ಅರಮನೆಯ ನಗರಿಯ ಅರಗಿಣಿಯು ನೀನು.

ಅರಮನೆಯ ನಗರಿಯ ಅರಗಿಣಿಯು ನೀನು.

ಅರಮನೆಯ ನಗರಿಯ ಅರಗಿಣಿಯು ನೀನು.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ನೀನು, ಎಲ್ಲಿರುವೆ ನೀನು. || ಪಲ್ಲವಿ ||

ಮುತ್ತ೦ಥ ಅಕ್ಷರಗಳು ಪದವಾಗಿ ಕೂಡಿ,
ಸು೦ದರದ ಸವಿ ಕವಿತೆಯ ಬರೆದಿದ್ದೆ.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ಹಾಡುತಾ, ಎಲ್ಲಿರುವೆ ಹಾಡುತಾ, || ೧ ||

ರೆಕ್ಕೆಗಳ ಬೇಡುವೆ ದೇವರಿಗೆ ಕೊಡು ಎ೦ದು,
ನಿನ್ನೊಡನೆ ಹಾರಿ ಮೈಸುರ ನೋಡಲು.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ಹಾರುತಾ, ಎಲ್ಲಿರುವೆ ಹಾರುತಾ, || ೨ ||

ಚಿನ್ನದಾ ಕಾಲ್ಗೆಜ್ಜೆ ಕೈಯಲ್ಲಿ ಹಿಡಿದು,
ಅರಮನೆಗಳ ಸುತ್ತಿದೆ ನಿನ್ನಯ ಹುಡುಕುತ.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ಕುಣಿಯುತಾ, ಎಲ್ಲಿರುವೆ ಕುಣಿಯುತಾ. || ೩ ||

ನನಗಾದ ಆನ೦ದಕೆ ನಕ್ಷತ್ರಗಳು ನಲಿದಿವೆ,
ಮಿನುಗುತಾರೆಗೆ ತಿಳಿಸಳು ಕಾತುರದಿ ಕಾದೆ.
ಅರಮನೆಯ ನಗರಿಯ ಅರಗಿಣಿಯು ನೀನು.
ಎಲ್ಲಿರುವೆ ನಲಿಯುತಾ, ಎಲ್ಲಿರುವೆ ನಲಿಯುತಾ. || ೪ ||

ಇರುಳು ಕನಸಲಿ ಬ೦ದೆ,ಹಗಲು ನನಸಲಿ ಬ೦ದೆ,
ನನಸಾಗುವ ಹಾದಿಯಲ್ಲಿ ಒ೦ಟಿ ಪಯಣಿಗನಾದೆ.
ಅರಮನೆಯ ನಗರಿಯ ಅರಗಿಣಿಯು ನೀನು.
ಹೆಜ್ಜೆಗೆ ಹೆಜ್ಜೆ ಸೇರಿಸಿ, ಎನ್ನಬಾರದೆ ನೀನು,
ಇಲ್ಲಿರುವೆ ನಾನು, ನಿನ್ನೊಡನೆ ನಾನು. || ೫ ||

----------------------------
ರಚನೆ: ಅನ೦ತಶಯನ. ಸ೦ಜೀವ.

Rating
No votes yet

Comments