ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನದಲ್ಲಿ ಏಕೆ ಪ್ರವೇಶ ಮಾಡಬೇಕು ?

ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನದಲ್ಲಿ ಏಕೆ ಪ್ರವೇಶ ಮಾಡಬೇಕು ?

‘ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನದಲ್ಲಿ ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ. ಇದರ ಬದಲು ನಾವು ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲಿಗೆ ಅಂಟಿಕೊಂಡಿರುವ ಧೂಳಿನ ಕಣಗಳು ದೂರವಾಗುತ್ತವೆ. ಇದರಿಂದ ನಾವು ಸಾತ್ತ್ವಿಕ ಲಹರಿಗಳನ್ನು ಸುಲಭವಾಗಿ ಗ್ರಹಿಸಬಹುದು ಮತ್ತು ವಾತಾವರಣದಲ್ಲಿ ರಜ-ತಮಾತ್ಮಕ ಲಹರಿಗಳ ಪ್ರಕ್ಷೇಪಣೆಯೂ ಕಡಿಮೆಯಾಗುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುವುದಿಲ್ಲ.’

(ಹಿಂದಿನ ಕಾಲದಲ್ಲಿ ಹಿಂದೂಗಳು ದೇವಸ್ಥಾನಗಳ ಹೊರಗಿರುವ ಕೆರೆಗಳಲ್ಲಿ ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನದಲ್ಲಿ ಪ್ರವೇಶಿಸುತ್ತಿದ್ದರು. ಇಂದು ಹೆಚ್ಚಿನ ದೇವಸ್ಥಾನಗಳ ಹೊರಗೆ ಕೆರೆಗಳು ಇಲ್ಲದಿರುವುದರಿಂದ ಹಾಗೂ ಕೆರೆಗಳಿದ್ದರೂ ‘ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನದಲ್ಲಿ ಪ್ರವೇಶಿಸಬೇಕು’ ಎಂಬ ಮಾಹಿತಿಯೇ ಹೆಚ್ಚಿನ ಜನರಿಗೆ ಇಲ್ಲದಿರುವುದರಿಂದ, ಅಂದರೆ ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವವಿರುವುದರಿಂದ, ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನದಲ್ಲಿ ಪ್ರವೇಶಿಸುತ್ತಾರೆ. ಹಿಂದೂಗಳ ದೇವಸ್ಥಾನಗಳಲ್ಲಿ ಸಾತ್ತ್ವಿಕತೆಯು ಕಡಿಮೆಯಾಗುತ್ತಾ ಹೋಗುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿದೆ.)

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?’)

Rating
No votes yet

Comments