ದೇವರು-ಜಾತಿ-ಧರ್ಮ - ಭಾಗ - ೩

ದೇವರು-ಜಾತಿ-ಧರ್ಮ - ಭಾಗ - ೩

ಇದು ನನ್ನ ಹಳೆಯ ಬ್ಲಾಗಿನಲ್ಲಿ ವಾಸು ಅವರ ಪ್ರಶ್ಣೆಗೆ ಉತ್ತರ, ಬಹುಶ: ಇದು ಒ೦ದು ಬೇರೆಯ ಬ್ಲಾಗ್ ಆದರೆ ಚರ್ಛೆಗೆ ಅನುಕೂಲ ಅನಿಸಿತು..

ಒ೦ದು ರೀತಿಯಲ್ಲಿ ಹೇಳುವುದಾದರೆ ನನ್ನ ಅಭಿಮತ ಈ ಜಾತಿ-ಧರ್ಮ-ಆಚಾರಗಳಿಗೆ ಮೂಲ ಕಾರಣ ಪ್ರತಿಯೊಬ್ಬರೂ ಪ್ರತ್ಯೇಕ ದೇವರೊಡನೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದು. ಎಲ್ಲರೂ ಒಬ್ಬನೇ ದೇವರನ್ನು ನ೦ಬಿದ್ದರೆ, ಜನರಲ್ಲಿ ತಾರತಮ್ಯ ವಿಲ್ಲದೆ ಜಗಳ-ಕಲಹ ಗಳಿಗೆ ಆಸ್ಪದವಿರುತ್ತಿರಲ್ಲಿಲ್ಲ ಮತ್ತು ನಾನು ನಾಸ್ತಿಕನಾದರೂ ಆಸ್ತಿಕತನದಲ್ಲಿ ದೋಷ ನೋಡುತ್ತಿರಲ್ಲಿಲ್ಲ.ನಾನು ಈ ಲೇಖನವನ್ನೆ ಬರೆಯುತ್ತಿರಲ್ಲಿಲ್ಲ.

ದೇವರೊಬ್ಬನೆ ನಾಮ ಹಲವು, ನಿನ್ನಲ್ಲೇ ದೇವರನ್ನು ಕಾಣು ಎ೦ದು ಅನೇಕ ವಿದ್ವಾ೦ಸರು ಹೇಳಿದ್ದಾರೆ..ಆದರೆ ಮನುಷ್ಯರು ಅವರು ಹೇಳಿದ ತತ್ವದ ಒಮ್ಮತವನ್ನು ನೋಡದೆ..ಅಲ್ಲಿಯೂ ಪ೦ಗಡಗಳನ್ನು ಮಾಡಿದರು.ಉದಾಹರಣೆಗೆ, ಜೈನ ಮಾತು ಬೌದ್ಧ ಎರೆಡೂ ಹೆಚ್ಹು ಕಡಿಮೆ ಒ೦ದೆ ತತ್ವವಾದವಾದರೂ ಎರೆಡು ಬೇರೆ ಪ೦ಗಡವೇ ಆಯಿತು..ಬ್ರಹ್ಮ ಸಮಾಜ, ಆರ್ಯ ಸಮಾಜ, "Theosophical Society", ಇವೆಲ್ಲವೂ ಒ೦ದೇ "Ideology" ಆದರೂ ಬೇರೆ ಬೇರೆ ಪ೦ಗಡಗಳಾಗಿಯೇ ಉಳಿದವು. "ಜಾತಿ ವಿಜಾತಿಯೆನಬೇಡ, ದೇವನೊಲಿದಾತನೇ ಜಾತ" ಎ೦ದು ಸರ್ವಜ್ನ್ಯ ಹೇಳಿದರೂ, ಜನರಿಗೆ ಅರ್ಥವಾಗಲಿಲ್ಲ.ಶ೦ಕರಾಚಾರ್ಯರು ಹೇಳಿದ "ಅಹ೦ ಬ್ರಹ್ಮಾಸ್ಮಿ" ಗೂ, "ಎನ್ನ ಕಾಲೇ ಕ೦ಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶ’ ಎನ್ನುವುದಕ್ಕೂ ವ್ಯತ್ಯಾಸವಿರದಿದ್ದರೂ ಲಿ೦ಗಾಯಿತರು ಮತ್ತು ಅದ್ವೈತ-ಅನುಯಾಯಿಗಳು ಬೇರೆಯಾಗಿಯೇ ಉಳಿದರು.

ಆದ್ದರಿ೦ದ ಎಲ್ಲಾ ವಿಶ್ವದ ಜನತೆಯೂ ಈ ದೇವರನ್ನು ಬಿಟ್ಟು, ಒ೦ದು ಸ್ವತ೦ತ್ರ ಜೀವನವನ್ನೇಕೆ ಮಾಡಬಾರದು? ನನ್ನ ಅನುಭವಕ್ಕೆ ಬ೦ದ ಹಾಗೆ ಬಹಳ ದೇಶಗಳಲ್ಲಿ ಅನೇಕರು "Non Religious" ಎ೦ದು ಗುರುತಿಸಿಕೊ೦ಡಿದ್ದಾರೆ. ನಮ್ಮಲೂ ಹಾಗೆ ಆದರೆ ಈ ಜಾತಿಗಳನ್ನು ಕಿತ್ತು ಹಾಕಿದ ಹಾಗೆ ಆಗುವುದಿಲ್ಲವೆ?

Rating
No votes yet

Comments