ನಿನ್ನೆಯಷ್ಟೇ ಕಣ್ಣು ಬಿಟ್ಟ ಬಿಳಿ ಹಾವು ಮರಿಗಳು

ನಿನ್ನೆಯಷ್ಟೇ ಕಣ್ಣು ಬಿಟ್ಟ ಬಿಳಿ ಹಾವು ಮರಿಗಳು

ಬರಹ

ಬಿಳಿ ಹಾವುಗಳು ಅಪರೂಪದ್ದು ಎಂದು ಹರ್ಷ ಬರೆದ ಕೆಲವೇ ದಿನಗಳಲ್ಲಿ ಮತ್ತೊಂದು ಚಿತ್ರ ನನ್ನ ಮೇಯ್ಲ್ ಬಾಕ್ಸ್ ಸೇರಿತು. ಇವತ್ತು ಡಾ. ಐತಾಳರು ನಾಲ್ಕು ಆಲ್ಬೀಗಳ ಚಿತ್ರ ಕಳುಹಿಸಿದ್ದಾರೆ. ಈ ಹಾವಿನ ಮರಿಗಳು ಇವತ್ತಷ್ಟೇ ಹೊರಜಗತ್ತಿಗೆ ಕಾಲಿಟ್ಟ ವಿಷಯ ತಿಳಿಸುತ್ತ ನಾಳೆ ಇದನ್ನು ಅದು ಇನ್ನು ಜೀವಿಸಬಲ್ಲ ಒಂದು ಜಾಗಕ್ಕೆ ಬಿಟ್ಟುಬಿಡುತ್ತೇವೆ ಎಂಬ ಸುದ್ದಿಯನ್ನೂ ಮುಟ್ಟಿಸಿದರು ಡಾ. ಐತಾಳರು.
ಹೀಗೆ ನಾಲ್ಕು Albino ಹಾವುಗಳು ಒಟ್ಟಿಗೇ ಹುಟ್ಟುವುದ ಕಾಣುವುದು ಅಪರೂಪವಂತೆ. ಇವು ನೀರು ಹಾವುಗಳು.
Albino Snakes - Photo Credits: Dr. Aithal

ಡಾ. ಐತಾಳರ ಬಗ್ಗೆ ಈ ಹಿಂದೆ ವಸಂತ್ ಸಂಪದದಲ್ಲಿ ಬರೆದಿದ್ದರು.

ಚಿತ್ರ ಕಳುಹಿಸಿ ಅದನ್ನು ಇಲ್ಲಿ ಪ್ರಕಟಿಸಲು ಅನುಮತಿಯನ್ನೂ ನೀಡಿದ ಡಾ. ಐತಾಳರಿಗೆ ವಂದನೆಗಳು.