ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೋತಿಚೇಷ್ಟೆ

ಕೋತಿಚೇಷ್ಟೆ ಎಂಬ ನುಡಿಗಟ್ಟನ್ನು ಸೃಷ್ಟಿಸಿದ್ದು ನಾನಲ್ಲ. ಯಾರೋ ಪೂರ್ವಜರು, ತಮ್ಮ ಮಕ್ಕಳನ್ನೋ ಮೊಮ್ಮಕ್ಕಳನ್ನೋ ಸುಧಾರಿಸಲು ಕಷ್ಟವಾದಾಗ, ತಮ್ಮ ಪೂರ್ವಜರನ್ನು ನೆನೆದು, ಈ ನುಡಿಗಟ್ಟನ್ನು ಸೃಷ್ಟಿಸಿರಬೇಕು. ತಮ್ಮ ಕಂದಮ್ಮಗಳಮೇಲಿನ, ಹಾಗೂ, ತಮ್ಮ ಆ ಪೂರ್ವಜರಮೇಲಿನ ಪ್ರೀತಿಯಿಂದಲೇ ಈ ನುಡಿಗಟ್ಟನ್ನವರು ಹುಟ್ಟುಹಾಕಿರುತ್ತಾರೆಂಬುದು ನನ್ನ ಅಚಲ ನಂಬಿಕೆ. ಪರಂಪರಾನುಗತವಾಗಿ ಬಳಕೆಯಲ್ಲಿ ಬಂದಿರುವ ಈ ವಿಶೇಷಪದವನ್ನು ಎಲ್ಲರಂತೆಯೇ ನಾನೂ ಬಳಸುತ್ತಿದ್ದೇನೆ ಅಷ್ಟೆ. ಆದಾಗ್ಗ್ಯೂ, ಅಣೋರಣೀಯನೂ ಮಹತೋ
ಮಹೀಯನೂ ಆಗಿರುವ ಮುಖ್ಯಪ್ರಾಣನ (ಪ್ರಾಣಿ)ರೂಪವನ್ನು ಈ ರೀತಿ ಲಘುವಾಗಿ ಬಳಸಿಕೊಳ್ಳುತ್ತಿರುವುದಕ್ಕಾಗಿ ಆ ಸ್ವಾಮಿಯಲ್ಲಿ ಮಾಫಿ ಮಾಂಗುತ್ತೇನೆ. ಆಂಜನೇಯಾ, ಕ್ಷಮಿಸೆನ್ನನು.

ಇಷ್ಟಕ್ಕೂ, ಈ "ಕೋತಿಚೇಷ್ಟೆ" ಎಂಬ ನುಡಿಗಟ್ಟನ್ನು ನಾನು ನನ್ನ ಮಕ್ಕಳಮೇಲೋ ಮೊಮ್ಮಕ್ಕಳಮೇಲೋ ಇನ್ನಾರಮೇಲೋ ಆರೋಪಿಸುತ್ತಿಲ್ಲ. ಅಸಲಿಗೆ, ನರರ ಕುರಿತು ಅಲ್ಲವೇಅಲ್ಲ ನನ್ನೀ ಬರಹ (ಆರೋಪ). ವಾನರರ ಕುರಿತಾದುದು ಈ ನನ್ನ ಕೊರೆತ! ಆದ್ದರಿಂದ, ಈ ಬರಹದ ತಲೆಬರಹವಾಗಿ "ಕೋತಿಚೇಷ್ಟೆ" ಓಕೆ; ಹಿಂಜರಿಕೆ ಯಾಕೆ? ಅಲ್ವಾ?

ಮುಂಬೈ ಮೇರಿ ಜಾನ್- ಒಳ್ಳೆಯ ಸಿನಿಮ - ಸಿಕ್ಕರ ನೋಡ್ರಿ

ಈ ಸಿನಿಮಾ ಈಗೀಗ ಟೀವಿಯಲ್ಲಿ ಬರುತ್ತ ಇದೆ. ಮೊನ್ನೆ ಕಲರ್ಸ್ ಚಾನೆಲ್ಲಿನಲ್ಲೋ ಮತ್ತೆಲ್ಲೋ ಬರುತ್ತ ಇತ್ತು. ನೋಡಿದೆ. ಮತ್ತೆ ಬಂದೀತು . ಗಮನಕ್ಕೆ ಬಂದರೆ ನೋಡಿ.

ಕೊರತೆಯಲೂ ಕಾಣುವ ಹೊಳಪು



ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರುತಾ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

ಅರಮನೆಯ ನಗರಿಯ ಅರಗಿಣಿಯು ನೀನು.

ಅರಮನೆಯ ನಗರಿಯ ಅರಗಿಣಿಯು ನೀನು.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ನೀನು, ಎಲ್ಲಿರುವೆ ನೀನು. || ಪಲ್ಲವಿ ||

ಮುತ್ತ೦ಥ ಅಕ್ಷರಗಳು ಪದವಾಗಿ ಕೂಡಿ,
ಸು೦ದರದ ಸವಿ ಕವಿತೆಯ ಬರೆದಿದ್ದೆ.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ಹಾಡುತಾ, ಎಲ್ಲಿರುವೆ ಹಾಡುತಾ, || ೧ ||

ರೆಕ್ಕೆಗಳ ಬೇಡುವೆ ದೇವರಿಗೆ ಕೊಡು ಎ೦ದು,
ನಿನ್ನೊಡನೆ ಹಾರಿ ಮೈಸುರ ನೋಡಲು.

ಶಿರಾಡಿ ಘಾಟಿಯಲ್ಲಿ ಒಂದು ರಾತ್ರಿ ಪ್ರಯಾಣ

ಮತ್ತೊಂದು ಬಾರಿ ಶಿರಾಡಿ ಘಾಟಿ ತಾತ್ಕಾಲಿಕವಾಗಿ ದುರಸ್ತಿಗೊಂಡಿದೆ. ಏಪ್ರಿಲ್ ೨೯, ೨೦೦೯ರಂದು ಐರಾವತ ಬಸ್ಸಿನಲ್ಲಿ ಊರಿಗೆ ಹೊರಟೆನು. ರೈಲು ಟಿಕೆಟು ಸಿಗದಿದ್ದ ಕಾರಣ ಬಸ್ಸು ಹಿಡಿಯಬೇಕಾಯೊತು. ೩೦ಕ್ಕೆ ಮತ ಹಾಕಲೆಂದೆ ರಜ ಹಾಕಿದ್ದೆ. ಮೊದಲ ಬಾರಿ ಮತ ಚಲಾಯಿಸುವ ಅನುಭವ. ಬಸ್ಸು ನಿಗದಿತ ಸಮಯಕ್ಕೆ ಹೊರಟು ಜಾಲಹಳ್ಳಿ ಕ್ರಾಸಿಗೆ ಬಂದಾಗ ನನಗೆ ಆಶ್ಚರ್ಯವಾಯಿತು.

ಸಿಲಿಕಾನ್ wafer

ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆಯಂತೆ ಇವರಿಗೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆ ಅನ್ನಬಹುದು. ಇದರ ಬಗ್ಗೆ ನನ್ನೆರಡು ಮಾತು.

ಕೂಡದೆರಡು ಧ್ರುವಗಳು

ಕೂಡದೆರಡು ಧ್ರುವಗಳು
ಒಂದನೊಂದು ಬಯಸಿದರೂ,
ಮಧ್ಯದ ಭುವಿಯ ದಾಟಲಾಗಲಿಲ್ಲ
ಆದರೂ ಅವು ಪ್ರೀತಿಸುವುದ ಬಿಡಲಿಲ್ಲ

ತುಂಬಾ ದಿನಗಳಿಂದ ನನ್ನ ಮನೆ ಮನಗಳನ್ನು ತುಂಬಿರುವ ಕವಿತೆ, ರವಿಯವರಿಗೆ ಹಸಿರು ಲಂಗದ ಹುಡುಗಿ ನೆನಪಿಗೆ ಬಂದಂತೆ ನನಗೆ ನನ್ನ ಹುಡುಗಿ ನೆನಪಿಗೆ ಬಂದಂತೆ ನಿಮಗೂ ಯಾರಾದರೂ ನೆನಪಿಗೆ ಬಂದರೆ ಈ ಕವಿತೆ ಇಷ್ಟವಾದೀತು.
--ನರೇಂದ್ರ

ಪ್ರವಾಸಕಥನ - WERFEN ಹಿಮ ಗುಹೆಗಳು

ಕಳೆದ ಶುಕ್ರವಾರ ಆಫೀಸಿಗೆ ರಜೆ ಇತ್ತು. ಹಾಗಾಗಿ ನಾನು ಮತ್ತು ನಮ್ಮ ಸಹೋದ್ಯೋಗಿಗಳು ದಕ್ಷಿಣ ಜರ್ಮನಿ (Bavaria) ಕಡೆ ಒಂದು ಟೂರ್ ಹಾಕಿದ್ವಿ.
ಮೊದಲು ಮ್ಯೂನಿಕ್, ಅಲ್ಲಿಂದ ಸಾಲ್ಸ್ ಬರ್ಗ್ (ಆಸ್ಟ್ರಿಯ), ಹಾಗು Neuschwanstein Castle ಗೆ ಹೋಗಿದ್ವಿ. ಮ್ಯೂನಿಕ್ಕಿನಲ್ಲಿ ನಗರ ಪ್ರದಕ್ಷಿಣೆ, ಒಲಂಪಿಕ್ ಪಾರ್ಕ್, ಟವರ್, BMW ಮ್ಯೂಸಿಯಂ ನೋಡಿ ಬಂದ್ವಿ.