ಸಿಲಿಕಾನ್ wafer

ಸಿಲಿಕಾನ್ wafer

ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆಯಂತೆ ಇವರಿಗೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆ ಅನ್ನಬಹುದು. ಇದರ ಬಗ್ಗೆ ನನ್ನೆರಡು ಮಾತು.

ನಾವು ಚಿಕ್ಕವರಾಗಿದ್ದಾಗ ಯರೆ ಮಣ್ಣಿನಲ್ಲಿ ಗಾಲಿ ಮಾಡಿಕೊಂಡು ಆಟ ಆಡ್ತಾ ಇದ್ವು. ಆ ಗಾಲಿಯ ತರದ, ದುಂಡಗೆ ಇರುವ, ಸಿಲಿಕಾನ್ ಅನ್ನುವ ಅರೆವಾಹಕ ವಸ್ತುವಿನಿಂದ ಮಾಡಿದ ವಸ್ತುವೇ ಈ wafer.  ಇಂತ ವೇಫರ್ಗಳಲ್ಲೇ ನಾವು IC / ಚಿಪ್ಪುಗಳನ್ನು ಎರಕ ಒಯ್ಯುವುದು. ಫೋಟೋದಲ್ಲಿ ನೋಡಿ ಗೊತಾಗುತ್ತೆ.


Silicon Wafer

ಈ wafer ಅನ್ನುವುದು ಅಪ್ಪಟ ಸಿಲಿಕಾನ್ ವಸ್ತು. ೨೪ ಕ್ಯಾರೆಟ್ ಗೋಲ್ಡ್ ಅಂತೀವಲ್ಲ...ಅಂತಾದ್ದು. ಇದಕ್ಕೆ ಕೆಲವು ವಸ್ತುಗಳನ್ನು ತುರುಕಿ ಮತ್ತೆ ಕೆಲವನ್ನು ಸವರಿ ನಂತರ ಕೆರೆದು ಕತ್ತರಿಸಿ ಪ್ಯಾಕ್ ಮಾಡಿಯೇ   ಕೆಲಸ ಮಾಡುವಂತಹ ಚಿಪ್ಪುಗಳನ್ನು ನಾವು ಪಡೆಯುವುದು. :)

 

ಸಾಮಾನ್ಯವಾಗಿ ಈ ವೇಫರ ರೂಪ ಯರೆ ಮಣ್ಣಿನ ಗಾಲಿಯಂತೆ ದುಂಡಗೆ ಇರುತ್ತೆ. ಕಾರಣ ...ಇದನ್ನು ಉತ್ಪಾದಿಸುವಾಗ ಇದನ್ನು ತಿರುಗಿಸಬೇಕಾಗುತ್ತೆ. ದುಂಡಾಗಿದ್ದರೆ ಅದು ತುಂಡಾಗುವ ಸಾಧ್ಯತೆಗಳು ಬಹಳ ಕಡಿಮೆ. ಮತ್ತು ಒಂದು ಕೊಟ್ಟಿರುವ ಗಾತ್ರಕ್ಕೆ ಹೆಚ್ಚಿನ ಅಚ್ಚು / die ಗಳು ದುಂಡಗಿನ wafer ನಲ್ಲಿ ಬರುತ್ತವೆ.      

 

ಇಲ್ಲಿ ಭಾರತದಲ್ಲಿ ಚಿಪ್ಗಳನ್ನು fabricate ಮಾಡುವಂತಹ ಕುಲುಮೆ / foundry  ಇರುವುದು ಚಂಡಿಘಡ ದಲ್ಲಿ ಮಾತ್ರ. ( BEL ನಲ್ಲಿ ಇದೆ ಅಂತಾರೆ .. ಆದ್ರೆ ಅದು ತುಂಬಾ ಚಿಕ್ಕದ್ದು....8 ಮೈಕ್ರೋನ್ ಟೆಕ್ನಾಲಜಿ ಅಂತಾರೆ.. ಸರಿಯಾಗಿ ಗೊತ್ತಿಲ್ಲ.)    ಈ SCL ( semiconductors Complex Ltd.) ಕ್ಯಾಂಪಸ್ ನಲ್ಲಿ ಒಂದಾರು ತಿಂಗಳು ಟ್ರೇನಿಂಗ ಪಡೆಯಲು ಸಾಧ್ಯವಾಗಿದ್ದು ನನ್ನ ಅದೃಷ್ಟವೆಂದೇ ನಾನು ಅಂದುಕೊಳ್ಳುತ್ತೇನೆ.

 

SCL ಕೆಲವು ವರ್ಷಗಳಿಂದ  ಇದು ಇಸ್ರೋ ಅಧೀನದಲ್ಲಿದೆ. SCL ನಲ್ಲಿ ಅನಾಲಾಗ್ ರೀತಿಯ ವಿನ್ಯಾಸಗಳಿಗೆ ೧.೨ ಮೈಕ್ರಾನ್ ತಂತ್ರ ಜ್ಞಾನವನ್ನೂ,  ಡಿಜಿಟಲ್ ರೀತಿಯ ವಿನ್ಯಾಸಗಳಿಗೆ ೦.೮ ಮೈಕ್ರಾನ್ ತಂತ್ರ ಜ್ಞಾನವನ್ನೂ  ಈಗ ಬಳಸುತ್ತಿದ್ದಾರೆ. ಅನೇಕ MNC ಗಳು 32nm, 22nm ಅಂತ  ತುಂಬಾ  ಸೂಕ್ಷ್ಮ ತಂತ್ರಜ್ಞಾನಕ್ಕೆ ಇಳಿಯುತ್ತಿರುವಾಗ  ಕೆಂದ್ರ ಸರ್ಕಾರದ, Dept.of Space ಅಧೀನದ , ಅದೂ ಭಾರತದ ಏಕ ಮಾತ್ರ ಫೌಂಡ್ರಿ ...ಏನಪ್ಪಾ ಇನ್ನೂ ಹಳೆಯ ಕಾಲದಲ್ಲಿದೆ ಅಂತೀರ?!... ಇರಲಿ ಬಿಡಿ ನಮ್ಮಲ್ಲಿ ಅಷ್ಟಾದ್ರೂ ಇದೆಯಲ್ವ?!   

 

ಹಾ... ಕೊನೆ ವರ್ಷದ ವರೆಗೂ,  ಹೈದರಾಬಾದಿನಲ್ಲಿ ಒಂದು ಫ್ಯಾಬ್ ಮಾಡ್ಬೇಕು ಅಂತ ತುಂಬಾ ಯೋಚನೆ ನಡೀತಾ ಇತ್ತು. ಅದು ನಿಂತು ಹೋದಂತೆ ಕಾಣುತ್ತೆ.   

 

ಇಲ್ಲಿ SCL ನಲ್ಲಿ ಚಿಪ್ಗಳನ್ನು fabricate ಮಾಡ್ತಾರೆ ನಿಜ. ಆದ್ರೆ ಅವರೂ ಸಹಾ ಈ ಸಿಲಿಕಾನ್ wafer ಗಳನ್ನೂ ಹೊರಗಡೆಯಿಂದ ಆಮದು ಮಾಡಿಕೊಳ್ಳುತ್ತಾರೆ. ಕಾರಣ ಈ ಸಿಲಿಕಾನ್ wafer ನ ಉತ್ಪಾದನಾ ವೆಚ್ಚ! ಅದು ಅಷ್ಟೊಂದು ಕಾಸ್ಟ್ಲಿ!

 

ಚಿತ್ರ ಕೃಪೆ: ವಿಕಿಪೀಡಿಯ     

Rating
No votes yet