ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

ವಿಂಡೋಸ್ ಅಪ್ಡೇಟ್ ಬಗ್ಗೆ ಗೊತ್ತಿರಬೇಕಲ್ವಾ ನಿಮಗೆ. ಅದೇ ರೀತಿ ಲಿನಕ್ಸ್ ಕೂಡ ಅಪ್ಡೇಟ್ ಮಾಡ್ಕೋ ಬಹುದು ಗೊತ್ತಾ?

System -> Administration -> Update Manager ನತ್ತ ಒಮ್ಮೆ ಕಣ್ಣಾಡಿಸಿ.

ಡ್ರೈವಿಂಗ್- ಮಜ,ತಲೆಬಿಸಿ ಇತ್ಯಾದಿ

ಐದನೇ ವಯಸ್ಸಿನಲ್ಲೇ ನನಗೆ ಡ್ರೈವಿಂಗ್ ಬರುತಿತ್ತು. ಬಸ್ ಬಿಡುತ್ತಿದ್ದೆ!! ಗಾಬರಿಯಾಗಬೇಡಿ. ಮನೆಯಲ್ಲಿದ್ದ ಹೊಲಿಗೆ ಮೆಷಿನ್‌ಏ ನನ್ನ ‘ಭಾರತ ಬಸ್’. ಈ ಡ್ರೈವಿಂಗ್ ಹುಚ್ಚು ಈಗಲೂ ಬಿಟ್ಟಿಲ್ಲ. ಪೆಟ್ರೋಲ್ ರೇಟ್ ಮತ್ತು ಟ್ರಾಫಿಕ್‌ನಿಂದಾಗಿ ಸ್ವಲ್ಪ ಕಮ್ಮಿಯಾಗಿದೆ.


ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಂಗೇರಿ ದಾಟಿದ ಮೇಲೆ ಎಕ್ಸಿಲರೇಟರ್ ಮೇಲೆ ಕಾಲಿಟ್ಟು ಹಾಯಾಗಿ ಮಲಗಿದರೂ ಮೈಸೂರು ತಲುಪಿರುತ್ತೀರಿ. ಅದೇ ಘಾಟ್ ರಸ್ತೆಯಲ್ಲಿ ವಾಹನ ಓಡಿಸುವ ಮಜವೇ ಬೇರೆ.

ಬರಹಕ್ಕೂ ಉಚ್ಚಾರಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿರಿ.

ಸಂಪದದ ಸದಸ್ಯರಲ್ಲಿ,

ನನ್ನದೊಂದು ವಿನಂತಿ. ನಾನು ಒಂದು ಪುಸ್ತಕದಿಂದ ಆಯ್ದ ಒಂದೆರಡು ವಾಕ್ಯಗಳನ್ನು ನಿಮ್ಮ ಮುಂದಿಡುತ್ತೇನೆ. ನೀವು ಇದನ್ನು ಯಾವ ರೀತಿಯಲ್ಲಿ ಉಚ್ಚಾರ ಮಾಡಿ ಓದುತ್ತೀರೋ ಅದೇ ರೀತಿ ಬರೆದು ತಿಳಿಸಬೇಕು. ಒಂದೇ ರೀತಿ ಇರುವ ವಾಕ್ಯ ಎಷ್ಟು ನಮೂನೆಯಲ್ಲಿ ಉಚ್ಚಾರಗೊಳ್ಳುತ್ತದೆ ಎಂದು ತಿಳಿಯುವ ಆಸೆ.

ಹೂ ಬಾಣ ಹಿಡಿದವಗೆ ಒಂದು ನಮನ

 

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ

ಇ೦ಕಾ - ಮುಗಿದುಹೋದ ಒ೦ದು ಯೋಧ ಜನಾ೦ಗದ ಕಥೆ ಭಾಗ ೧

ಕ್ರಿಸ್ತ ಶಕ 1200 ರಿ೦ದ 1535 ರ ಕಾಲದಲ್ಲಿ ದಕ್ಷಿಣ ಅಮೆರಿಕಾದಲ್ಲಿ, ಭೂ ಮಧ್ಯ ರೇಖೆಯಿ೦ದ ಚಿಲಿಯ ಪೆಸಿಫಿಕ್ ತೀರದವರಗೆ ಹಬ್ಬಿರುವ ಭೂಭಾಗವನ್ನೆಲ್ಲಾ ಆಕ್ರಮಿಸಿ, ಪ್ರಭುತ್ವ ಸಾಧಿಸಿದ್ದ ಮಹಾನ್ ಯೋಧ ಜನಾ೦ಗವೇ ಇ೦ಕಾ ನಾಗರೀಕತೆ. ಇ೦ಕಾ ಸಾಮ್ರಾಜ್ಯ ಆಗ ಪೆರುವಿನಲ್ಲಿ ಸ್ಥಾಪಿತವಾಗಿದ್ದ ‘ಮೋಛೆ’ ಜನಾ೦ಗವನ್ನು ಉರುಳಿಸುವ ಮೂಲಕ ಸ್ಥಾಪಿತವಾಯಿತೆ೦ದು ಹೇಳಲಾಗುತ್ತದೆ. ಇ೦ಕಾ ಜನರು ಮೂಲತಃ ಯೋಧರು. ಬಲಿಷ್ಠ ಹಾಗೂ ಪ್ರಬಲವಾದ ಸೇನೆಯ ಮೂಲಕವೇ ಅವರ ಅಸ್ತಿತ್ವ. ಇ೦ಥದೊ೦ದು ಉಗ್ರ ಆವೇಶಭರಿತ ಸೈನ್ಯ ಹಾಗೂ ಸ್ಪಷ್ಥ ಧಾರ್ಮಿಕ ನ೦ಬಿಕೆಗಳಿ೦ದಲೇ ಇ೦ದಿಗೂ ಈ ಜನಾ೦ಗ ಅಮೆರಿಕಾದ ಅತಿ ದೊಡ್ಡ ಮೂಲನಿವಾಸಿ ಸಮಾಜ ಎ೦ದು ಗುರುತಿಸಲ್ಪಡುತ್ತದೆ. 15ನೇ ಶತಮಾನದಲ್ಲಿ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ ಈ ಜನಾ೦ಗ 1535ರಲ್ಲಿ ಸ್ಪಾನಿಷ್ ಆಕ್ರಮಣಕಾರಿಗಳ ದೆಸೆಯಿ೦ದ ಹಠಾತ್ ಮತ್ತು ದಾರುಣವಾದ ಅ೦ತ್ಯ ಕ೦ಡಿತು. ಇ೦ಕಾಗಳ ಪಟ್ಟಣಗಳು, ಕೋಟೆ ಕೊತ್ತಲಗಳು ಹೆಚ್ಚಾಗಿ ಎತ್ತರದ ಪ್ರಸ್ಥಭೂಮಿಗಳಲ್ಲಿ ಅಥವಾ ಪರ್ವತಗಳ ಕಡಿದಾದ ಇಳಿಜಾರುಗಳಲ್ಲಿ ಸ್ಥಾಪಿತವಾದವುಗಳು. ಇ೦ಕಾಗಳ ವಾಸ್ತು ಶೈಲಿ ಇವತ್ತಿಗೂ ಬೆಚ್ಚಿಬೀಳಿಸುವಷ್ಟು, ನ೦ಬಲಸಾಧ್ಯವೆನಿಸುವಷ್ಟು ಸ೦ಕೀರ್ಣವಾದುದು ಮತ್ತು ಪರಿಪೂರ್ಣವಾದುದು. ಪ್ರತಿ ಪಟ್ಟಣದ ಕಲ್ಲು ಸೋಪಾನಗಳು ಪಟ್ಟಣದ ತುತ್ತ ತುದಿಯನ್ನು ತಲುಪುತ್ತವೆ.

ಇ೦ಕಾ ಕಟ್ಟಡಗಳ ಪ್ರತಿಯೊ೦ದು ಕಲ್ಲೂ ಟನ್‘ಗಟ್ಟಳೆ ತೂಕವಿರುತ್ತವೆ. ಇ೦ಥ ಬೃಹತ್ ತೂಕದ ಕಲ್ಲುಗಳ ಜೋಡಣೆ ಎಷ್ಟು ಅಚ್ಚುಕಟ್ಟಾಗಿರುತ್ತವೆ೦ದರೆ ಒ೦ದು ಗಡ್ಡ ಹೆರೆಯುವ ಬ್ಲೇಡ್ ಕೂಡಾ ಒಳಗೆ ನುಗ್ಗುವುದಿಲ್ಲ!! ಚಕ್ರದ ಉಪಯೋಗ ಗೊತ್ತಿಲ್ಲದ ಇ೦ಕಾಗಳು ತಮ್ಮ ಆ ಎತ್ತರದ ಜಾಗಗಳಿಗೆ ಇಳಿಜಾರುಗಳಿಗೆ ಬೆನ್ನ ಮೇಲೆ ಮತ್ತು ಲಾಮಾಗಳ ಮೇಲೆ ಹೊರಿಸಿ ಒ೦ದೊ೦ದು ಕಲ್ಲನ್ನೂ ಸಾಗಿಸಿದ್ದಾರೆ. ಪ್ರತಿ ಪಟ್ಟಣದ ಮಧ್ಯಭಾಗ ಸರ್ಕಾರಿ ಕಟ್ಟಡಗಳಿಗೆ ಮೀಸಲಾಗಿರುತ್ತದೆ ಹಾಗೂ ಅದನ್ನು ಆವರಿಸಿದ೦ತೆ ಜನಸಾಮಾನ್ಯರ ಮನೆಗಳು ಕಟ್ಟಲಾಗಿರುತ್ತದೆ. ಎಲ್ಲಾ ಕಟ್ಟಡಗಳೂ ಕಲ್ಲು ಕಟ್ಟಡಗಳಾಗಿದ್ದು ಹುಲ್ಲು ಛಾವಣಿಯನ್ನು ಹೊ೦ದಿರುತ್ತವೆ. 

ಬೆಂಕಿ ಕಡ್ಡಿಗಳು

ಬೆಂಕಿ ಕಡ್ಡಿಗಳು

ಬೆಂಕಿ ಕಡ್ಡಿಗಳು
ನಾನು,ನೀನು,ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು

ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ
ಒಬ್ಬರ ಮೇಲೊಬ್ಬರನ್ನು ತುರುಕಿ
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ.

ಬೇಕೆನಿಸಿದಾಗೆಲ್ಲ ನಮ್ಮಲ್ಲೊಭ್ಭರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ.
ಚಳಿಯ ಮೈಯನ್ನು ಕಾಯಿಸಿಕೊಳ್ಳುತ್ತಾರೆ.

ಕಾಮಧೇನುವಿನ ಹೆಜ್ಜೆಗಳು...

ಬಹುಶಃ ಹಳ್ಳಿ ಜನರಿಗೆ ಇದೆಲ್ಲಾ ಸಾಮಾನ್ಯವೇ.. ಇಲ್ಲ ಅಗತ್ಯ ಕೂಡ... ರೈತ ಜೀವನಕ್ಕೆ ಪಶುಪಾಲನೆ ಅವನ ಕೃಷಿಯಷ್ಟೇ ಮುಖ್ಯವಾದುದು. ಇಂದಿಗೂ ಮುಂಜಾನೆ 4 ಕ್ಕೆ ಎದ್ದು ಕಾಮಧೇನು ಮುಖ ನೋಡಿದ್ರೆ ಅಂದ ದಿನಕ್ಕೆ ಉತ್ತಮ ಆರಂಭವೆಂದು ಹಲವರು ನಂಬಿದ್ದಾರೆ. ನಡೆಯುತ್ತಲೂ ಇದೆ.

ಕಾಮಧೇನುವಿನ ಹೆಜ್ಜೆಗಳು...

ಬಹುಶಃ ಹಳ್ಳಿ ಜನರಿಗೆ ಇದೆಲ್ಲಾ ಸಾಮಾನ್ಯವೇ.. ಇಲ್ಲ ಅಗತ್ಯ ಕೂಡ... ರೈತ ಜೀವನಕ್ಕೆ ಪಶುಪಾಲನೆ ಅವನ ಕೃಷಿಯಷ್ಟೇ ಮುಖ್ಯವಾದುದು. ಇಂದಿಗೂ ಮುಂಜಾನೆ 4 ಕ್ಕೆ ಎದ್ದು ಕಾಮಧೇನು ಮುಖ ನೋಡಿದ್ರೆ ಅಂದ ದಿನಕ್ಕೆ ಉತ್ತಮ ಆರಂಭವೆಂದು ಹಲವರು ನಂಬಿದ್ದಾರೆ. ನಡೆಯುತ್ತಲೂ ಇದೆ.