ರಾಜಕೀಯದಿಂದ - ರಾಜಕೀಯಕ್ಕೆ...

ರಾಜಕೀಯದಿಂದ - ರಾಜಕೀಯಕ್ಕೆ...

ಬರಹ

ನಾಲ್ಕು ಜನ ಟೀ ಕುಡಿಯುವಾಗ ಏನು ಕೆಲಸ ಇಲ್ಲದೆ ಶುರು ಹಚ್ಚಿಕೊಂಡ ಸಂಭಾಷಣೆ ಎಲ್ಲಿಂದ ಎಲ್ಲಿಗೆ ಯಾವ ಯಾವ ರೂಪ ಪಡೆಯುತ್ತದೆ ಎಂದು ಒಂದು ಸಣ್ಣ ಕಲ್ಪನೆ...


 

ಏನೋ ಮಗಾ..ಸರ್ಕಾರ ಬಿದ್ದೋಗತ್ತಂತೆ ಹೌದಾ?..ಹೇ ಇಲ್ಲ ಮಗಾ...ಇವರದೆಲ್ಲ ಡೌ ಗಳು...ಲಾಸ್ಟ್ ಟೈಮ್ ಹಿಂಗೆ ಅಗಿರ್ಲಿಲ್ವಾ...

ಅದೇ ಗಣಿಧಣಿಗಳು ಬೇರೆ ಹೋಗ್ತಿವಿ ಅಂದಾಗ ಕೊನೆಗೆ ಸುಷ್ಮಕ್ಕ ಬಂದು ರಾಜಿ ಮಾಡಿಸ್ಲಿಲ್ವ..ಇದು ಅಷ್ಟೇನೆ...ನೆನ್ನೆ ಅದ್ಯಾವನೋ ಆಚಾರ್ಯ ಅಂತಲ್ಲ

ಅವ್ನು ಬಿಟ್ಟು ಹೋಗ್ತೀನಿ ಅಂದಿದ್ದವ್ನು ಇವತ್ತು ನೋಡು ಆಗಲೇ ಇವರೇ ನಮ್ಮ ಮು.ಮಂ.ಗಳು ಅಂತಾನೆ...ಬರೀ ನಾಟಕ...

ನಾಟಕನಾ ಮಗಾ ಕೃಷ್ಣ ಸಂಧಾನ ನಾಟಕ ನೋಡಿದೆ ಮಗಾ ನೆನ್ನೆ ನಕ್ಕು ನಕ್ಕು ಸಾಕಾಗೋಯ್ತು...ಅದ್ರಲ್ಲಿ ಹಳ್ಳಿಯವರು ನಾಟಕ

ಮಾಡ್ತಾರೆ ಏನ್ ಮಜಾ ಗೊತ್ತ...ಅವ್ರ ಡೈಲಾಗ್ ಗಳಂತೂ ಸೂಪರ್...ಅದ್ರಲ್ ನೋಡ್ಬೇಕು ಮಗಾ ದುರ್ಯೋಧನ ಪಾರ್ಟು ಊರ್ ಗೌಡ ಹಾಕಿರ್ತಾನೆ..,

ಅವನ್ ಪಾರ್ಟು ನಮ್ ಕಿರ್ಲೋಸ್ಕರ್ ಸತ್ಯ ಅವ್ರು ಮಾಡಿದ್ದು...ಮಗಾ ಕಿರ್ಲೋಸ್ಕರ್ ಮುಚ್ಚೋಯ್ತಲ್ವಾ ಕಂಪನಿ...ಅದೇ ಜಾಗದಲ್ಲಿ ತಾನೇ "ಮೆಟ್ರೋ"

ಓಪನ್ ಆಗಿರೋದು...ಹೌದು ಆದ್ರೆ ಫುಲ್ ಕ್ಲೋಸ್ ಆಗಿಲ್ಲ...ಅರ್ಧ ಜಾಗ ಮೆಟ್ರೋ ಕಟ್ಟಿದ್ದಾರೆ...ಇನ್ನರ್ಧ ಜಾಗದಲ್ಲಿ ಅಪಾರ್ಟ್ ಮೆಂಟ್ಸ್ ಕಟ್ಟಿದ್ದಾರೆ...

ಅಲ್ವೋ ಬೆಂಗಳೂರಲ್ಲಿ ಅದೆಷ್ಟೋ ಅಪಾರ್ಟ್ ಮೆಂಟ್ ಗಳು ಖಾಲಿ ಇದೆ ಅಂತಿರ್ತಾರೆ ಆದರೂ ದಿನ ದಿನ ಹೊಸದು ಕಟ್ಟುತ್ತಾನೆ ಇರ್ತಾರೆ..ಯಾರದು ಅದು??

"ಮಂತ್ರಿ" ಅವರದು ಇರ್ಬೇಕು....ಮಗಾ ಮಲ್ಲೇಶ್ವರಂ ಸಂಪಿಗೆ ಥೇಟರ್ ಹತ್ರ ಮಂತ್ರಿ ಮಾಲ್ ಕಟ್ಟಿದ್ದಾರಂತೆ ನೋಡಿದ್ಯ...?? ಅದು ಏನೋ

ಭಾರತದಲ್ಲೇ ಅತೀ ದೊಡ್ಡದಂತೆ ಹೌದಾ?? ಅದೇನೋ ಗೊತ್ತಿಲ್ಲ ಮಗಾ ಆದ್ರೆ ಒಪೆನಿಂಗ್ ಸೂಪರ್ ಆಗಿತ್ತಂತೆ...ನಮ್ ಇಂಡಿಯನ್ ಟೀಂ ಅಲ್ಲಿ

ಒಪೆನಿಂಗ್ ಬ್ಯಾಟ್ಸಮನ್ ಸಚಿನ್ ಮತ್ತೆ ಶೇವಾಗ್ ಅದ ಮೇಲೆ ಈಗ ಗಂಭೀರ್ ಮತ್ತೆ ಶೇವಾಗ್ ಸೂಪರ್ ಆಗಿ ಆಡ್ತಾರೆ ಮಗ..ಅವರ ಥರ ಒಪೆನಿಂಗ್

ಯಾರು ಇಲ್ಲ ಬಿಡು ಮಗ...ಮೊದಲು ಕಳುವಿತರಣ , ಜಯಸೂರ್ಯ ಆಡ್ತಿದ್ರು...ಮಗ ವಿಷಯ ಗೊತ್ತಾಯ್ತ...ನಮ್ಮ ಜಯತೀರ್ಥಚಾರ್ ಹೋಗ್ಬಿಟ್ರಂತೆ...

ಮೊನ್ನೆ ಹರಿದ್ವಾರಕ್ಕೆ ಹೋಗಿದ್ರಂತೆ ಅಲ್ಲೇ ಹೋಗ್ಬಿಟ್ರಂತೆ... ಹರಿದ್ವಾರ ಏನು ಇಲ್ಲ ಮಗಾ...ಸಿಮ್ಲಾ ಲಿ ನೋಡ್ಬೇಕು ಏನ್ ಚಳಿ ಅಂತೆ ಗೊತ್ತ...ಯಾವಾಗಲೂ

ಸ್ವೆಟರ್ ಹಾಕೊಂಡೆ ಇರ್ತಾರಂತೆ ಜನ...ಆದ್ರೆ ಸ್ವಿಜರ್ಲ್ಯಾಂಡ್ ಅಷ್ಟು ಚಳಿ ಇರಲ್ವಂತೆ...ಒಂದು ಸಲ ವರ್ಲ್ಡ್ ಟೂರ್ ಹೊಡಿಬೇಕು ಮಗ...ಸಕತ್ತಾಗಿರುತ್ತೆ...

"I B N  World " ಚಾನೆಲ್ ಅಲ್ಲಿ ಎಲ್ಲ ನ್ಯೂಸ್ ಗಳು ಅವಗವಾಗ್ಲೆ ಹಾಕ್ತಾರಂತೆ ಹೌದಾ...ಹೇ ನಮ್ ಟಿ.ವಿ. ೯ ಅಲ್ಲಿ ಬಂದಮೇಲೆ ಇವರ ಹತ್ರ ಅವ್ರು

ಇಸ್ಕೊಂಡು ಹಾಕೋದು...ಟಿ.ವಿ. ೯ ಅಲ್ಲಿ ಹೀಗೂ ಉಂಟೆ ಅಂತ ಒಂದು ಪ್ರೋಗ್ರಾಮ್ ಬರತ್ತೆ ನೋಡಿದ್ಯ...ಎಂತೆಂಥ ವಿಚಿತ್ರ ತೋರಿಸ್ತರ್ರೆ ಗೊತ್ತಾ..

ಕೆಲವು ಸಲ ದೇವಸ್ಥಾನಗಳಲ್ಲಿ ನಡೆಯೋ ವಿಚಿತ್ರ ಎಲ್ಲ ತೋರಿಸ್ತಾರೆ...ತಮಿಳುನಾಡು ದೇವಸ್ಥಾನಗಳನ ನೋಡ್ಬೇಕು ಏನ್ ಸೂಪರ್ ಆಗಿರತ್ತೆ ಗೊತ್ತ...

ಅಲ್ಲಿ ಬಿಡಪ್ಪ ಸಿನಿಮಾ ನಟ ನಟಿಯರಿಗೂ ದೇವಸ್ಥಾನ ಕಟ್ಟುತ್ತಾರೆ...ಒಳ್ಳೆ ಸಿನಿಮಾ ಹೀರೋ ಆಗಬೇಕು ಮಗ...ಆದ್ರೆ ಕನ್ನಡದಲ್ಲಿ ಬೇಡ ತೆಲುಗು, ತಮಿಳು

ಅಥವಾ ಹಿಂದಿ ಲಿ ಆಗಬೇಕು...ಏನ್ ದುಡ್ಡು ಗೊತ್ತ...ಒಂದು ಸಿನಿಮಾ ಮಾಡಿದ್ರೆ ಕೋಟಿ ಕೋಟಿ ...ಮಗ ಇವರ ಹತ್ರ ಇರೋ ಕೋಟಿ ಗಳನ್ನೆಲ್ಲ ಕಿತ್ಕೊಂದ್ರೆ

ಇಂಡಿಯಾದ ಸಾಲ ತೀರಿಸ್ಬೋದು ಅಲ್ವಾ...ಎಲ್ಲಿ ಮಗ ಈ ರಾಜಕೀಯದವರು ಒಂದೊಂದು ಎಲೆಕ್ಷನ್ ಗೆ ಎಷ್ಟೆಷ್ಟೋ ಕೋಟಿ ಖರ್ಚು ಮಾಡ್ತಾರೆ...

ಆಮೇಲೆ ಸೀಟು ಉಳಿಸಿಕೊಳ್ಳಕ್ಕೆ ಎಷ್ಟು ಖರ್ಚು ಮಾಡ್ತಾರೆ...ಈಗ ನೋಡು ನಮ್ಮ ಸರ್ಕಾರ ಬೀಳತ್ತೆ ಅಂತಾರಲ್ಲ ಅಲ್ಲಿ ಎಷ್ಟು ಕೋಟಿ ಕೈ ಬದಲಾಗುತ್ತೋ ಯಾರಿಗೆ ಗೊತ್ತು....ಏನೋ ಮಗಾ..ಸರ್ಕಾರ ಬಿದ್ದೋಗತ್ತಂತೆ ಹೌದಾ?..ಹೇ ಇಲ್ಲ ಮಗಾ...ಇವರದೆಲ್ಲ ಡೌ ಗಳು...ಲಾಸ್ಟ್ ಟೈಮ್ ಹಿಂಗೆ ಅಗಿರ್ಲಿಲ್ವಾ....

 

ನಡೀ ಮಗಾ ಇವ್ರು ಹಣೆ ಬರಹ ಇಷ್ಟೇ...ಸುಮ್ನೆ ನಾವು ಯಾಕೆ ತಲೆ ಕೆಡಿಸ್ಕೋಬೇಕು