ಅಗಾಧ ಸಾಧ್ಯತೆಗಳ ನ್ಯಾನೊ ಕಾರು...
ಟಾಟಾದವರ ನ್ಯಾನೊ ಕಾರು ಇನ್ನೇನು ಆರು ತಿಂಗಳಿನಲ್ಲಿ ಭಾರತದಾದ್ಯಂತ ಎಲ್ಲೆಲ್ಲೂ ಓಡಾಡಲಿದೆ. ಒಂದು ಲಕ್ಷ ರೂಪಾಯಿ ಎನ್ನುವುದು ಇದರ ಅಗ್ಗಳಿಕೆ ಆಗಿದ್ದರೂ, ನನ್ನ ಪ್ರಕಾರ ಈ ಕಾರಿನ "ಸಣ್ಣತನ" ಅನೇಕ ಪಾಸಿಟಿವ್ ಪ್ರಭಾವಗಳನ್ನು ಬೀರಲಿದೆ. ಭಾರತದಲ್ಲಿ ಇದಕ್ಕಿಂತ ದೊಡ್ಡ ಕಾರುಗಳ ಮಾರಾಟ ನ್ಯಾನೊವಿನಿಂದಾಗಿ ಇಳಿಮುಖವಾಗದಿದ್ದರೂ ಬೇಡಿಕೆಯ ಶೇಕಡಾವರು ಪ್ರಮಾಣ ನ್ಯಾನೊ ಇಲ್ಲದಿದ್ದರೆ ಏನಿರುತ್ತಿತ್ತೊ ಅದಕ್ಕಿಂತ ಕಮ್ಮಿ ಆಗುವುದಂತೂ ನಿಶ್ಚಿತ. ಹಾಗಾಗಿ ಪರೋಕ್ಷವಾಗಿಯೂ ಪರಿಸರಕ್ಕೆ ಒಳ್ಳೆಯದೆ. ಇದೆ ಎಳೆಯ ಮೇಲೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಈ ವಾರದ "ಅಮೇರಿಕದಿಂದ ರವಿ" ಅಂಕಣ ಲೇಖನ ಬರೆದಿದ್ದೇನೆ. ಪೂರ್ಣ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.
ಇದೇ ಲೇಖನದಲ್ಲಿ ಅಮೇರಿಕದ ದೈತ್ಯ ತೈಲ ಕಂಪನಿಗಳು ಮತ್ತು ಆಟೊಮೊಬೈಲ್ ಕಂಪನಿಗಳು ಸೇರಿಕೊಂಡು ಹತ್ತು ವರ್ಷಗಳ ಹಿಂದೆಯೆ EV1 ಎಂಬ ಒಂದು ಉತ್ತಮ ವಿದ್ಯುತ್ ಕಾರನ್ನು ಕೊಂದು ಹಾಕಿದ ಕುರಿತಾದ ಟಿಪ್ಪಣಿಯೂ ಇದೆ.
Rating