ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿನ್ನೆಯಷ್ಟೇ ಕಣ್ಣು ಬಿಟ್ಟ ಬಿಳಿ ಹಾವು ಮರಿಗಳು

ಬಿಳಿ ಹಾವುಗಳು ಅಪರೂಪದ್ದು ಎಂದು ಹರ್ಷ ಬರೆದ ಕೆಲವೇ ದಿನಗಳಲ್ಲಿ ಮತ್ತೊಂದು ಚಿತ್ರ ನನ್ನ ಮೇಯ್ಲ್ ಬಾಕ್ಸ್ ಸೇರಿತು. ಇವತ್ತು ಡಾ. ಐತಾಳರು ನಾಲ್ಕು ಆಲ್ಬೀಗಳ ಚಿತ್ರ ಕಳುಹಿಸಿದ್ದಾರೆ. ಈ ಹಾವಿನ ಮರಿಗಳು ಇವತ್ತಷ್ಟೇ ಹೊರಜಗತ್ತಿಗೆ ಕಾಲಿಟ್ಟ ವಿಷಯ ತಿಳಿಸುತ್ತ ನಾಳೆ ಇದನ್ನು ಅದು ಇನ್ನು ಜೀವಿಸಬಲ್ಲ ಒಂದು ಜಾಗಕ್ಕೆ ಬಿಟ್ಟುಬಿಡುತ್ತೇವೆ ಎಂಬ ಸುದ್ದಿಯನ್ನೂ ಮುಟ್ಟಿಸಿದರು ಡಾ. ಐತಾಳರು.
ಹೀಗೆ ನಾಲ್ಕು Albino ಹಾವುಗಳು ಒಟ್ಟಿಗೇ ಹುಟ್ಟುವುದ ಕಾಣುವುದು ಅಪರೂಪವಂತೆ. ಇವು ನೀರು ಹಾವುಗಳು.
Albino Snakes - Photo Credits: Dr. Aithal

ಡಬ್ಲ್ ಸೆಂಚುರಿ ಹೊಡೆದ ಅಶೋಕ್ ಸಂದರ್ಶನ

ಅಶೋಕ್ ಡಬಲ್ ಸೆಂಚುರಿ ಹೊಡೆದು ತ್ರಿಬ್‌ಲ್ಸೆಂಚುರಿಗೆ ಮುನ್ನುಗ್ಗುತ್ತಿದ್ದಾರೆ..
ನಾನೇ ಮೊದಲು ಅವರ ಸಂದರ್ಶನ ತೆಗೆದುಕೊಂಡರೆ ಹೇಗೇ.. ಅನಿಸಿತು.

ಫೋನ್ ಮಾಡಿ ಕೇಳಿದೆ. ಮೊದಲ ಪತ್ರಿಕೆ ಬಂದು ಬೀಳುವ ಮೊದಲೇ ಬಂದರೆ ಮಾತ್ರ ಸಂದರ್ಶನ ಕೊಡುವೆ ಅಂದರು.

ಗೂಗಲ್ ನಲ್ಲಿ ತಪ್ಪು ತಪ್ಪಾದ ಕನ್ನಡ

ಸಮುದಾಯ ಅನುವಾದ ವ್ಯವಸ್ಥೆಯನ್ನು ಬಳಸುತ್ತಿರುವ ಗೂಗಲ್ ಕನ್ನಡ ಅನುವಾದದಲ್ಲಿ ಹಲವು ತಪ್ಪುಗಳು ಗಮನಕ್ಕೆ ಬರುವುದು (ಕೆಳಗಿನ ಚಿತ್ರ ನೋಡಿ). ಗೂಗಲ್ ಬಹುಶಃ ಅನುವಾದಗಳನ್ನು ಜನರ ಬಳಕೆಗೆ ತೆರವುಗೊಳಿಸುವ ಮೊದಲು ಅದನ್ನು ಪರಿಷ್ಕರಿಸರಿಸುವತ್ತ ಗಮನ ಹರಿಸಿದರೆ ಈ ತಪ್ಪುಗಳು ಆಗಲಿಕ್ಕಿಲ್ಲ. ಬ್ಲಾಗ್ ಇತ್ಯಾದಿಗಳನ್ನು ಬರೆದು ತಮ್ಮ ಭಾಷೆಯನ್ನು ಬಳಸಿ ಗೂಗಲ್ ಜೊತೆಗಿನ "ಸಂಭಂದ"ವನ್ನು ಹೆಚ್ಚಿಸಿಕೊಳ್ಳುತ್ತಿರುವ ಕನ್ನಡಿಗರು ನಾವುಗಳು ಗೂಗಲ್ ಕಂಪೆನಿಗೆ ಒಂದು ಸಂದೇಶ ಕಳುಹಿಸೋಣವೆ ಈ ಬಗ್ಗೆ? 

ಧಾರವಾಡದಲ್ಲಿ ಮತ್ತೆ ಮೂಡಿದ ಪುನಗು ‘ನಗು’..!

ಧಾರವಾಡದ ‘ಐಕಾನಿಕ್’ ಕಟ್ಟಡಗಳಲ್ಲಿ ಒಂದು ಕರ್ನಾಟಕ ಕಾಲೇಜಿನ ಬಿಲ್ಡಿಂಗ್. ಈ ಕಾಲೇಜು ರಸ್ತೆಯಲ್ಲಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯ ‘ಡಯಟ್’ ಕೂಡ ಇದೆ. ಅದು ಸಹ ಬ್ರಿಟೀಷ್ ವಾಸ್ತುಶಿಲ್ಪ ಮೆರುಗಿಗೆ ಹಿಡಿದ ಕನ್ನಡಿ.

ಆದರೆ ಕರ್ನಾಟಕ ಕಾಲೇಜಿಗೆ ಇರುವಂತೆ ಅದಕ್ಕೆ ಸುಂದರ ಬಯಲು ಇಲ್ಲ. ಹಾಗಾಗಿ ಆರೋಗ್ಯದ ಪ್ರತಿ ಕಾಳಜಿ ಇರುವವರೆಲ್ಲ ಪ್ರತಿ ದಿನ ಬೆಳಿಗ್ಗೆ ಈ ಕಾಲೇಜಿನ ಮೈದಾನಕ್ಕೆ ಬಂದು ತಮ್ಮ ವಯಸ್ಸು ಹಾಗು ಶಕ್ತ್ಯಾನುಸಾರ ಸುತ್ತು ಹೊಡೆದು, ವ್ಯಾಯಾಮ ಮಾಡುತ್ತಾರೆ. ಇವರಿಗೆ ಅಡ್ಡಬರುವವರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಯುವ ಕ್ರೀಡಾ ‘ಐಕಾನ್’ ಗಳು.

ನಿತ್ಯ ಹೀಗೆ ತಮ್ಮ ದೇಹದಂಡಿಸಲು ಈ ಯುವ ಕ್ರೀಡಾಪಟುಗಳು ಮೈದಾನದಲ್ಲಿ ಸಜ್ಜಾಗುತ್ತಿದ್ದರು. ಅಂದು ಶುಕ್ರವಾರ ಬೆಳಗಿನ ಜಾವ ಎಂದಿನಂತೆ ಇರಲಿಲ್ಲ. ಈಚಲ ಮರದಲ್ಲಿ ವಿಶೇಷ ಪ್ರಾಣಿಯೊಂದು ಕುಳಿತುಕೊಂಡು ಕೀರಲು ಧ್ವನಿಯಿಂದ ಕೂಗುತ್ತ ಎಲ್ಲರ ‘ಮಾರ್ನಿಂಗ್ ವಾಕ್..ಜಾಗಿಂಗ್’ ಬಂದ್ ಮಾಡಿಸಿ ತಲೆ ಎತ್ತಿ ಕೇವಲ ಸೂರ್ಯ ನಮಸ್ಕಾರ ಮಾಡುವಂತೆ ಮಾಡಿತ್ತು!

ಕಾರಣ ಯಾರಿಗೂ ಗೊತ್ತಿಲ್ಲ..ಯಾವ ಪ್ರಾಣಿ ಅದು ಎಂದು! ಕುತೂಹಲ.. ವಯಸ್ಸು, ಲಿಂಗ ಬೇಧ ಎಲ್ಲ ಮರೆಸಿ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಇಷ್ಟಾದ ಮೇಲೆ ನಮ್ಮ ಛಾಯಾಪತ್ರಕರ್ತ ಕೇದಾರನಾಥ್ ಅವರಿಗೆ ಸುದ್ದಿ ತಲುಪದಿರಲು ಹೇಗೆ ಸಾಧ್ಯ? ಜಿಮ್ನ್ಯಾಸ್ಟಿಕ್ಸ್ ಕೋಚ್ ಪ್ರಶಾಂತ ಮುರ್ತುಗುಡ್ಡೆ ಫೋನಾಯಿಸಿದ್ದೇ ತಡ ಸುದ್ದಿ ಯೋಧರು ಸಮರೋಪಾದಿಯಲ್ಲಿ ಕೇದಾರ ಅಣ್ಣನ ನೇತೃತ್ವದಲ್ಲಿ ಲಗ್ಗೆ ಹಾಕಿದರು.

ಎಲ್ಲಾ ಟೈಮ್ ಅಲರ್ಟ್ ಇರ್ಬೇಕ್ರೀ

ಇವತ್ತು ಮೈಸೂರಿನ ದೇವರಾಜ ಅರಸ್ ರೋಡ್ ಅಲ್ಲಿ ಹೋಗ್ತಾ ಇದ್ದೆ, ಆಗ ಯಾರೋ ಒಬ್ಬ ಫೂಟ್ ಪಾತ್ ಸೈಡ್ ಇಂದ ಸಡನ್ ಆಗಿ ನನ್ನ ಹತ್ತಿರ ಬಂದ. ಅವನು ಜೇಬಿನಿಂದ ಏನೋ ತೆಗೆದಂತಾಯ್ತು, ನನ್ನ ಬಲಗೈ ಮುಷ್ಟಿ ಬಿಗಿಯಾಯ್ತು, ಎಡಗೈಯಲ್ಲಿದ್ದ ಹೆಲ್ಮೆಟ್ ನ ಅವನು ಅಟ್ಯಾಕ್ ಮಾಡಿದ್ರೆ ತಡ್ಯಕ್ಕೆ ಅಂತ ಎತ್ತಿ ಹಿಡಿದೆ.

75 ವರ್ಷದ ಅಮ್ರುತಮಹೋತ್ಸವ

ಕನ್ನಡ ಚಿತ್ರರಂಗಕ್ಕೀಗ ೭೫ರ ಸಂಭ್ರಮ. ಒಂದು ದೊಡ್ಡ ಸಮಾರಂಭವೇನೋ ನಡೆಯಿತು.. ಆದರಿದು ಹೆಚ್ಚು ಜನರಿಗೆ ತ್ರುಪ್ತಿ ತಂದಿಲ್ಲ ಎಂಬ ಮಾತಿದೆ.

ಬರಲಿರುವ ನಾಳೆಗಳು....

ಈ ಬ್ಲಾಗ್ ಅನ್ನಬಹುದಾ , ಬರೆಯುವಾಗ ಸ್ವಲ್ಪ ಹಿಂಜರಿಕೆ ಇದೆ.ಕಾರಣ ಮಿತ್ರನೋರ್ವ ಬರೆಯುತ್ತಿದ್ದಾರೆ... "ಸಂಪದ"
ಈಗ ಪ್ರಬುದ್ಧ ಆಗಿದೆ ವಿವಾದದ ವಿಶಯ ಬೇಡ..ಆದರೆ ಬರಲಿರುವ ಆ ನಾಳೆಗಳು ವಿವಾದಾತ್ಮಕವಾಗಿಯೆ ಇರುತ್ತವೆ.
ಗಾದೆ ಮಾತಿದೆ ಅಲ್ಲ "ಅಪ್ರಿಯ ಸತ್ಯ ಯಾವಾಗಲೂ ಅಪಥ್ಯ" ಅಂತ.ಮೊನ್ನೆ ವರುಣ ಗಾಂಧಿ ಹೇಳಿದ್ದು ಎಂಬ ಸಂಗತಿ

ನನ್ನೋಎಸ್ಟೀ ಕಲೆಕ್ಷನ್ನು, ಇತ್ತೀಚಿನ್ಸೇರ್ಪಡೆ : ಅಮೇರಿಕನ್ ಗ್ಯಾಂಗ್ಸ್ಟರ್

ಅಮೇರಿಕನ್ ಗ್ಯಾಂಗ್ಸ್ಟರ್; ಅರ್ವತ್ತೆಪ್ಪತ್ತರ ದಶಕದ ನ್ಯೂ-ಯಾರ್ಕ್/ಹಾರ್ಲೆಮ್ನಲ್ಲಿನ ಡ್ರಗ್ ಸಾಮ್ರಾಜ್ಯದ ಕತೆ ಆಧಾರಿತ ಹಾಲಿವುಡ್ಫಿಲ್ಮು. (ತುಂಬಾ ಮುಂಚೆ ಇದ್ನ ನೋಡಿದ್ದೆ, ಮೊನ್ನೆ ಡಿವಿಡಿ ಕೊಂಡೆ)

ನನ್ನ ಕಥೆ ನಿಮ್ಮ ಭಾವನೆ

ನಾನು 4 ಸಣ್ಣ ಕಥೆಗಳನ್ನು ಬರೆಯುತಿದೀನಿ
ಅವುಗಳ titles

*ಮಳೆ ನಿಂತು ಹೋದ ಮೇಲೇ :-
ನನ್ನ ಸ್ನೇಹಿತನ ಮುರಿದು ಬಿದ್ದ ಪ್ರೇಮಕತೆಗೆ ನನ್ನದೇ ಅದ ಕಲ್ಪನೆ..
*ನೀನಾ ಪ್ರೇಮಿ:- ಸ್ವ ಅನುಭವ
*ನಿನ್ನ ನೆನಪಲ್ಲೇ:-
ಕಳೆದು ಹೋದ ಮಾತೆಂದೂ ಬರದ ಜೀವದ ಬಗ್ಗೆ..
*ಬದುಕೋಕೆ ಅರ್ಹತೆನೂ ಇಲ್ಲ... ಸಾಯೋಕೆ ಯೋಗ್ಯತೆನೂ ಇಲ್ಲ:-
ನಾನಾ ಜೀವನದ ದುರಂತ ಮತ್ತೆ ಇದೇ ನನ್ನ ಜೀವನದ ಕೊನೆಯ ಕಥೆ...