ಉಡುಪಿ-ಪರ್ಯಾಯದ ಬಗ್ಗೆ ಕವನ

ಉಡುಪಿ-ಪರ್ಯಾಯದ ಬಗ್ಗೆ ಕವನ

೧. ಬಾರೋ ಶ್ರೀ ಕೃಷ್ಣ

ವಿಷೇಶ ರಾಜಕೀಯ
ಸ್ಥಿತಿ ನೋಡಿ
ಆಸೆಯಾಗಿ
ಅನಿವಾರ್ಯವಾಗಿ
ಮರಳಿ ಬರುವನೋ
ರಾಜ್ಯಪಾಲ ಕೃಷ್ಣ?

ವಿಷಮಯ ರಾಜಕೀಯ
ಸ್ಥಿತಿ ನೋಡಿ
ಅಸಹ್ಯವಾಗಿ
ಅನಿವಾರ್ಯವಾಗಿ
ಎಂದೋ ಓಡಿ ಹೋಗಿದ್ದಾನೋ
ಲೋಕಪಾಲ ಶ್ರೀ ಕೃಷ್ಣ!

ದುರ್ಮನಸ್ಸಿನ
ಪೂಜೆಯ ಒಲ್ಲದೆ
ನಿಶ್ಕಲ್ಮಷ
ಭಕ್ತಿಗೆ ಒಲಿದೆ
ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ....

ಭೇದ-ಭಾವಗಳ
ಉಲ್ಲಂಘಿಸಿ,
ಅಸ್ಪೃಶ್ಯತೆಯ ಸಾಗರವ
ದಾಟಿಸಿ,
ಇವರ ಮನಗಳ
ಮನುಜ ಧರ್ಮದತ್ತ
ತಿರುಗಿಸು ಬಾ.

------------------------------------------------------

೨. ಡ್ರಮ್ಸ್ ಸ್ವಾಮಿ

ಅಜ್ಜಿ ಅಜ್ಜಿ
ನೋದಜ್ಜಿ
ಡ್ರಮ್ಸ್ ಬಡಿಯೋ
ಸ್ವಾಮೀಜಿ!
ಶಿವಮಣಿಯಂತೆ
ಅಲ್ವಾಜ್ಜಿ?

ಅಣ್ಣ ಅಣ್ಣ
ನೋಡಣ್ಣ
ಪ್ರಸಾದ ಎಸೆಯೋ
ಕೈಯನ್ನ!
ಕುಂಬ್ಳೆಗಿಂತ ಸ್ಪಿನ್ನಣ್ಣ?

"ಅಜ್ಜ ಏನಾರ ಹೇಳಜ್ಜ
ಇವರಿಬ್ಬ್ರ ನೋಡಿ ಹೇಳಜ್ಜ"

"ಆಡೋ ಮಕ್ಕ್ಯ, ಹಾಡೋ ಕಂದನ
ಮಠದಾಗ್ ಕೂಡಿ ಹಾಕ್ದಾಗ...
ಹಿಂಗೆ behave ಮಾಡ್ತಾರ!"

-------------------------------------------------------

ಹೊರಗಿನ ಕೊಂಡಿಗಳು:
http://www.deccanherald.com/Content/Sep62007/district2007090523646.asp

ಚಿತ್ರಗಳು:

ಡ್ರಮ್ಸ್ ಬಾರಿಸುವ ಸ್ವಾಮಿಜೀಯ ಬಗ್ಗೆ ಪ್ರಜಾವಾಣಿಯಲ್ಲಿ ಪಿ.ಮಹಮ್ಮದ್ ಅವರ ವ್ಯಂಗ್ಯ ಚಿತ್ರ:
http://i1.tinypic.com/835zxhz.jpg

ಡ್ರಮ್ಸ್ ಬಾರಿಸುವಲ್ಲಿ ಮಗ್ನರಾಗಿರುವ ಸ್ವಾಮೀಜಿ:
http://i1.tinypic.com/6xv2txx.jpg

ಡ್ರಮ್ಸ್ ಸ್ವಾಮಿಯ ಬಗ್ಗೆ ಪ್ರಜಾವಾಣಿಯಲ್ಲಿನ ವಾರ್ತೆ:
http://i17.tinypic.com/6q2rvqu.jpg

Rating
No votes yet