ಕೇರಳದಿಂದ ಬರುವವರಿಗೆ ರಕ್ಷಣೆ ಕೊಡಿ!

ಕೇರಳದಿಂದ ಬರುವವರಿಗೆ ರಕ್ಷಣೆ ಕೊಡಿ!

'ಕರ್ನಾಟಕ ಸರಕಾರವೇ, ಕೇರಳದಿಂದ ಮಂಗಳೂರಿಗೆ ಬರುವವರಿಗೆ ರಕ್ಷಣೆ ಕೊಡಿ' -ಇದು ಕೇರಳದ ಗೃಹಸಚಿವರ ಹೇಳಿಕೆ. ಹಿನ್ನೆಲೆ -ಮಂಜೇಶ್ವರ ಶಾಸಕರ ಪುತ್ರಿಯ ಅಪಹರಣ.

ಅಲ್ಲ, ನಮ್ಮ ಬೆಂಗಳೂರಿನಲ್ಲೇ ನಾವು ಇಷ್ಟೊಂದು ಕೇರಳೀಯರಿಗೆ ಆಶ್ರಯ ನೀಡಿದ್ದೇವೆ. ಆ ಎಂ.ಎಲ್.ಎ ಮಗಳು ಮಂಗಳೂರಿನಲ್ಲಿ ಕಾಲೇಜಿಗೆ ಬರುತ್ತಿದ್ದುದೇ ಕರ್ನಾಟಕದಲ್ಲಿ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ ಎಂದು. ಅದಿರಲಿ, ಅಲ್ಲಿನ ದಾಳಿಯ ಬಗ್ಗೆ ಬಂಧಿತರಾದವರಲ್ಲಿ ಬಹುತೇಕ ಕೇರಳದವರಿರಬೇಕು. ಅಂತಹ ಗೂಂಡಾಗಳನ್ನು ಇಷ್ಟು ಸಮಯ ಕೇರಳದವರೇ ತಾನೇ ಪೋಷಿಸುತ್ತಿದ್ದುದು? ಅವರು ಕರ್ನಾಟಕಕ್ಕೆ ಬಂದು ಅಲ್ಲಿಯವಳೊಬ್ಬಳನ್ನು ಅಪಹರಿಸಿದಂತೆ ಕರ್ನಾಟಕದ ಗೃಹ ಸಚಿವರು ಹೇಗೆ ತಾನೇ ತಡೆಯಲು ಸಾಧ್ಯ? ಘಟನೆಗೆ ಸಂಬಂಧಿಸಿಸಿದವರನ್ನು ಸರಕಾರ ಬಂಧಿಸಿದೆ, ಇನ್ನೂ ಕಾರ್ಯಾಚರಣೆ ಮುಂದುವರಿಸುತ್ತಿದೆ. ಅವರನ್ನು ಹಾಗೇ ಬಿಟ್ಟಿದ್ದರೆ ಸರಕಾರವನ್ನು ಟೀಕಿಸಬಹುದಿತ್ತು.ಅದಕ್ಕಿಂತ ಹೆಚ್ಚು ಇನ್ನೇನು ಮಾಡಬೇಕಿತ್ತು ನಮ್ಮ ಸರಕಾರ?

ಅದಿರಲಿ, ಆ ಘಟನೆ ನಡೆದ ದಿನವೇ ೯ ಉಗ್ರಗಾಮಿಗಳನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಈ ಸುದ್ದಿಯ ಮುಂದೆ ಆ ಸುದ್ದಿ ಮರೆಯಾಗಿರಬಹುದು. ಆ ಭಯೋತ್ಪಾದಕರೆಲ್ಲ ಕೇರಳದವರು, ಬೆಂಗಳೂರಿನಲ್ಲಿ ನಡೆದ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಅದರಲ್ಲೂ ಕೆಲವರು ಕೇರಳದ ಗೃಹ ಸಚಿವರ ಕ್ಷೇತ್ರದವರೇ. ಅವರಿಗೆ ಇದರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದೆಯೇ? ಕೇರಳ ಸರಕಾರವೇ, ನಿಮ್ಮವರು ಬಂದು ನಮ್ಮ ರಾಜ್ಯದಲ್ಲಿ ಧಾಳಿ ನಡೆಸುತ್ತಿದ್ದಾರೆ. ಅವರನ್ನು ಬೆಳೆಯದಂತೆ ನೋಡಿಕೊಳ್ಳುವ ಸಾಮರ್ಥ್ಯ ನಿಮಗಿಲ್ಲವಾದಲ್ಲಿ ನಮ್ಮ ಸರಕಾರದ ತಂಟೆಗೆ ಬರುವ ಅಗತ್ಯವಿಲ್ಲ. ಕೇರಳದಲ್ಲಿ, ಅದೂ ಆಡಳಿತ ಪಕ್ಷದವರಿಂದಲೇ ಎಷ್ಟು ರಾಜಕೀಯ ಕೊಲೆಗಳು ನಡೆಯುತ್ತಿವೆ ಎಂದು ನಮಗೆ ಚೆನ್ನಾಗಿ ಒತ್ತಿದೆ. ನಿಮ್ಮ ಒಳಗಿನ ರಾಜಕೀಯ ಸಮಸ್ಯೆಗಳನ್ನು ಮರೆಮಾಚಲು ನಮ್ಮನ್ನು ಅದರಲ್ಲಿ ತುರುಕಿಸಬೇಡಿ.ಸಾಧ್ಯವಾದಲ್ಲಿ ನಿಮ್ಮ ರಾಜ್ಯದ ಭದ್ರತೆಯ ಬಗ್ಗೆ ಗಮನ ಕೊಡಿ.

Rating
No votes yet

Comments