ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

ಲಿನಕ್ಸಾಯಣ - ೨೬ - ಲಿನಕ್ಸ್ ಅಪ್ಡೇಟ್

ವಿಂಡೋಸ್ ಅಪ್ಡೇಟ್ ಬಗ್ಗೆ ಗೊತ್ತಿರಬೇಕಲ್ವಾ ನಿಮಗೆ. ಅದೇ ರೀತಿ ಲಿನಕ್ಸ್ ಕೂಡ ಅಪ್ಡೇಟ್ ಮಾಡ್ಕೋ ಬಹುದು ಗೊತ್ತಾ?

System -> Administration -> Update Manager ನತ್ತ ಒಮ್ಮೆ ಕಣ್ಣಾಡಿಸಿ.

ಉಬುಂಟು ತಂಡ ಆಗಿಂದಾಗ್ಯೆ ಸೆಕ್ಯೂರಿಟಿ ಅಪ್ಡೇಟ್ಗಳು, ತಂತ್ರಾಂಶದ ಅಪ್ಡೇಟ್ ಗಳನ್ನ ನಿಮ್ಮ ಮುಂದಿಡುತ್ತದೆ. ನಿಮ್ಮ ಉಬುಂಟು ಇನ್ಸ್ಟಾಲ್ ಮಾಡಿರೋ ಸಿಸ್ಟಂ ಇಂಟರ್ನೆಟ್ಗೆ ಕನೆಕ್ಟ್ ಆಗಿದ್ರೆ ನೀವು ನಿಮ್ಮ ಅದನ್ನ ಅಪ್ಡೇಟ್ ಮ್ಯಾನೇಜರ್ ಉಪಯೋಗಿಸಿಕೊಂಡು  ಅಪ್ಡೇಟ್ ಮಾಡ್ಕೋ ಬಹುದು. 

ಮೇಲಿನ ಚಿತ್ರದಲ್ಲಿ "Check" ಕ್ಲಿಕ್ ಮಾಡಿ ನಂತರ "Install updates" ಕ್ಲಿಕ್ ಮಾಡಿದರೆ ನಿಮ್ಮ ಸಿಸ್ಟಂ ಅಪ್ಡೇಟ್ ಆಗ್ಲಿಕ್ಕೆ ಶುರು ಆಗತ್ತೆ. 

ಹನಿ:

ಅಪ್ಡೇಟ್ ಅನ್ನ ಲಿನಕ್ಸ್ ಕನ್ಸೋಲಿನಲ್ಲಿ ಮಾಡ್ಬೇಕೆ? ಕೆಳಗಿನ ಎರಡು ಕಮ್ಯಾಂಡುಗಳನ್ನ Application -> Accessories -> Terminal ತೆಗೆದ ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ.

sudo aptitude update

sudo aptitude upgrade

ಮತ್ತೊಂದು ಗುಟ್ಟು:

ಉಬುಂಟುವಿನ   ಮುಂದಿನ ಆವೃತ್ತಿ ಇನ್ನೇಳು ದಿನಗಳಲ್ಲಿ ಬಿಡುಗಡೆಯಾಗ್ತಿದೆ. ಅದನ್ನ ಹೊಸದಾಗಿ ರೀ ಇನ್ಟಾಲ್ ಮಾಡ್ಕೋ ಬೇಕಾ? ಇಲ್ಲ ಸಿಸ್ಟಂ ಅಪ್ಡೇಟ್ ಮಾಡ್ಕೊಂಡ್ರೆ ಸಾಕಾ?

ಇಲ್ಲಿದೆ ನೋಡಿ ಮಜಾ. ಲಿನಕ್ಸ್ ತನ್ನ ಆವೃತ್ತಿಯನ್ನ ತನ್ನಂತಾನೇ ಅಪ್ಡೇಟ್ ಮಾಡ್ಕೊ ಬಹುದು. ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ಇದ್ರೆ ಸಾಕು. ಇಲ್ಲ ಅಂತಂದ್ರೆ, ಹೊಸ ಆವೃತ್ತಿಯ ಸಿ.ಡಿ ನಿಮ್ಮ ಕೈಗೆ ಸಿಕ್ಕಾಗ ಅದನ್ನ ಉಪಯೋಗಿಸಿಕೊಂಡು ಕೂಡ ಅಪ್ಡೇಡ್ ರನ್ ಮಾಡ ಬಹುದು. ಇಲ್ಲಿ ಮತ್ತೆ ಹೊಸದಾಗಿ ಲಿನಕ್ಸ್ ಇನ್ಸ್ಟಾಲ್ ಮಾಡ್ಕೊಳ್ಳೋ ಪ್ರಮೇಯ ಬರೋಲ್ಲ. 

ನಾನಾಗಲೇ ಉಬುಂಟು ೮.೧೦ದ ಬೀಟಾ(ಪರೀಕ್ಷಾರ್ಥ ಡೆವೆಲಪರ್ ಆವೃತ್ತಿ) ವನ್ನ ನನ್ನ ಲ್ಯಾಪ್ಟಾಪ್ ನಲ್ಲಿ ಅಪ್ಡೇಟ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡ್ಕೊಂಡಿದೀನಿ.ಅದಕ್ಕೆ ಮಾಡಿದ್ದಿಷ್ಟೇ.

ಟರ್ಮಿನಲ್ ನಲ್ಲಿ ಕೆಳಗಿನ ಕಮ್ಯಾಂಡ್ ಟೈಪಿಸಿದೆ :

sudo update-manager -d

ಇದು ಬರೇ ಸಾಮಾನ್ಯ ಅಪ್ಡೇಟ್ ಅಲ್ಲದೆ ಹೊಸ ಉಬುಂಟು ಆವೃತ್ತಿ ಲಭ್ಯವಿರುವುದನ್ನೂ ಸೂಚಿಸುತ್ತದೆ. ಮುಂದೆ ಏನ್ ಮಾಡ್ಬೇಕನ್ನೋದು ನಿಮ್ಮ ಕಣ್ಮುಂದೆ ಇದೆ ನೋಡಿ ಸಾರ್!

Rating
No votes yet

Comments