ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?

೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ?

ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ ಬೇಡ ನಮಗೆ?

ನಾವು-ನಮ್ಮದು ಎನ್ನುವ ಭಾವನೆ ಸ್ವಲ್ಪವೂ ಇರಬೇಡವೆ?

Harry Potter ಕೊಳ್ಳಲು ರಾತ್ರಿಯಿಡೀ ಜನ ಕ್ಯೂ ನಿಂತಿದ್ದ್ರಂತೆ.

"ಕಾವೇರಿ - ಒಂದು ಚಿಮ್ಮು ಒಂದು ಹೊರಳು" ಪುಸ್ತಕ ಬಿಡುಗಡೆ

ಭಾಗ್ಯಲಕ್ಷ್ಮೀ ಪ್ರಕಾಶನ ಪ್ರಕಟಿಸಿರುವ ಪ್ರಸಿದ್ಧ ಸಾಹಿತಿ ಶ್ರೀ ಶೇಷನಾರಾಯಣ ಅವರ

ನಿರಾಳ

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟು
ಸರ್ವಸ್ವವ ನಿನ್ನ ಮಡಿಲಳಿಟ್ಟು
ತನ್ನ ತಾನಿರುವುದೇ ಏಳಿಗೆಯ ಗುಟ್ಟು

ಕಿರುಮನೆ, ನಡುಮನೆ....

ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು  ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ ಊರೇ ಕಡೆ ನಿಲುಗಡೆ( ಅದೇ ನಮ್ಮ ಕೆಂಪು ಬಸ್ಸು :) ). ಅದು ಒಂದು ಪುಟ್ಟ ಊರು. ಹೆಸರು ತರದಲೆ (ತರದೆಲೆ).

ಅಗಲಿಕೆಯ ನೋವು

ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ ಶಾಂತಮ್ಮನ ಕಣ್ಣೀರು ಬತ್ತಿರಲಿಲ್ಲ. ಬುದ್ದಿ ಬಂದಾಗಿನಿಂದ ಆತ್ಮೀಯರೆನಿಸಿಕೊಂಡವರ ವಿಯೋಗದ ನೋವನುಂಡು ಬದುಕಿದ ಜೀವವದು. ಸದಾ ಕುಡಿದು ಮನೆಗೆ ಬರುತಿದ್ದ ಅಪ್ಪ, ಅಪ್ಪನ ಏಟು ತಿಂದೂ ಆತನ ಸೇವೆ ಮಾಡುತ್ತಾ ಒದ್ದೆ ಸೆರಗಿನ ಜೊತೆ ಬದುಕುತಿದ್ದ ಅಮ್ಮ. ಆಗೆಲ್ಲ ಅರ್ಥವಾಗದ ಬದುಕಿನ ಅರ್ಥ ಹುಡುಕುವ ಎಳೆ ಜೀವವಾಗಿತ್ತದು. ಅಜ್ಜಿಯ ಸಾಂಗತ್ಯ ಇಲ್ಲದಿರುತ್ತಿದ್ದರೆ ಮೊಗ್ಗಲ್ಲೇ ಮುರುಟಿ ಹೋದ ಹೂವಗಿರುತ್ತಿದ್ದಳೇನೊ!

ತೀರ ಬಡತನದ ಬದುಕಾಗಿರಲಿಲ್ಲ ಶಾಂತಮ್ಮನ ಬಾಲ್ಯ. ಹಾಕಲು ಮೈ ತುಂಬ ಬಟ್ಟೆ, ಊಟಕ್ಕೆ ಹೊಟ್ಟೆ ತುಂಬ ಅನ್ನ, ಮಲಗಲು ಕೈ ಕಾಲು ಚಾಚಿದರೂ ಮಿಕ್ಕುವಷ್ಟು ಜಾಗವಿರುವ ಮನೆಗೇನು ತೊಂದರೆ ಇರಲಿಲ್ಲ. ಬಡತನಕ್ಕೆ ಮನೆ ತುಂಬ ಮಕ್ಕಳು, ಮೈ ತುಂಬ ಸಾಲ ಎಂಬ ಸಮಸ್ಯೆಯೂ ಇರಲಿಲ್ಲ. ಶಾಂತಿಯ ಇಲ್ಲದಿರುವಿಕೆ ಬಿಟ್ಟರೆ ಬೇರೆ ಯಾವ ಬಡತನವಿರಲಿಲ್ಲ.

ಜೂನ್ ತಿಂಗಳ ದಿಡೀರ್ ಮಳೆಗೆ ಸಿಕ್ಕಿ ಚಳಿ ಜ್ವರಕ್ಕೆ ಸಿಕ್ಕ ಅಜ್ಜಿಯ ಆರೋಗ್ಯ ಆಕೆಯನ್ನು ತಿರುಗಿ ಬಾರದ ಲೋಕಕ್ಕೆ ಕೊಂಡೊಯ್ಯುವಲ್ಲಿಗೆ ಕೊನೆಗೊಂಡಿತು. ಅಜ್ಜಿಯ ಸಾವು ಶಾಂತಮ್ಮನ ಬಾಲ್ಯದ ಮೇಲೆ ಅನುಭವಿಸಲಾರದಷ್ಟು ಪರಿಣಾಮ ಬೀರಿತ್ತು. ಒಂದಷ್ಟು ದಿನ ಮರಿಗುಬ್ಬಿಯಂತೆ ಮೂಲೆ ಸೇರಿ ಕೂತ ಪುಟ್ಟ ಹುಡುಗಿಗೆ ಕಳೆದುಕೊಂಡ ಅಜ್ಜಿಯ ಮಮತೆಯ ಅವಶ್ಯಕತೆ ಇತ್ತು. ಮೊದ ಮೊದಲು ಅಳುವ ಹುಡುಗಿಯ ನಿರ್ಲಕ್ಷಿಸುತಿದ್ದ ಅಮ್ಮ, ಕರುಳ ಕುಡಿಯ ನೋವಿನ ಪರಿದಿಯೊಳಗೆ ಬರತೊಡಗಿದಳು. ಅಜ್ಜಿಯ ಮಮತೆಯ ಜೊತೆಗೆ ತಾಯ ಒಲವು, ಪ್ರೀತಿ ಶಾಂತಮ್ಮನಿಗೆ ತುಸು ವಿಳಂಬವಾದರು, ತನ್ನ ತಾಯಿಯಿಂದಲೇ ದೊರಕಿತು. ಅಪ್ಪ ಕುಡುಕನಾದರೂ, ತಾಯಿಗೆ ಕಷ್ಟ ಕೊಡುತ್ತಿದ್ದರೂ, ಶಾಂತಮ್ಮನಿಗೆ ಯಾವುದೇ ಕಷ್ಟ ಕೊಡುತ್ತಿರಲ್ಲ, ಹಾಗೆ ಪ್ರೀತಿಯೂ ಸಿಗುತ್ತಿರಲಿಲ್ಲ.

ನಾ ನೋಡಿದ ಮೀರಾ ಮಾಧವ ರಾಘವ

ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ ಮೋಡಿಯನ್ನು ನೊಡುವ ಕಾತರ ಪಿವಿಆರ್ ಕಾಲಿಡುವವರಿಗೂ ಕಾಡುತ್ತಿತ್ತು.

ಕಳೆದ ವಾರದಲ್ಲಿ 'ಸಂಪದ'

ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿರಬಹುದು. ಹಿಡಿಸದಿದ್ದರೆ [:http://sampada.net/contact|ತಪ್ಪದೆ ನಮಗೆ ತಿಳಿಸಿ, ನಿಮ್ಮ ಸಲಹೆ/ಅಭಿಪ್ರಾಯಗಳನ್ನೂ ಕಳುಹಿಸುತ್ತಿರಿ]. ಸಂಪದಕ್ಕಾಗಿ ಕೆಲಸ ಮಾಡುತ್ತಿರುವ ನಾವೆಲ್ಲರೂ ಬಿಡುವಿನ ಸಮಯದಲ್ಲಿ ಈ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಸಲಹೆಗಳನ್ನು ಕೂಡಲೆ ಕಾರ್ಯಗತಗೊಳಿಸಲಾಗದಿದ್ದರೂ ಸಮಯವಾದಂತೆ ಖಂಡಿತ ಕೈಗೆತ್ತಿಕೊಳ್ಳುವೆವು.

ಹಾಗೆಯೇ ನೀವು ಕಳುಹಿಸಿದ ಸಂದೇಶಕ್ಕೆ ಹಿಂದೆ ಉತ್ತರ ಬಂದಿಲ್ಲವೆಂದು ಬರೆಯದೆ ಇರಬೇಡಿ. ಇ-ಮೇಯ್ಲುಗಳ dozeಉ ಹೆಚ್ಚಾದಾಗ ಹಲವು ಮೇಯ್ಲುಗಳು ಓದಲ್ಪಟ್ಟರೂ ಉತ್ತರ ಪಡೆಯದೆ ಕಳೆದುಹೋಗುತ್ತವೆ. [:http://sampada.net/forum/5085|ಕಳೆದ ವಾರ ಬರೆದ ಚರ್ಚೆಯ ವಿಷಯಕ್ಕೆ] ಸ್ಪಂದಿಸಿ ಆಸಕ್ತಿಯಿಂದ ಪತ್ರ ಬರೆದ ಎಲ್ಲ ಓದುಗರಿಗೂ ವಂದನೆಗಳು.

[:http://sampada.net/contact|ಬರೆಯುತ್ತಿರಿ].

- ಹರಿ ಪ್ರಸಾದ್ ನಾಡಿಗ್

ಸದಸ್ಯರ ಗಮನಕ್ಕೆ: ಸಂಪದದ ಸಕ್ರಿಯ ಸದಸ್ಯರಿಗೆ ಈಗ [:http://email.sampada.net|ಗೂಗಲ್ ವತಿಯಿಂದ username @ sampada.net ಎಂಬಂತಿರುವ] ಇ-ಮೇಯ್ಲ್ ಐಡಿ ಲಭ್ಯ (ಗಮನಿಸಿ: ಲಾಗಿನ್ info ಬೇರೆ ಬೇರೆ). ನಿಮಗೊಂದು ಐಡಿ ಬೇಕಿದ್ದರೆ [:http://sampada.net/contact|ನಮಗೊಂದು ಮೇಯ್ಲ್ ಹಾಕಿ]. (ಜೀಮೇಯ್ಲ್ ಐಡಿಯಂತೆಯೇ ಇದೂ ಕೂಡ, ಹೆಸರು ಮಾತ್ರ @sampada.net ಎಂದಿರುತ್ತದೆ. ಮತ್ತೇನೂ ವಿಶೇಷವಿಲ್ಲ. ಸ್ಟ್ರಿಕ್ಟಾಗಿ ಸಕ್ರಿಯ ಸದಸ್ಯರಿಗೆ ಮಾತ್ರ.)

ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?).

ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳುತ್ತೇನೆ.

ನಮ್ಮ ಮನೆಮಾತು ಕನ್ನಡವಲ್ಲ, ಹಿಂದಿಜಾತಿಯ ಒಂದು ಉಪಭಾಷೆ.

ಪ್ರಜಾಪ್ರಭುತ್ವದಲ್ಲಿ ನಕ್ಸಲರಿಗೆ ಸ್ಥಳವಿಲ್ಲ...

ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ ನಕ್ಸಲೀಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಅಲ್ಲಿನ ಆದಿವಾಸಿ ರೈತರು. ಆ ಐದು ಜನರ ಮರಣದ ನಂತರ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಂದ ನಕ್ಸಲೀಯ ಚಟುವಟಿಕೆಗಳ ಬಗ್ಗೆ ಸುದ್ದಿಗಳು ಬರುತ್ತಲೆ ಇವೆ. ಅಲ್ಲಿ ಮನೆ ದೋಚಿದರು, ಇಲ್ಲಿ ಧಮಕಿ ಹಾಕಿದರು, ಅಲ್ಲಿ ಎ.ಎಸ್.ಐ. ಗೆ ಗುಂಡು ಹೊಡೆದರು, ಇತ್ಯಾದಿ. ಈ ಮಧ್ಯೆ, ಇವುಗಳಲ್ಲಿ ಕೆಲವನ್ನು ದುಷ್ಕರ್ಮಿಗಳೆ ಮಾಡಿ ಅವನ್ನು ನಕ್ಸಲೀಯರ ಮೇಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಮತ್ತು ಸಂದೇಹಗಳು ಬೇರೆ.

ಆದರೆ, ಬೇರೆಯವರು ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾರೆ ಎನ್ನುವುದು ನಕ್ಸಲೀಯರು ಮಾಡುತ್ತಿರುವ ಮತ್ತು ಈಗಾಗಲೆ ಮಾಡಿರುವ ಕಾನೂನುಬಾಹಿರ ಕೆಲಸಕ್ಕೆ ವಿನಾಯಿತಿ ಕೊಡುವುದಿಲ್ಲ. ನಕ್ಸಲೀಯರು ಭಾರತದ ಪ್ರಜೆಗಳು ಒಪ್ಪಿಕೊಂಡಿರುವ ಸಂವಿಧಾನಕ್ಕೆ ಬಾಹಿರವಾದ ಭೂಗತ ಚಟುವಟಿಕೆ ಮಾಡುತ್ತಿರುವುದಾಗಲಿ, ಮಲೆನಾಡಿನ ಕೆಲವು ಕಡೆ ಜನರನ್ನು ಹೆದರಿಸಿರುವುದಾಗಲಿ, ಈಗಾಗಲೆ ಹಲವು ಹೆಣಗಳನ್ನು ಉರುಳಿಸಿರುವುದಾಗಲಿ ಸುಳ್ಳಲ್ಲ. ಈಗಿರುವ ಮೂಲಭೂತ ಪ್ರಶ್ನೆ ಎಂದರೆ, ಲೈಸನ್ಸ್ ಇಲ್ಲದ ಬಂದೂಕು ಹಿಡಿದು ಪ್ರಜಾಪ್ರಭುತ್ವ ವಿರೋಧಿ ಕೃತ್ಯದಲ್ಲಿ ತೊಡಗಿರುವ ನಕ್ಸಲೀಯರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿದೆಯೆ ಎನ್ನುವುದು.

ಮುದನೀಡುವ "ಮೀರಾ ಮಾಧವ ರಾಘವ"

ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು ಬಂದಿದ್ದರು.