“ಟಾಪ್ ಮ್ಯಾನೇಜ್‍ಮೆಂಟ್” ಅಂದರೆ ಹೀಗೇನೇವೇಯೇ?

“ಟಾಪ್ ಮ್ಯಾನೇಜ್‍ಮೆಂಟ್” ಅಂದರೆ ಹೀಗೇನೇವೇಯೇ?

ಬರಹ

(ಎಲ್ಲಿಯೋ ಕೇಳಿದ್ದು)

- ನವರತ್ನ ಸುಧೀರ್

 

ಒಮ್ಮೆ ಬಿಸಿ ಗಾಳಿಯ ಬೆಲೂನಿನ ಬುಟ್ಟಿಯಲ್ಲಿ ಕೂತು ಪ್ರಯಾಣ ಮಾಡುತ್ತಿದ್ದವರೊಬ್ಬನಿಗೆ ದಾರಿ ತಪ್ಪಿ ಹೋಯಿತು. ತಾನೆಲ್ಲಿದ್ದೇನೆ ಎಂಬ ಅರಿವಾಗದೆ, ಸ್ವಲ್ಪ ಕೆಳಗಿನ ಸ್ತರಕ್ಕೆ ಇಳಿದು ಯಾರಾದರೂ ಕಾಣುವರೇ ಅಂತ ಸುತ್ತಲೂ ಕಣ್ಣು ಹಾಯಿಸಿದರು. ಅದಾಗಲೆ ಅವರಿಗೆ ನೆಲದ ಮೇಲೆ ಒಬ್ಬ ಯುವತಿ ಕಾಣಿಸಿದಳು.

ಪ್ರಯಾಣಿಕ ಅವಳನ್ನುದ್ದೇಶಿಸಿ “ ನೋಡಿ, ನಾನು ನನ್ನ ಸ್ನೇಹಿತನೊಬ್ಬನಿಗೆ ಇಲ್ಲಿಯೇ ಹತ್ತಿರದಲ್ಲಿ ಎಲ್ಲಿಯೋ ಒಂದು ಘಂಟೆ ಮುಂಚೆಯೇ ಭೇಟಿಮಾಡುತ್ತೇನೆ ಅಂತ ಮಾತು ಕೊಟ್ಟಿದ್ದೆ. ಆದರೆ ದಾರಿ ತಪ್ಪಿದ ಹಾಗಿದೆ. ಈಗ ನಾನೆಲ್ಲಿದ್ದೇನೋ ಗೊತ್ತಾಗ್ತಾಯಿಲ್ಲ. ದಯವಿಟ್ಟು ಸ್ವಲ್ಪ ತಿಳಿಸ್ತೀರಾ?” ಅಂತ ಕೇಳಿದ.

ಅದಕ್ಕವಳು “ ನೀವು ಈಗ ಭೂಮಿಯಿಂದ ಮೂವತ್ತೈದು ಅಡಿ ಎತ್ತರದಲ್ಲಿ ಇದ್ದೀರ. ನೀವಿರುವ ಜಾಗ ಲಾಂಗ್ಟಿಟೂಡ್ನ ೪೦ ಡಿಗ್ರಿ ಉತ್ತರಕ್ಕೆ ಮತ್ತು ಲ್ಯಾಟ್ಟಿಟ್ಯೂಡ್‍ನ ೫೫ ಡಿಗ್ರಿ ಪಶ್ಚಿಮಕ್ಕೆ ಇದೆ.” ಅಂದಳು.

ಪ್ರಯಾಣಿಕ “ನಿಮ್ಮ ಮಾತಿನಿಂದಲೇ ನೀವು ಎಂಜಿನಿಯರ್ ಅಂತ ತಿಳಿಯುತ್ತೆ. ನನ್ನ ಅನಿಸಿಕೆ ಸರಿಯಾ?” ಅಂದರು.

ಯುವತಿ “ ಹೌದು. ಅದು ಹೇಗೆ ಊಹಿಸಿದಿರಿ?” ಮರುಪ್ರಶ್ನೆ ಹಾಕಿದಳು.

ಪ್ರಯಾಣಿಕ “ ನೋಡಿ ತಾಂತ್ರಿಕ ದೃಷ್ಟಿಯಿಂದ ನೋಡಿದರೆ ನಿಮ್ಮ ಉತ್ತರ ಬಹಳ ನಿಖರವಾದದ್ದು. ಆದರೆ ಅದರಿಂದ ನನಗೇನೂ ಪ್ರಯೋಜನವಾಗಲಿಲ್ಲ.. ನನಗಿನ್ನೂ ದಾರಿ ತಪ್ಪಿದ ಅನುಭವ ಇದ್ದೇ ಇದೆ. ನಿಮ್ಮಿಂದ ನನಗೇನೂ ಸಹಾಯವಾಗಲಿಲ್ಲ ಅಂತ ವಿಷಾದವಾಗ್ತಾ ಇದೆ” ಅಂದರು.

ಯುವತಿ “ ನಿಮ್ಮ ಮಾತು ಕೇಳಿದರೆ ನೀವು “ಟಾಪ್ ಮ್ಯಾನೇಜ್‍ಮೆಂಟ್” ಅಧಿಕಾರಿ ಅಂತ ತೋರುತ್ತೆ.” ಅಂದಳು. ಪ್ರಯಾಣಿಕ “ ಅರೆ! ಹೌದಲ್ಲ! ನಿಮಗೆ ಅದು ಹೇಗೆ ಗೊತ್ತಾಯಿತು?”

ಯುವತಿ “ ನೋಡಿ ಸ್ವಾಮಿ! ನೀವೀಗ ಎಲ್ಲಿದ್ದೀರಿ, ಹೋಗಬೇಕೆಲ್ಲಿಗೆ ಅನ್ನೋದು ಗೊತ್ತಿಲ್ಲ ! ಬಿಸಿ ಗಾಳಿಯ ಬಲದಿಂದ ಅಷ್ಟೆತ್ತರ ಹೋಗಿ ಕುಳಿತಿದ್ದೀರಿ. ಗುರಿ ತಲುಪಲು ಎಷ್ಟು ದೂರ , ಹೇಗೆ ಹೋಗಬೇಕು, ಎಷ್ಟು ಸಮಯ ಬೇಕು ಅನ್ನೋ ಪರಿಜ್ನಾನ ಇಲ್ಲದಿದ್ದರೂ ಯಾರಿಗೋ ವಾಗ್ದಾನ ಬೇರೆ ಮಾಡಿಬಿಟ್ಟಿದ್ದೀರಿ. ಈಗ ಮಾರ್ಗದರ್ಶನಕ್ಕಾಗಿ ನಿಮಗಿಂತ ಕೆಳಗಿನಸ್ತರದಲ್ಲಿರುವವರನ್ನು ಅವಲಂಬಿಸಿದ್ದೀರಿ. ಇನ್ನೂ ಹೆಚ್ಚಾಗಿ ನಮ್ಮಿಬ್ಬರ ಭೇಟಿಯಾಗುವ ಮುನ್ನ ಯಾವ ಸ್ಥಿತಿಯಲ್ಲಿದ್ದಿರೋ ಈಗಲೂ ಅದೇ ಸ್ಥಿತಿಯಲ್ಲೇ ಇದ್ದರೂ ಕೂಡ ಈಗ ನಿಮ್ಮ ಅಸಹಾಯಕತೆಗಾಗಿ ನನ್ನನ್ನು ಕೋಸುತ್ತಿದ್ದೀರಿ.

ಇದರಿಂದಲೇ ತಿಳಿಯುತ್ತಲ್ಲವೇ ನೀವು ಟಾಪ್ ಮ್ಯಾನೇಜ್‍ಮೆಂಟಿಗೆ ಸೇರಿದವರೂ ಅಂತ!” ಎಂದು ರಾಗವೆಳೆದಳಂತೆ.