ಏನಾಗಿದೆ ಉತ್ತರ ಭಾರತೀಯರಿಗೆ...

ಏನಾಗಿದೆ ಉತ್ತರ ಭಾರತೀಯರಿಗೆ...

ನನಗೆ ನಿನ್ನೆ ಒಂದು ಇ-ಮೇಲ್ ಬಂತು...
ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ..
http://varunbhat.wordpress.com/2008/01/18/difference-among-indians/

ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ..
ನನಗೆ ಅರ್ಥ ಆಗದೇ ಇರೋ ವಿಷಯ ಅಂದ್ರೆ, ಈ ನಾರ್ಥ್ ಇಂಡಿಯನ್ಸ್ ಯಾಕೆ ದಕ್ಷಿಣ ಭಾರತವನ್ನು ಇಷ್ಟು ಕೀಳಾಗಿ ನೋಡ್ತಾರೆ ??
ಇಲ್ಲಿ ಬಂದು ಯಾಕೆ ನಾವು ಹಿಂದಿ ಮಾತಾಡ್ಬೇಕು ಅಂತ ಅಪೇಕ್ಷೆ ಪಡ್ತಾರೆ.. ನಾವು ದೆಹಲಿಗೆ ಹೋಗಿ, ಅಲ್ಲಿಯ ಜನಕ್ಕೆ ಕನ್ನಡ ಅಥವ ತಮಿಳು ಮಾತಾಡಿ ಅಂತ ಹೇಳ್ತೀವಾ??

ನಾನು ಉತ್ತರ ಭಾರತೀಯರು ಇಲ್ಲಿ ಬರಬಾರ್ದು ಅಂತ ಹೇಳ್ತಾ ಇಲ್ಲ. ಆದರೆ ಇಲ್ಲಿ ಬರುವವರು ಉತ್ತಮ ಮನಸ್ಸುಳ್ಳ ಭಾರತೀಯರಾಗಿರ ಬೇಕು. ಭಾರತೀಯರಾದ ನಾವೆಲ್ಲ ಒಂದೇ ಅಂತ ಅವರಿಗೆ ತಿಳಿದಿರಬೇಕು.

ನಮ್ಮ ಜನರೇ (ಉತ್ತರ ಭಾರತೀಯರು) ಈ ರೀತಿ ವಿಚಿತ್ರವಾಗಿ ವರ್ತಿಸುವಾಗ, ಬ್ರಿಟಿಷರು ನಮ್ಮನ್ನು(ಭಾರತೀಯರನ್ನು) ಕೀಳಾಗಿ ಕಂಡಿದ್ದರಲ್ಲಿ ಆಶ್ಚರ್ಯವೇ ಇಲ್ಲ.

ಈ ರೀತಿಯ ಕ್ಷುಲ್ಲಕ ವಿಚಾರಗಳು, ದೇಶ ಪ್ರಗತಿಗೆ ಮಾರಕವಾಗುತ್ತವೆ.

-- ವರುಣ ಭಟ್

Rating
No votes yet

Comments