ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಜಿಲ್ಲೆಗಳ ಹಿಂದೂ ಮತಾಂಧತೆ?

ನಮ್ಮ ಕನ್ನಡ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ತಮ್ಮ ಮತಾಂಧತೆಗಾಗಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕಾಗಿ ರಾಷ್ಟ್ರವ್ಯಾಪಿ ಟೀಕೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತ ಇತಿಹಾಸ ವರ್ತಮನಗಳನ್ನೊಮ್ಮೆ ಕೆದಕಿ ಬರೆದ ಒಂದು ವಿಶ್ಲೇಷಣೆ.

ನಾನು ದೇವ್ರ ಪೋಸ್ಟಿಗೆ ರಿಸೈನ್ಮಾಡ್ರಾಜೀನಾಮೆ ಸಲ್ಸ್ತಿದೀನಿ!

ಅಯ್ಯಪ್ಪಾ .. ಸಾಕಾಯ್ತು. ನಮ್ಬಂಧುಗಳು ಫುಲ್ಲು ಚರ್ಚೆ ಮಾಡಿದ್ದೇ ಮಾಡಿದ್ದು. ದೇವ್ರಿದಾನೆ/ಇಲ್ಲ, ಧರ್ಮ-ದೇವ್ರು ಏನ್ಲಿಂಕು ಅಂತ ...

ನಡ್ಯೋಕಿಲ್ಲಾ ಸಿದ್ದಾ, ಇನ್ನ್ನಡ್ಯೋಕಿಲ್ಲಾ ... ಇನ್ನ್ತಡ್ಕಳಕಾಗಕ್ಕಿಲ್ಲ ... :D

ದೋಣಿಯಾಟ

ನಾನು ಮೊನ್ನೆಯಷ್ಟೇ ರಬಿಂದ್ರನಾಥ್ ಟ್ಯಾಗೋರರ “ಆಟಿಕೆಗಳು” ಕವನವನ್ನು ಅನುವಾದಿಸಿ ಸಂಪದದಲ್ಲಿ http://sampada.net/article/16673 ಪ್ರಕಟಿಸಿದ್ದೆ ಕೂಡ. ಈಗ ಅವರದೇ ಇನ್ನೊಂದು ಕವನ “ಕಾಗದದ ದೋಣಿಗಳು” ನ್ನು ಅನುವಾದಿಸಲು ಕೈಗೆತ್ತಿಕೊಂಡಂತೆ ಕವನದೊಂದಿಗೆ ನನ್ನ ಬಾಲ್ಯದ ನೆನಪುಗಳು ಮೆಲ್ಲಮೆಲ್ಲಗೆ ಹೊರಬಂದು ಗರಿ ಬಿಚ್ಚಿ ಕುಣಿಯತೊಡಗಿದವು. ಕವನದ ಒಳಸತ್ವವನ್ನು ಹೀರಿ ಅನುವಾದಿಸಲು ಮತ್ತೆ ಮತ್ತೆ ಓದುತ್ತಾಹೋದಂತೆ “ಅರೆ, ಹೌದಲ್ಲ! ಇದು ನಾನೇ. ನನ್ನದೇ ಆಟ. ನಾನೂ ಹೀಗೆ ಆಡುತ್ತಿದ್ದೆನಲ್ಲ?” ಎಂದೆನಿಸತೊಡಗಿತು. ಕವಿಯ ಬಾಲ್ಯದ ನೆನಪುಗಳಿಗೂ, ನನ್ನ ಬಾಲ್ಯದ ನೆನಪುಗಳಿಗೂ ಎಷ್ಟೊಂದು ಸಾಮ್ಯ! ನನಗೊಬ್ಬನಿಗೆ ಏನು? ನನ್ನಂತೆ ಹಳ್ಳಿಗಾಡಿನಲ್ಲಿ ಬೆಳೆದ ಬಹಳಷ್ಟು ಜನಕ್ಕೆ ಇದೆ ತರದ ಅನುಭವಗಳು, ನೆನಪುಗಳು ಇರಲಿಕ್ಕುಂಟು! ಈ ಮಳೆ, ಕಾಗದದ ದೋಣಿ, ನದಿಗಳೊಂದಿಗೆ ತೆರೆದುಕೊಳ್ಳುವ ನೆನಪುಗಳನ್ನು ಸುಮ್ಮನೆ ಬೆನ್ನಟ್ಟಿಹೋದೆ. ಅಲ್ಲಿ ಏನೇನೆಲ್ಲ ಇತ್ತು? ಒಂದಷ್ಟು ಹುಡುಗು ಮನಸ್ಸಿನ ಮಧುರ ಕಲ್ಪನೆಗಳಿದ್ದವು, ಕನಸುಗಳಿದ್ದವು ಹಾಗೂ ಸಮುದ್ರವನ್ನು ಹೋಗಿ ಸೇರಲೇಬೇಕೆಂಬ ವಾಸ್ತವ ಭ್ರಮೆಯ ಗುರಿಯಿತ್ತು. ಇದರ ಬೆನ್ನಹಿಂದೆಯೇ ವಿವಿಧ ರೂಪಗಳಲ್ಲಿ ಬಂದೆರಗುವ ನಿರಾಶೆಗಳಿದ್ದವು, ನುಚ್ಚುನೂರಾದ ಕನಸುಗಳಿದ್ದವು, ಸೋಲಿನ ವಿಷಾದವಿತ್ತು ಹಾಗೂ ಇದೆಲ್ಲವನ್ನು ತೆಕ್ಕೆಗೆ ತೆಗೆದುಕೊಂಡು ಮತ್ತದೇ ಕನಸುಗಳನ್ನು ಬೆನ್ನಟ್ಟಿ ಗೆದ್ದೇತೀರುತ್ತೇನೆಂಬ ಛಲವೂ ಇತ್ತು.

ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನದಲ್ಲಿ ಏಕೆ ಪ್ರವೇಶ ಮಾಡಬೇಕು ?

‘ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನದಲ್ಲಿ ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು.

ನಿಮಗಾಗಿ.....

ನಿನ್ನೆಯಲಿಹ ಪುಣ್ಯ ಫಲವು
ನನ್ನಿಯಲಿ ನಿಮ್ಮ ತೋರಿ
ಹತ್ತನೂರು ಮಾತನಾಡಿ
ಮನವ ಗೆದ್ದಿದೆ....

ಹೊಸ ಸದಸ್ಯಳಾದ ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿದ ಸಂಪದಿಗರೆಲ್ಲರಿಗೆ ಈ ಪುಟ್ಟ ಪದ್ಯ...
ದಯವಿಟ್ಟು ಇದನ್ನು ಮುಂದುವರಿಸಿ....

ನನ್ನಿ
ದೃಶ್ಯ ಪ್ರದೀಪ :)

ನಿದ್ರೆಯಲ್ಲಿ ಓಡಾಡುವ, ಮಾತನಾಡುವ ಅಭ್ಯಾಸವಿದೆಯೇ?


ನಿದ್ರಾ ನಡಿಗೆಯು ಒಂದು ರೀತಿಯ ನಿದ್ದೆಯ ವಿಕಾರವಾಗಿದೆ. ಇದರಲ್ಲಿ ರೋಗಿಯು ನಿದ್ದೆಯಲ್ಲಿದ್ದಾಗ
ಅಥವಾ ಅರೆನಿದ್ದೆಯಲ್ಲಿದ್ದಾಗ ಜಾಗೃತಾವಸ್ಥೆ ಯಲ್ಲಿದ್ದಂತಹ ಕಾರ್ಯಗಳನ್ನು
ಮಾಡತೊಡಗುತ್ತಾನೆ.

ಅಜ್ಜಿಯರ ಪಿಡ್ಜಾ (ಗ್ರಾನೀಸ್ ಪಿಡ್ಜಾ)

ಹೀಗೆ ವೀಕ್ ಮ್ಯಾಗಝೀನ್ ಓದ್ತಿದ್ದೆ. ಅದರಲ್ಲಿ ಇದನ್ನು ಓದಿದಾಗ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು. ಅನುವಾದಿಸಿದ್ದೇನೆ. ತಪ್ಪಿದ್ದರೆ ಕ್ಷಮಿಸಿ :-)

ಅಶೋಕ ಚಕ್ರವರ್ತಿ ಕಲಿಯುಗ ಇವುಗಳ ಅರಿವು ವೇದವ್ಯಾಸರಿಗೆ ಮೊದಲೇ ಅರಿವಿತ್ತು

ಇಂದು ಭಾಗವತದ ಹನ್ನೆರೆಡನೆ ಸ್ಕಂದ ಓದಿದೆ.
ಶುಕ ಮಹರ್ಷಿಗಳು ಪರೀಕ್ಷಿತ ರಾಜನಿಗೆ ಕೃಷ್ಣನ ಇಹಲೋಕ ತ್ಯಾಗದ ನಂತರ ಏನಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ಹೇಳಿದ್ದಾರೆ.
ಕಂಸನ ಮಾವ ಜರಾಸಂಧನ ವಂಶಜ ರಿಪುಂಜಯನ ನಂತರ ಅವನ ಮಂತ್ರಿ ಶುನಕನ ಪುತ್ರ ಪ್ರದ್ಯೋತ , ನಂತರ ಅವನ ಮಗ ಪಾಲಕ, ಹೀಗೆ ವಂಶ ವೃಕ್ಷ ಬೆಳೆದು

ಸಿಲ್ಲಿ ಪ್ರಶ್ನೆ !

ಮೂರು ಮನೆಗಳು! ಅಕ್ಕ ಪಕ್ಕ!

ಒಂದರಲ್ಲಿ ಚಿನ್ನದ ಕಾಯಿನ್ ಗಳು
ಎರಡನೆಯದರಲ್ಲಿ ನೋಟಿನ ಕಂತೆಗಳು! ( ಡಾಲರ್  ಅಲ್ಲ ಸ್ವಾಮಿ .. ರುಪಾಯಿ ಕಟ್ಟುಗಳು!) ಮೂರನೆಯದರಲ್ಲಿ ಹತ್ತಿ ಚೀಲಗಳು.

 

ಏನಾಯ್ತೋ ಏನೋ?! ಇದ್ದಕ್ಕಿದ್ದಂತೆ ಮೂರೂ ಮನೆಗಳಿಗೆ ಬೆಂಕಿ ಬೀಳುತ್ತೆ. ( ಯಾರು  ಮಾಡಿದ್ದು ಅಂತ ಗೊತ್ತಿಲ್ಲ , ಕೇಳಬೇಡಿ! ;)  )

ಸ೦ತೋಷ

ಈ ಜಗತ್ತಿನಲ್ಲಿ ಹರಿದು ಹ೦ಚಿದಷ್ಟೂ ಹತ್ತುಪಟ್ಟು ಹೆಚ್ಚಾಗುವ ವಸ್ತು ಎ೦ದರೆ ಸ೦ತೋಷ ಮಾತ್ರ