ಕೊರತೆಯಲೂ ಕಾಣುವ ಹೊಳಪು

ಕೊರತೆಯಲೂ ಕಾಣುವ ಹೊಳಪು



ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರುತಾ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಮಣಿ ಶಾಣೋಲ್ಲೀಢಃ ಸಮರವಿಜಯೀ ಹೇತಿದಲಿತೋ
ಮದಕ್ಷೀಣೋ ನಾಗ: ಶರದಿ ಸರಿತಾಶ್ಯಾನಪುಲಿನಾ |
ಕಲಾಶೇಷಶ್ಚಂದ್ರಃ ಸುರತಮೃದಿತಾ ಬಾಲವನಿತಾ
ಸನಿಮ್ನಾ ಶೋಭಂತೇ ಗಲಿತವಿಭವಾಶ್ಚಾರ್ಥಿಷು ನರಾಃ ||

मणिः शणोल्लीढः समरविजयी हेतिदलितो
मदक्षीबो नागः शरदि सरिताश्यानपुलिना ।
कलाशेषश्चन्द्रः सुरतमृदिता बालवनिता
सनिम्ना शोभन्ते गलितविभवाश्चार्थिषु नराः ॥

-ಹಂಸಾನಂದಿ

(ಕೊ: ಈ ಸುಭಾಷಿಯ ಹಲವು ದಿನದಿಂದ ಮನದಲ್ಲಿ ಓಡಾಡುತ್ತಿದ್ದರೂ, ಇದನ್ನು ಸಮರ್ಥವಾಗಿ ಅನುವಾದಿಸಲು ಸಾಧ್ಯವೇ? ಎಂಬ ಪ್ರಶ್ನೆ ಕಾಡುತ್ತಿದ್ದಾಗಿ ಬರೆಯದೇ ಹೋಗಿದ್ದೆ. ಇವತ್ತು ಏನೋ ಪದಗಳ ತಕ್ಕಡಿ ಒಂದು ಕಡೆ ಓಲಿದಂತಾಗಿ ಬರೆದುಬಿಟ್ಟಿದ್ದೇನೆ)

(ಕೊ.ಕೊ: ಈ ಪದ್ಯಕ್ಕೆ ಇದಕ್ಕಿಂತ ಒಳ್ಳೇ ಅನುವಾದಗಳಿಕೆ ಸ್ಫೂರ್ತಿಯಾಗಲಿ ಅಂತ ಈಗ ನನ್ನ ಅನುವಾದವನ್ನ ಪೋಸ್ಟ್ ಮಾಡಿದ್ದೇನೆ, ಅಂತ ಬಿಡಿಸಿ ಹೇಳೋ ಅಗತ್ಯ ಇಲ್ಲ ತಾನೇ? ಮಾಯ್ಸ, ಬೆನಕ, ರವೀಂದ್ರ ಸುಬ್ರಹ್ಮಣ್ಯ ಕಶ್ಯಪ, ಸವಿತೃ... ಮತ್ತೆ ಇನ್ಯಾರ್ಯಾರು ಓದ್ತಿದೀರೋ ಸ್ವಲ್ಪ ಕೈಹಾಕಿ :)

 

Rating
No votes yet

Comments