ಬರಹಕ್ಕೂ ಉಚ್ಚಾರಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿರಿ.

ಬರಹಕ್ಕೂ ಉಚ್ಚಾರಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿರಿ.

ಸಂಪದದ ಸದಸ್ಯರಲ್ಲಿ,

ನನ್ನದೊಂದು ವಿನಂತಿ. ನಾನು ಒಂದು ಪುಸ್ತಕದಿಂದ ಆಯ್ದ ಒಂದೆರಡು ವಾಕ್ಯಗಳನ್ನು ನಿಮ್ಮ ಮುಂದಿಡುತ್ತೇನೆ. ನೀವು ಇದನ್ನು ಯಾವ ರೀತಿಯಲ್ಲಿ ಉಚ್ಚಾರ ಮಾಡಿ ಓದುತ್ತೀರೋ ಅದೇ ರೀತಿ ಬರೆದು ತಿಳಿಸಬೇಕು. ಒಂದೇ ರೀತಿ ಇರುವ ವಾಕ್ಯ ಎಷ್ಟು ನಮೂನೆಯಲ್ಲಿ ಉಚ್ಚಾರಗೊಳ್ಳುತ್ತದೆ ಎಂದು ತಿಳಿಯುವ ಆಸೆ.
ಇದು ರವಿ ಬೆಳಗೆರೆಯವರ 'ನೀ ಹಿಂಗ ನೋಡಬ್ಯಾಡ ನನ್ನ' ಪುಸ್ತಕದಿಂದ ಆಯ್ದಿದ್ದೇನೆ.
ಶ್ರಾವಣಿಯನ್ನು ಬಿಡಲಾಗದೆ ಬಿಟ್ಟು ಆಟೋ ಹತ್ತಿಕೊಂಡು ಮನೆಗೆ ಹಿಂತಿರುಗಿದ್ದಳು ಪ್ರಶಾಂತಿನಿ. ರಾತ್ರಿ ಎಂಟಾಗುತ್ತಿತ್ತು. ಯಾವತ್ತೂ ಬಾರದ ಶಿಶಿರ, ಆವತ್ತು ಸಾಯಂಕಾಲವೇ ಮನೆಗೆ ಬಂದು ಬಿಟ್ಟಿದ್ದ.

ನಾನು ಮಂಗಳೂರು ಕನ್ನಡಿಗ. ನಾನು ಇದನ್ನು ಹೇಗೆ ಬರೆದಿರುವೆನೋ ಹಾಗೆ ಉಚ್ಚಾರ ಮಾಡುತ್ತೇನೆ.

ಬಿ. ವೆಂಕಟ್ರಾಯ

Rating
No votes yet

Comments