ಮಾನವನಿಂದ ಮಂಗ?

ಮಾನವನಿಂದ ಮಂಗ?

ಮಾನವನಿಂದ ಮಂಗ?

ಹೋದ ವಾರ ನನ್ನನ್ನು ತುಂಬಾ ಬಾಧಿಸಿದ ವಾರ್ತೆ ಇದು. ನಾನು ನನ್ನ ಕಾರ್ಯನಿಮಿತ್ತ ಇಂಗ್ಲೆಂಡಿಗೆ ಬಂದಿದ್ದೇನೆ. ಇಲ್ಲಿ ಬೆಳಿಗ್ಗೆ ಕಚೇರಿಗೆ ಬಸ್ಸಿನಲ್ಲಿ ತೆರಳುವಾಗ ಪ್ರಯಾಣಿಕರಿಗೆ ಸಾಮಾನ್ಯವಾಗಿ ಒಂದು ಉಚಿತ ದಿನಪತ್ರಿಕೆ ಲಭ್ಯವಿರುತ್ತದೆ. ನಾನೂ ಕೂಡ ಖುಷಿಯಿಂದ ದಿನಾಲೂ ಪತ್ರಿಕೆಯನ್ನು ಓದುತ್ತೇನೆ. ಸಾಮಾನ್ಯವಾಗೆ ಇಲ್ಲಿನ ಸಮಾಚಾರಗಳಿಗೆ ಹೆಚ್ಹು ಒತ್ತು.

ಆದರೆ ಹೋದವಾರ ಒಂದು ದಿನದ ಪತ್ರಿಕೆಯ ತಲೆಬರಹ ಎಲ್ಲ ನಾಗರಿಕ ಸಮಾಜದ ಭಾಗವಾಗಿರುವವರಿಗೂ ತಲೆ ತಗ್ಗಿಸುವ ವಿಚಾರ ಪ್ರಕಟವಾಯಿತು. ಅದೆನಪ್ಪಾಂದರೆ ಒಬ್ಬ ತಂದೆ ತನ್ನ ಸ್ವಂತ ಮಗಳನ್ನು ೩೦ ವರುಷ ತನ್ನ ಮನೆಯಲ್ಲೇ ನೆಲಮಾಳಿಗೆಯಲ್ಲೇ ಕೂಡಿ ಹಾಕಿ ಸಾವಿರಾರು (ಮಗಳ ಪ್ರಕಾರ ಮೂರು ಸಾವಿರಕ್ಕೋ ಹೇಚ್ಚುಬಾರಿ) ಬಾರಿ ರೇಪ್ ಮಾಡಿರುವುದು ಮತ್ತು ಆ ಹೆಣ್ಣು ಮಗಳನ್ನು ಅಶ್ಲೀಲ ಚಿತ್ರಗಳಲ್ಲಿ ಭಾಗಿಯಾಗುವಂತೆ ಹಿಂಸಿಸಿ ಚಿತ್ರಿಸಿರುವುದು. ಈ ವಿಷಯ ಹೊರಗೆ ಬಂದಿದ್ದು ಈ ಮಹಾಶಯನ ಬಲಾತ್ಕಾರದಿಂದ ಹುಟ್ಟಿದ ಒಂದು ಮಗು ಸತ್ತಾಗ. ಅದು ಆತನ ಏಳನೇ ಕೊಡುಗೆ ತನ್ನ ಮಗಳಿಗೆ, ಚ್ಚೀ!

ಇದಕ್ಕಿಂತ ಸಂಕಟ ಏನೆಂದರೆ, ಇದೇ ವಾರದಲ್ಲಿ, ಇಂತಹುದೇ ಸುದ್ದಿಯನ್ನು ಪ್ರಪಂಚದ ನಾನಾ ಭಾಗಗಳಿಂದ (ಆಸ್ಟ್ರಿಯ, ಭಾರತ) ಕೇಳಲ್ಪಟ್ಟಿದ್ದು. ಅಧಿಕ ಸಂಕಟವಾಗಿದ್ದು ಇದೇ ಸಮಯದಲ್ಲಿ ಭಾರತದಲ್ಲೂ ಒಬ್ಬ ಇಂಥದೇ ವಿಕೃತ ಕಾಮಿ ತಂದೆ ಸಿಕ್ಕಿಬಿದ್ದದ್ದು. ಈ ಘಟನೆಗಳನ್ನು ನೋಡಿದರೆ ಇವರೆಲ್ಲ ಮಂಗನಿಂದ ಮಾನವರಾದ, ಮಾನವರಾಗಿ ಸುಸಂಸ್ಕ್ರುತರಾದವರೋ ಅಥವಾ ಹಿಂದಕ್ಕೆ ಮಂಗನಂತೆ ಮತ್ತು ಅದಕ್ಕಿನ್ತಲ್ಲೋ ಕೀಳಾದ ಪ್ರಾಣಿಯಾಗಲು ಓಡುತ್ತಿರುವವರೋ?

ಇಂಥಾ ತಂದೆಯರಿಗೆ ಧಿಕ್ಕಾರ, ಇಂಥಾ ಮಾನವರಿಗೆ ಧಿಕ್ಕಾರ.

Rating
No votes yet