ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಡುಗೆ ಮನೆಯಲ್ಲಿ ಕನ್ನಡೀಕರಣ....

ಅಡುಗೆ ಮನೆಯಲ್ಲಿ ಕನ್ನಡೀಕರಣ....

ಪಾನಿಪುರಿ - ನೀರ್ಪುರಿ (ನೀರುಪುರಿ)
ಪಾವ್ ಭಾಜಿ - ಪಾವ್ ಸಾಗು ಅಥವಾ ಪಾವ್ ಪಲ್ಯ
ಬಿಸಿಬೇಳೆಭಾತ್ - ಬಿಸಿಬೇಳೆಅನ್ನ
ವಾಂಗಿಭಾತ್ - ಬದನೆಅನ್ನ ಅಥವಾ ಬದನೆಕಾಯಿಅನ್ನ
ನಾರಳಿಭಾತ್ - ಕೊಬ್ಬರಿಅನ್ನ
ಜೀರಾರೈಸ್ - ಜೀರಿಗೆ ಅನ್ನ
ಮೇತಿರೈಸ್ - ಮೇಂತೆಅನ್ನ
ಮಸಾಲಾ ಪಾಪಡ್ - ಮಸಾಲೆ ಹಪ್ಪಳ

ಯೋಗ ಪ್ರಯೋಗ...!

ಅಜ್ಜೀ, ನಾನೂ ಯೋಗ ಮಾಡ್ತೀನಿ ಅಂದ್ಳು ಪುಟ್ಟಿ ! ಎಲ್ಲಿ ನೋಡೋಣ, ಏನು ಮಾಡ್ತೀಯ ಅಂತ ಕೇಳಿದೆ. ತಟಕ್ಕನೆ ಪದ್ಮಾಸನ ಹಾಕಿದ್ಳು. ಕಣ್ಣುಮುಚ್ಚಿ, ಮೂಗು ಹಿಡಿದು ಉಸಿರು ಎಳೆದು ಎಳೆದು ಬಿಟ್ಳು. ಆಮೇಲೆ ಎದ್ದು ನಿಂತು ಸೂರ್ಯನಮಸ್ಕಾರ, ಒಂದೈದಾರು ಆಸನಗಳನ್ನು ಮಾಡಿ ಕೊನೆಗೆ ಶವಾಸನ ಹಾಕಿದವಳಿಗೆ ಅಲ್ಲೇ ನಿದ್ದೆ ! ಹತ್ತು ನಿಮಿಷ ಬಿಟ್ಟು ಎದ್ದ ಮೇಲೆ ಕೇಳಿದೆ, "ಪುಟ್ಟೀ, ಸೂರ್ಯನಮಸ್ಕಾರಕ್ಕೆ ಮಂತ್ರ, ಪ್ರಾಣಾಯಾಮಕ್ಕೆ ಓಂಕಾರ ಎಲ್ಲ ಇದೆ. ನೀನು ಏನೂ ಹೇಳಲೇ ಇಲ್ಲ" ಎಂದೆ. ಅದಕ್ಕವಳು "ಮಂತ್ರ ಎಲ್ಲ ಹೇಳಬೇಕೆಂದಿಲ್ಲ, ದೈಹಿಕ ಆರೋಗ್ಯಕ್ಕಾಗಿ ’ಜಿಮ್’ ಗೆ ಹೋಗುವ ಬದಲು ಮನೆಯಲ್ಲೇ ಯೋಗ ಮಾಡಿದರಾಯ್ತು" ಎಂದಳು ! "ಆಯ್ತು, ಯೋಗಕ್ಕೆ ದುರ್ಗತಿ ಬಂತು" ಅಂದ್ಕೊಂಡೆ.
ಮೆತ್ತಗೆ ಹೇಳಿದೆ, "ಯೋಗ ಅಂದ್ರೆ ’ಅಷ್ಟಾಂಗ ಯೋಗ’ ಅಂತ ಪುಟ್ಟಿ. ಅದರಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಅಂತ ಹಂತಗಳಿವೆ. ಇವೆಲ್ಲ ಬರಿಯ ದೈಹಿಕ ಆರೋಗ್ಯಕ್ಕಾಗಿ ಇರುವ ಕಸರತ್ತುಗಳಲ್ಲ. ನಮ್ಮ ಮನಸ್ಸು, ಬುದ್ಧಿ ಮತ್ತು ದೇಹದ ಆರೋಗ್ಯ ಹಾಗೂ ಸಾಧನೆಗಳಿಗಾಗಿ ಇರುವಂತದ್ದು. ಓಂಕಾರವು ನಮ್ಮ ಶ್ವಾಸೋಚ್ಛ್ವಾಸದ ಕ್ರಿಯೆಗೆ, ಸ್ವರ ಶುದ್ಧಿಗೆ ಮತ್ತು ಏಕಾಗ್ರತೆಗೆ ತುಂಬಾ ಒಳ್ಳೆಯದು. ಸೂರ್ಯನಮಸ್ಕಾರ ಮಂತ್ರವೂ ಅಷ್ಟೆ. ಸೂರ್ಯನ ವಿವಿಧ ಹೆಸರುಗಳನ್ನು ಹೇಳಿ ನಮಗೆ ಬೆಳಕನ್ನೂ, ಆರೋಗ್ಯವನ್ನೂ ಕೊಡುವ ಸೂರ್ಯನಿಗೆ ನಮಸ್ಕರಿಸುವುದು. ಸೂರ್ಯ ಎಲ್ಲರಿಗೂ ಬೇಕಾದ ದೇವರು. ಸೂರ್ಯನಿಲ್ಲದಿದ್ದರೆ ಯಾವ ಜೀವಿಗಳೂ ಬದುಕಲು ಸಾಧ್ಯವಿಲ್ಲ. ಸೂರ್ಯನಿಂದ ಬೆಳಕು, ಶಕ್ತಿ, ವಿಟಮಿನ್ ಡಿ ಹೀಗೆ ಅಷ್ಟೆಲ್ಲ ಪಡೆಯುವಾಗ ಅವನ ಹೆಸರಿನಲ್ಲಿ ನಾಲ್ಕು ನಮಸ್ಕಾರ ಹಾಕಿದರೆ ನಮ್ಮ ಕೃತಜ್ಞತೆ ಅವನಿಗೆ ಸಲ್ಲುತ್ತದೆ ಅಷ್ಟೆ. ಅದನ್ನೇನು ಸೂರ್ಯ ಕೇಳುವುದಿಲ್ಲ. ನಮ್ಮ ಕರ್ತವ್ಯ ಅಷ್ಟೆ" ಎಂದೆ.

ಕೇರಳದಿಂದ ಬರುವವರಿಗೆ ರಕ್ಷಣೆ ಕೊಡಿ!

'ಕರ್ನಾಟಕ ಸರಕಾರವೇ, ಕೇರಳದಿಂದ ಮಂಗಳೂರಿಗೆ ಬರುವವರಿಗೆ ರಕ್ಷಣೆ ಕೊಡಿ' -ಇದು ಕೇರಳದ ಗೃಹಸಚಿವರ ಹೇಳಿಕೆ. ಹಿನ್ನೆಲೆ -ಮಂಜೇಶ್ವರ ಶಾಸಕರ ಪುತ್ರಿಯ ಅಪಹರಣ.

ದೇವರು-ಜಾತಿ-ಧರ್ಮ - ಭಾಗ - ೩

ಇದು ನನ್ನ ಹಳೆಯ ಬ್ಲಾಗಿನಲ್ಲಿ ವಾಸು ಅವರ ಪ್ರಶ್ಣೆಗೆ ಉತ್ತರ, ಬಹುಶ: ಇದು ಒ೦ದು ಬೇರೆಯ ಬ್ಲಾಗ್ ಆದರೆ ಚರ್ಛೆಗೆ ಅನುಕೂಲ ಅನಿಸಿತು..

ಗುಳೇಲಕ್ಕಮ್ಮ ಜಾತ್ರೆ

ನಾಡಿನಲ್ಲಿ ಹಲವಾರು ಜಾತ್ರೆಗಳಿವೆ. ಆದರೆ ಗ್ರಾಮಕ್ಕೆ ಗ್ರಾಮವೇ ಗುಳೇ ಹೋಗುವ, ಗ್ರಾಮವೆಲ್ಲ ಖಾಲಿಯಾಗಿರುವ ಜಾತ್ರೆ ನಡೆಯುವುದು ಅಪರೂಪ ಹಾಗೂ ವಿಶೇಷ.

ಈ ಜಾತ್ರೆಯ ವಿಶೇಷವೆಂದರೆ ಗ್ರಾಮಸ್ಥರೆಲ್ಲ ಒಂದು ದಿನದ ವ್ಮಟ್ಟಿಗೆ ಗ್ರಾಮ ತೊರೆಯುತ್ತಾರೆ. ಅದಕ್ಕೆಂದೇ ಇದಕ್ಕೆ ಗುಳೇ ಲಕ್ಕಮ್ಮ ಜಾತ್ರೆ ಎಂಬ ಹೆಸರು. ಗ್ರಾಮದಿಂದ ಹೊರಹೋಗುವ ಗ್ರಾಮಸ್ಥರು ಹೊರವಲಯದ ಹೊಲ, ತೋಟ, ಶಾಲೆಗಳ ಕೊಠಡಿ, ಗಿಡ-ಮರಗಳ ಕೆಳಗೆ ವಾಸ್ತವ್ಯ ಹೂಡುತ್ತಾರೆ.

ಗುಳೇಲಕ್ಕಮ್ಮ ಜಾತ್ರೆಯನ್ನು ಎಂದು ಆಚರಿಸಲಾಗುವುದು ಎಂದು ಗ್ರಾಮದಲ್ಲಿ ಮೊದಲೇ ಸಾರಲಾಗುವುದು. ಅಂದು ಬೆಳಿಗ್ಗೆ ದೈನಂದಿನ ಕಾರ್ಯಗಳು ಮುಗಿದನಂತರ. ಗ್ರಾಮಸ್ಥರು ತಮ್ಮ ಕುಟುಂಬ ಸಮೇತರಾಗಿ (ತಮ್ಮ ಸಾಕುಪ್ರಾಣಿಗಳನ್ನೂ ಸಹ ಕರೆದುಕೊಂಡು) ಗ್ರಾಮದ ಹೊರವಲಯದಲ್ಲಿ ಬೀಡುಬಿಡುತ್ತಾರೆ. ಗ್ರಾಮದ ಎಲ್ಲರೂ ಮನೆ ತೊರೆದಿದ್ದಾರೆಂದು ಖಚಿತವಾದ ನಂತರ ಗ್ರಾಮದೇವತೆಯನ್ನು ಗ್ರಾಮದ ದೈವಸ್ಥರು ಪೂಜಿಸಿ, ಕೊನೆಯಲ್ಲಿ ಗ್ರಾಮದಿಂದ ಹೊರತರುತ್ತಾರೆ. ಆಗ ಇಡೀ ಗ್ರಾಮ ಖಾಲಿಯಾಗಿರುತ್ತದೆ. ಗ್ರಾಮದ ಹೊರವಲಯದಲ್ಲಿ ಯಾರೂ ಒಳಪ್ರವೇಶಿಸದಂತೆ ಮುಳ್ಳುಬೇಲಿಯನ್ನು ಹಾಕಲಾಗುತ್ತದೆ. ಅಲ್ಲಿಗೆ ಜಾತ್ರೆಯ ಒಂದು ಹಂತ ಮುಗಿದಂತೆ. ಗ್ರಾಮಸ್ಥರು ತಾವು ಬೀಡುಬಿಟ್ಟಲ್ಲೇ ಒಲೆಹೂಡಿ ಸಿಹಿ ಅಡುಗೆ ಮಾಡುತ್ತಾರೆ. ಚೆನ್ನಾಗಿ ಊಟ ಮಾಡಿ ಹರಟೆ ಹೊಡೆಯುತ್ತಾರೆ. ಯಾರಾದರೂ ಅಪರಿಚಿತರು ಗ್ರಾಮಕ್ಕೆ ಬಂದಲ್ಲಿ ಅವರನ್ನು ಒಳಬಿಡದೆ, ಅವರಿಗೆ ಜಾತ್ರೆಯ ಬಗ್ಗೆ ತಿಳಿಹೇಳಿ ತಮ್ಮಲ್ಲಿಯೇ ಕರೆದೊಯ್ದು ಉಪಚರಿಸುತ್ತಾರೆ. ಸಂಜೆಯವರೆಗೂ ಈ ಪ್ರಕ್ರಿಯೆ ನಡೆಯುತ್ತದೆ. ಸಂಜೆಯಾದೊಡನೆ ಮೊದಲಿಗೆ ಗ್ರಾಮದೇವತೆಯನ್ನು ಪೂಜಿಸಿ, ದೇವತೆಯನ್ನು ಮೊದಲು ಗ್ರಾಮದೊಳಗೆ ಕರೆದೊಯ್ಯುತ್ತಾರೆ. ಹಿಂದಿನಿಂದ ಗ್ರಾಮಸ್ಥರು ತಮ್ಮ ಸಾಕುಪ್ರಾಣಿಗೆಳೊಂದಿಗೆ ಮನೆಗಳಿಗೆ ತೆರಳುತ್ತಾರೆ. ಇದೇ ಗುಳೇಲಕ್ಕಮ್ಮನ ಜಾತ್ರೆ.

ಓದಬೇಕೇಕೆ?

ನಾವು ಓದುವುದು ಏಕೆ? ಓದುವುದರಿಂದ ಏನು ಪ್ರಯೋಜನ. ಹೊಸ ವಿಷಯಗಳನ್ನು ತಿಳಿಯಲು ಅಥವಾ ತಿಳಿದುಕೊಂಡಿರುವ ವಿಷಯಗಳನ್ನೇ ಸ್ಪಷ್ಟವಾಗಿಸಲು ಓದಬೇಕೆಂದರೆ. ಓದದೇ ಇರುವ ಮಂದಿಯೂ ಇದಾರಲ್ಲ, ಅವರಿಗೆಲ್ಲ ಹೊಸ ವಿಷಯಗಳು ತಿಳಿಯುವುದಿಲ್ಲವೇ? ಇಷ್ಟಕ್ಕೂ ವಿಷಯಗಳನ್ನು ತಿಳಿಯುವುದರಿಂದ ಆಗುವ ಪ್ರಯೋಜನವೇನು?

ಕೆಳದಿ ಕವಿ ಮನೆತನ

ಕವಿ ಲಿಂಗಣ್ಣ (ಲಿಂಗಣ್ಣ ಕವಿ) ಕೆಳದಿ ಅರಸರ ಆಸ್ಥಾನ ಕವಿ. ಸುಮಾರು ಕ್ರಿ.ಪೂ. 1750 ಸಮಯದಲ್ಲಿದ್ದ ಈ ಕವಿಯ ಪೀಳಿಗೆಯವರಿಗೆ - ಕವಿ - ಎಂಬ ಉಪನಾಮ ಬಂದಿದೆ. ನಾನೂ ಕೂಡ ಇದೇ ವಂಶದ 9ನೇ ಪೀಳಿಗೆಯವನು! ಇದು ನನಗೆ ತಿಳಿದದ್ದು ಕೇವಲ 3 ವರುಷಗಳ ಹಿಂದೆ ಮಾತ್ರಾ!

ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ. . . . . . .

ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತ ವಿಚಾರಗಳನ್ನು ಹಲ್ಲುಬಿದ್ದ ಬಾಯಲ್ಲಿ ಅಸ್ಪಷ್ಟವಾಗಿ ಓದುತ್ತಿದ್ದ ಅಧ್ಯಕ್ಷೀಯ ಭಾಷಣದ ರೀತಿ ಬದಲಾಗಿ ಮಠ ಮಾನ್ಯಗಳನ್ನು., ವ್ಯವಸ್ಥೆಯನ್ನೂ ಛೀಕರಿಸುವ ಮೂಲಕ ಮಿಂಚಬಹುದೆನ್ನುವ ಮತ್ತು ಚಪ್ಪಾಳೆ ಗಿಟ್ಟಿಸಬಹುದೆನ್ನುವ ಅಪ್ಪಟ ಸತ್ಯ ಮತ್ತೆ ವಿಜೃಂಭಿಸಿದೆ. ಉಧ್ಘಾಟನೆಯ ನಂತರ ಮಾತ್ಯಾವುದೇ ಗೋಷ್ಠಿಗಳಲ್ಲೂ ಕಾಣಿಸಿಕೊಳ್ಳದ ಸಮ್ಮೇಳನಾಧ್ಯಕ್ಷರು ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮತ್ತೆ ವಿಜೃಂಭಿಸಿದ್ದಾರೆ. ಅಪರೂಪಕ್ಕೆಂಬಂತೆ ಮಾರುದ್ದದ ನಿರ್ಣಯಗಳ ಪಟ್ಟಿ ಬದಲಾಗಿ ಮೂರೇ ಮೂರು ನಿರ್ಣಯಗಳು ಸಮ್ಮೇಳನದ ಅಂಗಳದಿಂದ ಬಿಂಬಿಸಲ್ಪಟ್ಟಿವೆ.

ಅವ್ಯವಸ್ಥೆಯ ಆಗರವೆಂದು ನಮ್ಮ ಮಾಧ್ಯಮಗಳು ಈ ಸಮ್ಮೇಳನಕ್ಕೆ ಹಣಿಪಟ್ಟಿ ಕಟ್ಟಿದ್ದರೂ, ಈ ಹಿಂದಿನ ಸಮ್ಮೇಳನಗಲ್ಲೂ ಒಂದೆರಡು ದಿನಗಳ ಮಟ್ಟಿಗಾದರೂ  ಭಾಗವಹಿಸುತ್ತಲೇ ಇರುವ ನನಗೆ ಅದೇನೂ ವಿಶೇಷ ಎನ್ನಿಸಲೇ ಇಲ್ಲ. ಈ ಹಿಂದೆ ತುಮಕೂರಿನ ಸಮ್ಮೇಳನದಲ್ಲಿ ಊಟ ತಿಂಡಿಗಳ ಸರತಿಯಲ್ಲೇ ನಿಂತು ನಿಂತು ಸಮ್ಮೇಳನ ಅವಧಿ ಪೂರೈಸಿದ ಸ್ನೇಹಿತರ ಅನುಭವ ನೆನಪಾಯಿತು.

ಒಂದಿಷ್ಟು ಗಾದೆಗಳು

ಹುಳಿ ಮುಟ್ಟಿ ಕಿಲುಬು ಕೆಟ್ಟಿತು

ಮಾತಿಗೆ ಮಾತನ್ನೇ ಅಣಿ ಮಾಡಿ ಹೋವಾತನೇ ಜಾಣ

ಹೆಣ್ಣು ಅತ್ತರೆ ಕಣ್ಣೀರು ಮೃತ್ಯು

ಬಟ್ಟಾಣಿ ಮೊಕದವಳ ನೋಟ ಚೆನ್ನ, ಕಟ್ಟಾಣಿ ಬೊಂಬೆಯ ಕೂಟ ಚೆನ್ನ

ಹೆಣ್ಣಿನ ನಗೆ ನುಡಿ ಲೇಸು

ಗರಗಸದ ಬಾಯಿಗೆ ಮರ ಬಿದ್ದ ಹಾಗೆ

ವಿಧಿಯಿಂದ ಬಲ್ಲಿದರಿಲ್ಲ

ಮನ್ನಣೆ ಕರಗಿದ ಠಾವಿಂದ ಹಿಂದಕ್ಕೆ ಜರುಗು

ಜಾವಕ್ಕೆ ಬದುಕಿದರು ಹೇವಕ್ಕೆ ಬದುಕಬೇಕು