ನಿದ್ರೆಯಲ್ಲಿ ಓಡಾಡುವ, ಮಾತನಾಡುವ ಅಭ್ಯಾಸವಿದೆಯೇ?

ನಿದ್ರೆಯಲ್ಲಿ ಓಡಾಡುವ, ಮಾತನಾಡುವ ಅಭ್ಯಾಸವಿದೆಯೇ?


ನಿದ್ರಾ ನಡಿಗೆಯು ಒಂದು ರೀತಿಯ ನಿದ್ದೆಯ ವಿಕಾರವಾಗಿದೆ. ಇದರಲ್ಲಿ ರೋಗಿಯು ನಿದ್ದೆಯಲ್ಲಿದ್ದಾಗ
ಅಥವಾ ಅರೆನಿದ್ದೆಯಲ್ಲಿದ್ದಾಗ ಜಾಗೃತಾವಸ್ಥೆ ಯಲ್ಲಿದ್ದಂತಹ ಕಾರ್ಯಗಳನ್ನು
ಮಾಡತೊಡಗುತ್ತಾನೆ.


ನಿದ್ದೆಯಲ್ಲಿ ನಡೆದಾಡುವವರು ವಿವಿಧ ರೀತಿಯಲ್ಲಿ ವರ್ತಿಸುತ್ತಾರೆ, ಉದಾ. ಮನೆಯನ್ನು
ಸ್ವಚ್ಛಗೊಳಿಸುವುದು, ದೀಪವನ್ನು ಹಚ್ಚುವುದು ಅಥವಾ ಆರಿಸುವುದು, ಮನೆಯಲ್ಲಿ ಅಥವಾ
ಬೀದಿಯಲ್ಲಿ ನಡೆದಾಡುವುದು, ಬೇರೆ ಸ್ಥಳಕ್ಕೆ ಹೋಗುವುದು, ನಿದ್ದೆಯಲ್ಲಿ ಮಾತನಾಡುವುದು,
ಕೂಗುವುದು, ಬೈಯ್ಯುವುದು, ವಸ್ತುಗಳನ್ನು ಎಸೆಯುವುದು, ಜೊತೆಗಾರರಿಗೆ ಹೊಡೆಯು ವುದು
ಇತ್ಯಾದಿ. ಇದರ ಅತೀ ತೀವ್ರತೆಯ ಉದಾಹರಣೆ ಎಂದರೆ ಕೆಲವರು ನಿದ್ದೆಯಲ್ಲಿ ಇತರ
ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧವನ್ನು ಬೆಳೆಸುತ್ತಾರೆ ಮತ್ತು ಕೆಲವರು
ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ.


ನಿದ್ರಾ ನಡಿಗೆಯಲ್ಲಿರುವವರ ಕಣ್ಣುಗಳು ಹೊಳೆಯುತ್ತಿರುತ್ತವೆ ಮತ್ತು ಇಂತಹ ವ್ಯಕ್ತಿಗಳನ್ನು ಈ
ಸಮಯದಲ್ಲಿ ಎಚ್ಚರಗೊಳಿಸಬಾರದು ಎಂಬ ಐತಿಹ್ಯವೂ ಇದೆ. ಇದರ ಸ್ಪಷ್ಟೀಕರಣವನ್ನು ಮುಂದೆ
ಲೇಖನದಲ್ಲಿ ಕೊಡಲಾಗಿದೆ.


ನಿದ್ರಾ ನಡಿಗೆಯಲ್ಲಿರುವವರ ಬಗ್ಗೆ ಮಾಡಿದ ಸಂಶೋಧನೆಯಿಂದ ಶೇ. ೧೮ ರಷ್ಟು ಜನರು ನಿದ್ರಾ ನಡಿಗೆಯ ವಿಕಾರಕ್ಕೊಳಗಾಗಿದ್ದಾರೆ ಎಂಬುದು ಗಮನಕ್ಕೆ ಬಂದಿದೆ.

ನಿದ್ರಾ ನಡಿಗೆಗೆ ಕಾರಣಗಳು


ಚಿಂತೆ, ಸುಸ್ತು, ಒತ್ತಡ ಮತ್ತು ನಿದ್ದೆಯ ಅಭಾವ ಇವುಗಳು ನಿದ್ರಾ ನಡಿಗೆಗೆ ಕಾರಣವಾಗಿವೆ ಎಂದು
ಆಧುನಿಕ ವಿಜ್ಞಾನವು ತಿಳಿಸಿದೆ. ನಿದ್ರಾ ನಡಿಗೆಯ ವಿಕಾರಕ್ಕೆ ಶಾಶ್ವತವಾದಂತಹ ಪರಿಹಾರ
ಕಂಡು ಬರದಿದ್ದರೂ ಅದನ್ನು ನಿದ್ರೆ ಮಾತ್ರೆ ಹಾಗೂ ಸಮ್ಮೋಹನ ಉಪಚಾರದಿಂದ
ತಾತ್ಕಾಲಿಕವಾಗಿ ಪರಿಹರಿಸಬಹುದು.

ಎಸ್.ಎಸ್.ಆರ್.ಎಫ್. ಮಾಡಿದಂತಹ ಸಂಶೋಧನೆಗನುಸಾರ ನಿದ್ರಾ ನಡಿಗೆಗೆ ಆಧ್ಯಾತ್ಮಿಕ ಅಂಶಗಳು ಮೂಲ ಕಾರಣವಾಗಿವೆ ಎಂಬುದು ಗಮನಕ್ಕೆ ಬಂದಿದೆ.


೧. ಆಧ್ಯಾತ್ಮಿಕ ಅಂಶಗಳೇ ನಿದ್ರಾ ನಡಿಗೆಗೆ ಮುಖ್ಯ ಕಾರಣವಾಗಿವೆ. ಆದುದರಿಂದ ಆಧುನಿಕ ವಿಜ್ಞಾನಕ್ಕೆ ಈ ವಿಕಾರಕ್ಕೆ ಶಾಶ್ವತವಾದಂತಹ ಪರಿಹಾರವನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.


೨. ಈ ಆಧ್ಯಾತ್ಮಿಕ ಅಂಶದಲ್ಲಿ ಪೂರ್ವಜರ ಅಥವಾ ಕೆಟ್ಟಶಕ್ತಿಗಳ ತೊಂದರೆಯು ಸೇರಿಕೊಂಡಿದೆ.


೩. ಅಪರಿಚಿತರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುವುದು, ಕೊಲೆ ಮಾಡುವುದು ಇತ್ಯಾದಿ ಕೃತಿಗಳು ನಿದ್ರಾ ನಡಿಗೆಯ ಅತ್ಯಂತ ಅಪಾಯ ಕಾರಿ ಲಕ್ಷಣಗಳಾಗಿವೆ. ಇಂತಹ ತೊಂದರೆಗಳನ್ನು ಉಚ್ಚಮಟ್ಟದ ಕೆಟ್ಟಶಕ್ತಿ ಗಳಾದ ಮಾಂತ್ರಿಕರು ತಂದ್ದೊಡ್ಡುತ್ತಾರೆ. ಯಾವುದೇ ಒಂದು ಕೃತಿಯು ಇನ್ನೊಬ್ಬರ ಸಂಪೂರ್ಣ ಹಿಡಿತದಲ್ಲಿ ನಡೆದಿದ್ದರೂ ಅಧ್ಯಾತ್ಮಶಾಸ್ತ್ರಕ್ಕನುಸಾರ ಆ ವ್ಯಕ್ತಿಯು ಅದರ ಕರ್ಮಫಲವನ್ನು ಭೋಗಿಸಲೇಬೇಕಾಗುತ್ತದೆ. ಈ ಕರ್ಮದ ಫಲವು ಶಿಕ್ಷೆಯ ಸ್ವರೂಪದಲ್ಲಿ ಇದೇ ಜನ್ಮ ಅಥವಾ ಮುಂದಿನ ಜನ್ಮದಲ್ಲಿ ಒದಗಿ ಬರುತ್ತದೆ. ಆದರೆ ಈ ಶಿಕ್ಷೆಯ ತೀವ್ರತೆಯು ಓರ್ವ ಜಾಗೃತಾವಸ್ಥೆಯಲ್ಲಿದ್ದ ವ್ಯಕ್ತಿಯು ಮಾಡಿದ ಹತ್ಯೆಯ ತುಲನೆಯಲ್ಲಿ ಕಡಿಮೆ ಯಿರುತ್ತದೆ. ನಿದ್ರಾ ನಡಿಗೆಗೆ ಮಾನಸಿಕ ಅಸ್ವಸ್ಥತೆಯು ಕಾರಣವಾಗಿರದೇ ಆಧ್ಯಾತ್ಮಿಕ ತೊಂದರೆಯು ಕಾರಣವಾಗಿದ್ದರೆ ಅದರ ಕರ್ಮಫಲವು ಇನ್ನೂ ಕಡಿಮೆಯಿರುತ್ತದೆ.

ನಮ್ಮಿಂದ ಭೂತಗಳು ಮಾಡಿಸಿಕೊಂಡ ಕೃತ್ಯಗಳ ಬೆಲೆಯನ್ನು ನಾವೇಕೆ ತೆರಬೇಕು ?


ಭೂತಗಳು ನಮ್ಮಲ್ಲಿನ ದೌರ್ಬಲ್ಯಗಳಿಂದಾಗಿಯೇ ನಮ್ಮೊಳಗೆ ಪ್ರವೇಶಿಸಿ ರುತ್ತವೆ. ಈ ದೌರ್ಬಲ್ಯಗಳು
ಪೂರ್ವಜನ್ಮದ ಕುಕೃತ್ಯದ ಫಲ, ತಪ್ಪು ಕೆಲಸ ಗಳು, ಸ್ವಭಾವದೋಷಗಳಾದ ಭಯ ಮತ್ತು
ಸಿಟ್ಟಿನಿಂದ ನಿರ್ಮಾಣವಾಗುವ ಚಿಂತೆ ಮತ್ತು ಒತ್ತಡ, ಸಾಧನೆ ಮಾಡದಿರುವುದು ಮುಂತಾದ
ಕಾರಣಗಳಿಂದ ನಿರ್ಮಾಣಗೊಂಡಿರುತ್ತವೆ.

ನಿದ್ರಾ ನಡಿಗೆಯ ಉಪಚಾರ


ನಿದ್ರಾ ನಡಿಗೆಯ ಮೂಲ ಕಾರಣವು ಆಧ್ಯಾತ್ಮಿಕವಾಗಿರುವುದರಿಂದ ಅದನ್ನು ಆಧ್ಯಾತ್ಮಿಕ ಉಪಚಾರ ಅಥವಾ ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಗುಣಪಡಿಸಬಹುದು.


ನಿಯಮಿತ ಆಧ್ಯಾತ್ಮಿಕ ಸಾಧನೆಯಿಂದ ಅಂದರೆ ಉದಾಹರಣೆಗೆ ಓರ್ವ ವ್ಯಕ್ತಿಯು ನಾಮಜಪ ಮಾಡುತ್ತಿದ್ದರೆ
ದಿನಕ್ಕೆ ಐದು ಗಂಟೆ ಭಗವಂತನ ನಾಮಸ್ಮರಣೆಯನ್ನು ಮಾಡುವುದರಿಂದ ಈ ತೊಂದರೆಯಿಂದ ಬಿಡುಗಡೆ
ಪಡೆಯಬಹುದು. ಇದಕ್ಕಾಗಿ ‘ಶ್ರೀ ಗುರುದೇವ ದತ್ತ’ ನಾಮಜಪ ಮಾಡಬೇಕು.


ನಮ್ಮನ್ನು ನಾವು ಆಧ್ಯಾತ್ಮಿಕ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಮತ್ತು ಆಧ್ಯಾತ್ಮಿಕ ಪ್ರಗತಿ
ಹೊಂದಲು ನಾವು ಪ್ರತಿದಿನ ಜೀವನಪೂರ್ತಿ ಸಾಧನೆ ಮಾಡುವುದು ಅವಶ್ಯವಾಗಿದೆ.


ನಿದ್ರಾ ನಡಿಗೆಯಲ್ಲಿನ ವ್ಯಕ್ತಿಯ ಮೂಲಕ ಕೆಟ್ಟಶಕ್ತಿಗಳ ಅಥವಾ ಪೂರ್ವಜರ ತೊಂದರೆಯಾಗದಂತೆ ಅವನ ಕುಟುಂಬದವರೂ ತಮ್ಮ ರಕ್ಷಣೆಗಾಗಿ ಸಾಧನೆಯನ್ನು ಮಾಡಬೇಕು.


ನಿದ್ರಾ ನಡಿಗೆಯಲ್ಲಿರುವ ವ್ಯಕ್ತಿಯನ್ನು ಎಚ್ಚರಗೊಳಿಸಬಾರದು ಎಂಬುದು ತಪ್ಪು ಕಲ್ಪನೆಯಾಗಿದೆ.
ನಿದ್ರಾ ನಡಿಗೆಯ ಮೂಲಕಾರಣವು ಆಧ್ಯಾತ್ಮಿಕ ಅಥವಾ ಮಾನಸಿಕ ಸ್ವರೂಪದ್ದೇ ಆಗಿದ್ದರೂ
ವ್ಯಕ್ತಿಯನ್ನು ಎಚ್ಚರಗೊಳಿಸು ವುದು ಬಹಳ ಅವಶ್ಯವಾಗಿದೆ. ನಿದ್ರಾ ನಡಿಗೆಯ ಮೂಲಕಾರಣವು
ಕೆಟ್ಟ ಶಕ್ತಿಗಳ ಪ್ರಕಟೀಕರಣದಿಂದ ಆಗುತ್ತಿದ್ದರೆ ಆ ವ್ಯಕ್ತಿಯನ್ನು ಎಬ್ಬಿಸುವುದರಿಂದ
ಕೆಟ್ಟಶಕ್ತಿಯ ಪ್ರಕಟೀಕರಣವು ನಿಂತು ಅವನು ಸಾಮಾನ್ಯ ಸ್ಥಿತಿಗೆ ಬರುತ್ತಾನೆ. ಒಂದು
ವೇಳೆ ವ್ಯಕ್ತಿಯು ಮನೋವಿಕಾರದಿಂದ ನಡೆಯುತ್ತಿದ್ದರೂ ಅವನನ್ನು ಎಚ್ಚರಗೊಳಿಸುವುದರಿಂದ
ಅವನು ತನಗೆ ತಾನೇ ಮಾಡಿಕೊಳ್ಳಬಹುದಾದ ಹಾನಿಗಳನ್ನು ತಡೆಯಬಹುದು.

ಇನ್ನಿತರ ಆಧ್ಯಾತ್ಮಿಕ ಪರಿಹಾರೋಪಾಯಗಳು :
ಉಪ್ಪು ನೀರಿನ ಉಪ ಚಾರ ಮಾಡಬಹುದು. ಮಲಗುವಾಗ ಹಾಸಿಗೆಯ ಬಳಿ ಊದುಬತ್ತಿಯನ್ನು
(ಎಸ್.ಎಸ್.ಆರ್.ಎಫ್. ಅಥವಾ ಸನಾತನ ಸಂಸ್ಥೆಯ) ಹಚ್ಚಿಟ್ಟರೆ ಕೆಟ್ಟಶಕ್ತಿ ಗಳು ದೂರವಾಗಿ
ನಿದ್ರಾ ನಡಿಗೆಯ ತೊಂದರೆಯು ಕಡಿಮೆಯಾಗುವುದು.

ಉಪ್ಪು ನೀರಿನ ಉಪಚಾರ


ಒಂದು ಬಕೇಟಿನಲ್ಲಿ ನೀರು ತುಂಬಿಸಿ (ಪಾದಗಳ ಮೇಲೆ ಸ್ವಲ್ಪ ನೀರು ಬರುವಷ್ಟು) ಅದಕ್ಕೆ ೨ ಚಮಚ
ಕಲ್ಲುಪ್ಪನ್ನು ಹಾಕಬೇಕು. ‘ನಮಗೆ ತೊಂದರೆ ಕೊಡುವಂತಹ ಕೆಟ್ಟಶಕ್ತಿಯ ಶಕ್ತಿಯು
ನಾಶವಾಗಲಿ’ ಎಂದು ಭಗವಂತನಲ್ಲಿ ಆರ್ತರಾಗಿ ಪ್ರಾರ್ಥಿಸಬೇಕು. ಅನಂತರ ಎರಡೂ ಕಾಲು
ಗಳನ್ನು ನೀರಿನಲ್ಲಿ ಮುಳುಗಿಸಿ ಕಾಲಿನ ಹಿಮ್ಮಡಿಯನ್ನು ಜೋಡಿಸಿ ಕಾಲಿನ ಎರಡು
ಹೆಬ್ಬೆರಳುಗಳ ನಡುವೆ ಸುಮಾರು ೨-೩ ಸೆಂ.ಮೀ. ನಷ್ಟು ಜಾಗ ಬಿಟ್ಟು (ಕಾಲಿನ
ಹೆಬ್ಬೆರೆಳುಗಳನ್ನು ಜೋಡಿಸಿಟ್ಟರೆ ಕಪ್ಪುಶಕ್ತಿಯು ಹೊರಹೋಗಲು ಅಡಚಣೆಯುಂಟಾಗುತ್ತದೆ)
೧೦-೧೫ ನಿಮಿಷಗಳ ಕಾಲ ನಾಮಜಪ ಮಾಡಬೇಕು.

Rating
No votes yet

Comments