ ಕಾಲೇಜಿನ ನೆನಪುಗಳು ಮರುಕಳಿಸಿದವು..

ಅವಳ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದೆ...ಯಾವಾಗಲು ಕಾಲೇಜ್ ಮುಗಿದ ನಂತರ ಅವಳನ್ನು ಹಿಂಬಾಲಿಸುತ್ತಿದ್ದೆ....ಎಷ್ಟೋ ಪ್ರೇಮ ಪತ್ರಗಳನ್ನು

ಬರೆದಿದ್ದೆ...ಆದರೆ ಕೊಡಲು ಧೈರ್ಯ ಮಾಡಿರಲಿಲ್ಲ...ಯಾವಾಗಲು ಕ್ಲಾಸಿನಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತು ಅವಳನ್ನೇ ದಿಟ್ಟಿಸುತ್ತಿದ್ದೆ....

ಅವಳು ನಮ್ಮ ಕ್ಲಾಸಿನ "ರಾಣಿ"..೨-೩ ಹುಡುಗರ ಜೊತೆ ಕಿತ್ತಾಡಿದ್ದೆ ಅವಳಿಗಾಗಿ...ನಾನೆಂಥ ಹುಚ್ಚ...

 

ನನಗೆ ತಡೆಯಲು ಆಗುತ್ತಿಲ್ಲ, ಮತ್ತೊಮ್ಮೆ ಅವಳೆಡೆಗೆ ನೋಡಿದೆ..ಅವಳು ಕಾಲೇಜ್ನಲ್ಲಿದ್ದಕ್ಕಿಂತ ಈಗ ಸುಂದರವಾಗಿದ್ದಳು....ಅವಳೂ ಸಹ ನನ್ನೆಡೆ

ನೋಡಿ ಮುಗುಳ್ನಗೆ ಬೀರಿ,..ತನ್ನ ಸಹೋದ್ಯೋಗಿಯೊಡನೆ ಏನೋ ಪಿಸುಗುಟ್ಟಿ ಇಬ್ಬರು ನಗಲು ಶುರು ಮಾಡಿದರು...

 

ಅಲ್ಲಿ ಏನು ನಡೆಯುತ್ತಿದೆಯಂದು ನನಗೆ ಅರಿವಿರಲಿಲ್ಲ..ಅವಳ ಸಹೋದ್ಯೋಗಿಯೂ ಸುಂದರವಾಗಿದ್ದಳು...ಓ ದೇವರೇ ಇವತ್ತು ನನ್ನ ಕನಸು ನಿಜ ಆಗುವ ಹಾಗೆ ಮಾಡು..

ಅವಳ ಹತ್ತಿರ ಹೋಗಿ ಮಾತಾಡೋಣ ಎಂದುಕೊಂಡೆ..ಆದರೆ ಅವಳು ಕೆಲಸದಲ್ಲಿದ್ದಾಳೆ ಎಂದುಕೊಂಡು ಸುಮ್ಮನಾದೆ.. ಮತ್ತೆ ಅವಳೆಡೆಗೆ ನೋಟ ಬೀರಿದೆ..

ಆಚೆ ಮೋಡಗಳ ಮೇಲೆ ಹಕ್ಕಿಯಂತೆ ತೇಲುತ್ತಿದ್ದೆವು ನಾವು...ಒಳಗಡೆ ಕೂಡ ಅವಳ ನಗುವಿನಿಂದ ತೇಲುತ್ತಿರುವಂತೆ ಭಾಸವಾಗುತ್ತಿತ್ತು....

ನನಗೆ ತಡೆಯಲು ಆಗದೆ ಧೈರ್ಯ ಮಾಡಿ ಶೌಚಕ್ಕೆ ಹೋಗುವ ನೆಪದಲ್ಲಿ ಎದ್ದು ಹೊರಟು ಅವಳೆಡೆಗೆ ನೋಡಿ ನಕ್ಕೆ...ನನ್ನ ಮನದಿಂಗಿತವನ್ನು ಅರಿವು ಮಾಡಿಕೊಂಡ

ಅವಳು ನನ್ನೆಡೆಗೆ ಬಂದು ಹೇಳಿದಳು " ಕ್ಷಮಿಸು ನಿನ್ನ ಹತ್ತಿರ ಜಾಸ್ತಿ ಮಾತಾಡಲು ಆಗಲಿಲ್ಲ...ಹೇಳು ಹೇಗಿದ್ದೀಯ ನೀನು, ಎಷ್ಟು ವರ್ಷ ಆಯಿತು ನಿನ್ನ ನೋಡಿ...ಏನ್ ಮಾಡ್ತಿದ್ಯ?

ಈಗ ಎಲ್ಲಿ ಹೊರಟಿದ್ಯ?

 

ಕೆಲ ಕ್ಷಣಗಳ ಮೌನದ ನಂತರ...

 

ನಾನು ಯಾವಾಗಲೂ ಅಲ್ಲೇ ಇದ್ದೆ...ನೀನು ಕಾಲೇಜ್ ನಂತರ ಎಲ್ಲ ಬಿಟ್ಟಿದ್ದು...ನಾನು ನಿನ್ನನ್ನು ಹುಡುಕಿದೆ...ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹುಡುಕಿದೆ.. ನಿನ್ನ ಸುಳಿವೇ ಇಲ್ಲ..

ಕಾಲೇಜ್ ನಂತರ ಒಂದು ಒಳ್ಳೆ ಕಂಪನಿ ಯಲ್ಲಿ ಕೆಲಸ ಸಿಕ್ಕಿತು ನಂಗೆ. ನನಗೆ ಗೊತ್ತಿರಲಿಲ್ಲ ನನ್ನ ಕಂಪನಿ ನನಗೆ ಇಷ್ಟು ಕೊಡುತ್ತದೆ ಎಂದು...ಈಗಲೂ ಕೆಲಸದ ಮೇಲೆಯೇ

ಹೊರದೇಶಕ್ಕೆ ಹೊರಟಿರುವುದು..ಯಾವಾಗ ವಾಪಾಸ್ ಬರುತ್ತೀನೋ ಗೊತ್ತಿಲ್ಲ...ನಿನಗೆ ಗೊತ್ತ?? ನನ್ನ ಜೀವನದಲ್ಲಿ ಎಲ್ಲ ಗಳಿಸಿದೆ...ಒಬ್ಬರನ್ನು ಬಿಟ್ಟು..ಯಾರ ಜೊತೆ

ನನ್ನ ಜೀವನವನ್ನು ಹಂಚಿಕೊಳ್ಳಬೇಕೆಂದು ಕೊಂಡೆನೋ, ನನ್ನ ಗೆಲುವನ್ನು ಹಂಚಿಕೊಳ್ಳ ಬೇಕೆಂದು ಕೊಂಡೆನೋ...ಅವರನ್ನು ಬಿಟ್ಟು..

 

ಒಬ್ಬರಾ??

 

ನಾನು ಅವಳ ಕಣ್ಣನ್ನೇ ದಿಟ್ಟಿಸಿದೆ..ಅದೇ ನೀಲಿ ಕಣ್ಣುಗಳು...ಅವಳಿಗೆ ಉತ್ತರ ಸಿಕ್ಕಿತೆಂದೆನಿಸುತ್ತದೆ...ಯಾರು ಆ ಒಬ್ಬರೆಂದು..ಕಣ್ಣಂಚಿನಲ್ಲಿ ನೀರು ತುಂಬಿಕೊಂಡು

ಅವಳೆಂದಳು..ಕ್ಷಮಿಸು ನಾನು ಹೊರಡಬೇಕು..ಆಮೇಲೆ ನನ್ನ ಮೊಬೈಲ್ ನಂಬರ್ ಕೊಡುತ್ತೀನಿ ಎಂದಳು..

 

ಭಾರವಾದ ಹೃದಯದಿಂದ ನಾನು ಅವಳ ಉತ್ತರ ನಿರೀಕ್ಷಿಸುತ್ತ ನನ್ನ ಸ್ಥಳಕ್ಕೆ ಬಂದು ಕುಳಿತೆ ಮೌನವಾಗಿ..ಆ ಹೊಟ್ಟೆಗೆ ಆಚೆ ಕತ್ತಲಾವರಿಸಿತ್ತು...ಗುಡುಗು ಸಿಡಿಲಿನ

ಆರ್ಭಟ ಜೋರಾಗಿತ್ತು...ನನ್ನ ಎದೆಬಡಿತದ ಹಾಗೆ...ಇದ್ದಕ್ಕಿದ್ದಂತೆ ವಿಮಾನ ಓಲಾಡಲು ಶುರುವಾಯಿತು..ಎಲ್ಲರು ಭಯಭೀತರಾದರು..ಕೂಡಲೇ ಸಾಕ್ಷಿ

ಮೈಕಿನ ಬಳಿಗೋಡಿ ಯಾರು ಹೆದರಬೇಡಿ ...ಆಚೆ ಜೋರಾಗಿ ಬಿರುಗಾಳಿ ಎದ್ದಿದೆ...ಯಾರೂ ಉದ್ವೆಗಕ್ಕೊಳಗಾಗಬಾರದು ಎಂದು ಹೇಳಿದಳು..

ಆದರೆ ವಿಮಾನ ಮುಂಚಿಗಿಂತ ಜೋರಾಗಿ ಓಲಾಡಲು ಶುರುಮಾಡಿತು...ಎಲ್ಲರಿಗು ಬಹುಶ ಇದು ನಮ್ಮ ಕೊನೆಯ ಕ್ಷಣಗಳು ಎಂದು ಭಾವಿಸಿದರು...

 

ನಾನು ಮಾತ್ರ ಸಾಕ್ಷಿಯನ್ನು ಹಾಗು ಅವಳು ನನ್ನನು ನೋಡುತ್ತಿದ್ದೆವು...

 

ಇದ್ದಕ್ಕಿದ್ದಂತೆ ನನ್ನ ಬೆನ್ನ ಮೇಲೆ ಬಲವಾದ ಹೊಡೆತ ಬಿದ್ದಂತಾಯಿತು..ನನ್ನ ಕಣ್ಣ ಮುಂದೆ ಕತ್ತಲಾವರಿಸಿತು...ಭೀಕರ ಮೌನ,,.ಆದರೂ ನನ್ನ ಮನಸ್ಸಿನ್ನಲ್ಲಿ

ಓಲಾಡುವ ವಿಮಾನದ ಅನುಭವವಾಗುತ್ತಿತ್ತು...ಹಾಗೆ ಜನರ ಚೀರಾಟ...

 

ತಕ್ಷಣ ಯಾರೋ ಕಿರುಚಿದರು..."ಸಾ ಸಾ ಸಾ ಸಾ ಸಾ ಸಾ ತ್ವಿತ್ವಿತ್ವಿ ತ್ವಿ ತ್ವಿತ್ವಿ ತ್ವಿ ಕ್ ಕ್ ಕ್ ಕ್ ಕ್ "

 

ಸಾತ್ವಿಕ್ ಎದ್ದೇಳು...ನೀನು ಮತ್ತೆ ಆಫೀಸ್ ನಲ್ಲಿ ನಿದ್ದೆ ಮಾಡುತ್ತಿದ್ದೀಯ...ಬೇಗ ಏಳು ನನಗೆ ಆ ರಿಪೋರ್ಟ್ ಬೇಕು...

 

ಎದ್ದು ಆ ಕಡೆ ಈ ಕಡೆ ನೋಡುತ್ತೀನಿ...ಅದೇ ಆಫೀಸ್, ಅದೇ ಜಾಗ, ಅದೇ ಕೆಲಸ, ವಿದೇಶ ಯಾತ್ರೆ ಇಲ್ಲ, ಸಾಕ್ಷಿ ಇಲ್ಲ, ..

ಕೋಪದಲ್ಲಿ ನನ್ನ ಮ್ಯಾನೇಜರ್ ಮುಖ ನೋಡಿದೆ...ಏಕೆಂದರೆ ಅವನಿಂದಲೇ ನನ್ನ ವಿಮಾನ ದುರಂತಕ್ಕೀಡಾಯಿತು...