ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುಹೂ ದನಿಯು ಕಿವಿ ತೂತ ಕೊರೆದಿತ್ತು!

ಕೋಗಿಲೆಯ ಕುಹೂ ದನಿಯು
ಕಿವಿ ತೂತ ಕೊರೆದಿತ್ತು!
ಚಿಟ ಪಟನೆ ಮಳೆ ಹನಿಯು
ಕಾದೆಣ್ಣೆಯಂತಿತ್ತು!
ಇವನ್ಯಾವ ಅರಸಿಕನೆಂದು
ಹಳಿಯಬೇಡಿರಿ ಎನ್ನ...

ಮೆತ್ತನೆಯ ಹಾಸಿರಲು
ಬೆಚ್ಚನೆ ನಾ ಹೊದ್ದಿರಲು
ತಿಳಿ ನಿದ್ದೆ ಹತ್ತಿರಲು...
ನಾ ಹೀಗೆ ಬಗೆದದ್ದು
ಸುಳ್ಳೇನೋ ಅಣ್ಣ???

--ಶ್ರೀ

ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!

ಇತ್ತೀಚೆಗೆ ತಾನೆ ಹೇಳಿದ್ದೆ, ಚುನಾವಣೆಲಿ ಗೆದ್ದು ಬಹಳ ದಿನ ಆದ್ರು ಕ್ಶೇತ್ರದ ಶಾಸಕರು, ಮಾಜಿ ಮುಖ್ಯ ಮಂತ್ರಿಗಳು ಆದ ಹೆಚ್.ಡಿ.ಕುಮಾರ ಸ್ವಾಮಿ ಕ್ಶೇತ್ರಕ್ಕೆ ಭೇಟಿ ನೀಡಿಲ್ಲ ಅಂತ. ಕೊನೆಗೂ ೨೮ರ ಅಗಸ್ಟ್ ೨೦೦೮ರಂದು ಶಾಸಕರು ಭೇಟಿ ನೀಡಿದ್ದಾರೆ.

ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.

ಇದೊಂದು ನನ್ನ ದುರ್ದೈವ. ಹೞಗನ್ನಡದಲ್ಲಿದ್ದ ೞ, ಱ ಮತ್ತು ನಡುಗನ್ನಡದಲ್ಲಿದ್ದ ಱ ಕುಱಿತು ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಕಿಟ್ಟೆಲ್‍ ಜರ್ಮನಿಯವನಾಗಿ ಈ ವಿಚಾರವಾಗಿ ಸೂಕ್ಷ್ಮವಾಗಿ ನೋಡಿದ ಮೇಲೆ ಬೇಱೊಬ್ಬ ಕನ್ನಡಿಗನನ್ನು ನಾನು ಕಾಣಲಿಲ್ಲ.

ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ನಿಮಗೊಂದು ಚೂರು ಮಾಹಿತಿ ತಿಳಿದಿದೆ. ಮತ್ತೊಬ್ಬರಿಗೊಂಚೂರು ಮಾಹಿತಿ ತಿಳಿದಿದೆ. ಈ ಮಾಹಿತಿಗಳ ಚೂರುಗಳನ್ನು ಒಂದೆಡೆ ಬೆಸೆದು, ಅತ್ತಿತ್ತ ಓದುತ್ತ, ಅಲ್ಲಿಲ್ಲಿ ಕೇಳಿದ್ದನ್ನು ಬೆಸೆಯುತ್ತ ಜೊತೆಗೂಡಿಸಿ ಸೇರಿಸುತ್ತ ಹೋದರೆ ಏನಾಗುತ್ತದೆ? ಅದು ವಿಕಿಪೀಡಿಯ. ಕೇಳಿದವರಿಗೆಲ್ಲ ನಾವು ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ ಎಂದು ಹೇಳುತ್ತೇವೆ. ಅದು ಯಾರೊಬ್ಬರೂ ಓದಬಹುದಾದ, ಹಾಗೂ ಎಡಿಟ್ ಮಾಡಬಹುದಾದ ವಿಶ್ವಕೋಶ ಎನ್ನುತ್ತೇವೆ. ಆದರೆ ಇದು ನಿರ್ಮಿತಗೊಳ್ಳುತ್ತಿರುವ ವಿಶ್ವಕೋಶ. ಇನ್ನೂ ಬರೆದು ಮುಗಿಸಿಲ್ಲದ ಪುಸ್ತಕದಂತೆ. ಈ ಜ್ಞಾನ ಭಂಡಾರ ನಿರ್ಮಾಣದಲ್ಲಿ ಎಲ್ಲರಿಗೂ ತಮ್ಮ ಜ್ಞಾನ ಕೂಡಿಡಲು ಒಂದು ಮುಕ್ತ ಅವಕಾಶ.

ಮಾಹಿತಿ ಹುಡುಕುತ್ತ ಹೋದವರಿಗೆ ಅಲ್ಲಿಲ್ಲಿ ಸಿಕ್ಕ ಮಾಹಿತಿಯ ಸತ್ಯಾಸತ್ಯತೆಯನ್ನು ಅಳಿಯಬೇಕೆಂಬ ಅರಿವು ಇರುತ್ತದೆ. ಎಲ್ಲೆಲ್ಲೂ ಸಿಗುವ ಮಾಹಿತಿ ಸತ್ಯವಿರಬೇಕಿಲ್ಲ, ನಾವುಗಳು ಸತ್ಯವೆಂದುಕೊಂಡು ನಂಬಿ ಮುನ್ನುಗುತ್ತೇವೆಯೇ ಹೊರತು ಸತ್ಯ ಹಾಗೂ ಸತ್ಯವಲ್ಲದ್ದನ್ನು ಅಳಿಯುತ್ತ ಸತ್ಯ-ಅಸತ್ಯದ ನಡುವಿನ ಹಂದರ ಕಂಡುಹಿಡಿಯಲು ಹೊಡೆದಾಡುವುದು ಜೀವನ ಪರ್ಯಂತ ಇದ್ದದ್ದೇ ಅಲ್ಲವೆ?

ಹಬ್ಬಗಳ ನಡುವೆ ಸಂಪದದ ಹಬ್ಬ

ಸಂಪದದ ಆಮಂತ್ರಣ  - ಗ್ನು/ಲಿನಕ್ಸ್ ಹಬ್ಬ - ಮೈಸೂರು ೨೦೦೮

ಸಾಲು ಸಾಲು ಹಬ್ಬಗಳ ಪಟ್ಟಿ ನಮ್ಮ ಕಣ್ಣ ಮುಂದಿರುವಾಗ ಕೆಲ ಹಿಂದೆ ಸಂಪದ ಬಳಗದ ಗೆಳೆಯರು ಶುರುಮಾಡಿದ ಗ್ನು/ಲಿನಕ್ಸ್ ಹಬ್ಬದ ನೆನಪಾಗಿ, ನಿಮ್ಮೆಲ್ಲರಿಗೆ ಮಾತು ಕೊಟ್ಟಂತೆ ಮತ್ತೆ ಹಬ್ಬವನ್ನ ನಿಮ್ಮೆಲ್ಲರೊಂದಿಗೆ ನಾಡ ಹಬ್ಬ ದಸರಾದ ಸುತ್ತಮುತ್ತ, ಮೈಸೂರಿನಲ್ಲೇ ಆಚರಿಸೋ ಕೆಲಸ ಶುರುವಾಗಿದೆ. ಮುಂದಿನ ತಿಂಗಳ ೨೧ ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮ ನೆಡೆಯೋದು ಹೆಚ್ಚು ಕಡಿಮೆ ನಿಶ್ಚಿತವಾಗಿದೆ. ಕಡೆಯ ಬಾರಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ನೆಡೆದ ಕಾರ್ಯಕ್ರಮಕ್ಕೆ ಟೊಂಕ ಕಟ್ಟಿ ನಿಂತು ವಾರಗಟ್ಟಲೆ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡಿದ ಮೈಸೂರಿನ ಗೆಳೆಯರು ಈ ಬಾರಿ ಅತಿಥೇಯರು, ಹಬ್ಬಕ್ಕೆ ಅಣಿ ಮಾಡುವುದರಲ್ಲಿ ಈ ಬಾರಿ ಅವರದ್ದೇ ಹೆಚ್ಚಿನ ಪಾತ್ರ.

ನೀನು ಯಾರೆ

ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ
ನಿನ್ನ ಹೆರಳೊಳಗಿತ್ತು ಮಲ್ಲಿಗೆಯ ದಂಡೆ
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ

ನೆಚ್ಚಿನ ಕವಿ ನರಸಿಂಹಸ್ವಾಮಿಯವರ ‘ನೀನು ಯಾರೆ’ ಕವಿತೆಯ ೪ ಸಾಲಿದು.

ಚೈನಾ ೧೦೦ ನಾವು ೦

ಚೀನಾ ದೇಶದಕ್ಕೂ ನಮಗೂ ಇರುವ ದೂರ ೧೦೦ ಒಲ೦ಪಿಕ್ಸ್ ಪದಕಗಳಷ್ಟೇ ಅಲ್ಲ. ಆ ನಾಡಿನಲ್ಲಿ ಚಿ೦ತನೆಗಳು ತೆರಳುವ ವೇಗ ಫಿರ೦ಗಿ ಗು೦ಡಾದರೆ, ನಮ್ಮದು ತಣ್ಣನೆಯ ಮ೦ಜಿನ ಗು೦ಡು. ಅಲ್ಲಿನ ರಾಜ್ಯಗಳು ಸ೦ಯುಕ್ತವಾಗಿದ್ದರೂ ಒಳ ಆಡಳಿತಕ್ಕೆ ಸಕ್ಕತ್ ಸ್ವಾತ೦ತ್ರ ಕೊಟ್ಟಿದಾರೆ.

ಆರದ ದೀಪ

ಎಷ್ಟೋ ವರ್ಷಗಳ ಹಿಂದಿನ ಮಾತು.

ಅವತ್ತು ಮೇಜಿನ ಮೇಲಿಟ್ಟಿದ್ದ ಅವನ ಡೈರಿ ತೆಗೆದು ನೋಡುತ್ತಿದ್ದೆ.

ತೆಗೆದ ತಕ್ಷಣ ಯಾವುದೋ ಸಡುವಿನ ಪುಟದಲ್ಲಿ ಕಂಡದ್ದು ಒಂದು ಕವಿತೆ.

ಪದ್ಯದ ಹೆಸರಲ್ಲೇ ಒಂದು ಹುಡುಗಿ ಕಂಡಳು! ಆಸಕ್ತಿಯಿಂದ ಓದತೊಡಗಿದೆನೆಂಬ ನೆನಪು.