ಬೀರೂರು ಚಿದಂಬರ ಜೋಯಿಸ್
ಬಂಧು ಸಮಾಗಮಕ್ಕಿಂತ ಮಿಗಿಲಾದ ಲೌಕಿಕ ಸುಖವಿಲ್ಲ! - ಬೀರೂರು ಚಿದಂಬರ ಜೋಯಿಸ್
ಬಂಧು ಸಮಾಗಮಕ್ಕಿಂತ ಮಿಗಿಲಾದ ಲೌಕಿಕ ಸುಖವಿಲ್ಲ! - ಬೀರೂರು ಚಿದಂಬರ ಜೋಯಿಸ್
ಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲ
ನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.
ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;
ನೀವು ಕಟ್ಟಿಕೊಟ್ಟ ಬಣ್ಣ-ಬಣ್ಣದ ಕನಸುಗಳಿಗಿದು ನನ್ನ ನುಡಿ ನಮನ.
ನಾವೆಲ್ಲಾ ನಮ್ಮ ಭಾಷೆಗಾಗಿ ಹೋರಾಡ್ತಾ ಇರೋದು ಈ Globalization ಅನ್ನೋ ಪೀಡೆಯಿಂದ. ಈ Globalization ನಿಂದ, ಬಲಿಷ್ಟವಾದ್ದು ಬಹು ಬೇಗ ಎಲ್ಲಾ ಕಡೆ ಅವರಿಸುತ್ತೆ, ಹಾಗೆ Weak ಆಗಿರೋದು ಅಷ್ಟೇ ಬೇಗ ಮುದುಡಿ ಹೋಗತ್ತೆ.
ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿದ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ವಿವರಗಳು:
ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿಧ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ಜೊತೆಗೆ ಒಂದು ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ. ಅದರ ವಿವರಗಳು:
೨೩ ನೇ ಡಿಸೆಂಬರ್, ೨೦೦೬, ಶನಿವಾರ, ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗದಲ್ಲಿ ಕನ್ನಡ ಪುಸ್ತಕಮಾರಾಟ ಮಳಿಗೆ ಉದ್ಘಾಟನೆ ಸಮಾರಂಭ ಎರ್ಪಟ್ಟಿತ್ತು. ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಡಾ. ಶ್ರೀನಿವಾಸ್ ಮತ್ತು ಶ್ರೀ ಮಂಜುನಾಥ್ ಅತಿಥಿಗಳನ್ನು ಸ್ವಾಗತಿಸಿದರು. ಮೊದಲು ಶ್ರೀ. ಹಂಸಲೇಖ, ದೇಸಿ ಚಿಂತಕ, ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ,ಕನ್ನಡ ಪುಸ್ತಕ ಮಾರಾಟ ಮಳಿಗೆ ಉದ್ಘಾಟನೆಯನ್ನು ಮಾಡಿದರು. ನಂತರ ಮೊದಲನೆಯ ಮಹಡಿಯಲ್ಲಿ ಹವಾನಿಯಂತ್ರಿತ ಸಭಾಗೃಹದಲ್ಲಿ ಮುಂದಿನ ಕಾರ್ಯಕ್ರಮಗಳು ಪ್ರಾರಂಭವಾದವು.
ನನ್ನ ಹುಚ್ಚು ಮನಸ್ಸಿನ ಭಾವನೆಗಳನ್ನು ಶಬ್ದಗಳಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿರುವೆನು. ಈ ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ತಿದ್ದಿ ಆಶೀರ್ವದಿಸಬೇಕಾಗಿ ವಿನಂತಿ,
(....ಭಾಗ ೧ ರಿಂದ ಮುಂದುವರೆದಿದೆ...)
ಸ್ಥಳ 2: ಕನ್ನಡ ವಿಶ್ವವಿದ್ಯಾಲಯದ ಆವರಣ:
-------------------------------------------------------------------------------------------------------
(ಒಬ್ಬ ವ್ಯಕ್ತಿ ಕೈಯಲ್ಲೇನೋ ಹಿಡಿದು ನಡೆದು ಬರುತ್ತಿದ್ದಾನೆ. ಇನ್ನೊಬ್ಬ ಅವನನ್ನು ಕಂಡು ಮಾತನಾಡಿಸಲು ಕೂಗುತ್ತಾನೆ)
ನಾಣಿ ಸ್ನನಮಾಡಿ ಬಂದ, ಎಂದಿನ ಅಭ್ಯಾಸದಂತೆ
"ಗಂಗೇಚ ಯಮುನೆಚೈವ ಗೋದಾವರಿ ಸರಸ್ವತಿ
ನರ್ಮದೆ ಸಿಂಧು ಕಾವೇರಿ ಜಲೈಸ್ಮಿತ್ ಸನ್ನಿದಂ ಕುರು ||" ಎಂದು ಹೇಳತೊಡಗಿದ .....
ಇದ್ದಕ್ಕೆ ಇದ್ದ ಹಾಗೆ, ಆರ್ಕಿಮಿಡಿಸ್ ಗೆ ಬಾತ್ ಟಬ್ ನಲ್ಲಿ ಹೊಳೆದ ಹಾಗೆ, ತಾನು ಇರುವುದು ಇಗ್ಲಂಡ್ , ಇಲ್ಲಿ ಗಂಗೆ ಬರಲು ಹೇಗೆ ಸಾದ್ಯ ? ಅಥ್ವ ಕಾವೇರಿ ಬರಲು ಸಾದ್ಯವೇ ? ಎಂಬ ಪ್ರಶ್ನೆಗಳು ಬಂದರು, ಅಭ್ಯಾಸ ಬಿಡುವಂತಿಲ್ಲ ಅಂತ ಹೇಳಿ ಮುಗಿಸಿದ.
**
ತಾನು ಆಫೀಸ್ ಗೆ ಹೋಗಲು ಬುಕ್ ಮಾಡಿದ್ದ ಟ್ಯಾಕ್ಸಿ ಬಂದು ನಿಂತಿತ್ತು, ಬಾಗಿಲು ತೆಗೆದಾಗ ಅಲ್ಲೊಂದು ಚೀಟಿ ಸಿಕ್ಕಿತು. ಟ್ಯಾಕ್ಸಿಯಲ್ಲಿ ಹೋಗ್ತ ನೋಡಿದ "ಉತ್ತರ ಅಂಬ್ರಿಯ ವಾಟರ್ ಸಪ್ಲೈಯ್ ೨ ಗಂಟೆ ಇರುವುದಿಲ್ಲ " ಎಂದು ಬರೆದಿತ್ತು. ಇಲ್ಲಿ ಯಾವ ನದಿ ಎಂದು ಗೊತ್ತಾಗದಿದ್ದರು, ನಮ್ಮ ಬೆಂಗಳೊರಿನ ವಾಟರ್ ಸಪ್ಲೈಯ್ ತರಹ ಒಂದು ಇದೆ ಎಂದು ಗೊತ್ತಾತ್ತು !!!
**
ಶನಿವಾರ ತನ್ನ ಸ್ನೇಹಿತರೊಡನೆ ಮ್ಯುಸಿಯಮ್ ಗೆ ಪಾದ ಬೆಳೆಸಿದರು. ಆ ಮ್ಯುಸಿಯಮ್ ಡ್ಯನೊಸಾರ್ ಹುಟ್ಟಿದ್ದು, ಮಾನವ ಯಾವಾಗ ಭೊಮಿಗೆ ಬಂದ, ಭೊಮಿಯ ವಯಸ್ಸು ಎಷ್ಟು ? ಇದರೆ ಬಗ್ಗೆ ಸಾಕಷ್ಟು ಸಂಶೋದನೆ ನಡೆಸಿ ಇಟ್ಟಿದ್ದರು !!!. ಹಾಗೆ ನೋಡುತ್ತ ಹೋದಂತೆ ಅಲ್ಲೊಂದು ಟೈಂ ಮಷಿನ್ ಮಾದರಿ ಕಂಡಿತು!!! ಅದು ಒಂದು ರೀತಿ ಸಿಮುಲೇಷನ್ ತರಹ, ನಾಣಿ ಭಾರತವನ್ನು ಸೆಲೆಕ್ಟ್ ಮಾಡಿ, ಗುಂಡಿಯನ್ನು ವತ್ತಿದ, ತಕ್ಷಣ ಅದು ೩೦೦೦ ವರ್ಷಗಳ ಹಿಂದೆ ಭಾರತ ಎಲ್ಲಿತ್ತು ಎಂದು ತೋರಸತೊಡಗಿತು.... ಅದು ಭಾರತವನ್ನು ಭೊಮಿಯ ನಾರ್ತ್ ಪೊಲ್ ಬಳಿ ತೋರಿಸಿತು .....
ನಾಣಿ ಆಗ ನಾರ್ತ್ ಪೊಲ್ ಬಳಿ ಇದ್ದ ಭಾರತ ಇಕ್ವೆಟರ್ ಬಳಿ ಬರಲು ಹೇಗೆ ಸಾದ್ಯ ? ಭೊಮಿಯ ಪದರಗಳ ವ್ಯತ್ಯಸವಾಗಿ ಈಗೆ ಹಾಗಿರಬಹುದೇ? ಹಿಮಾಲಯ ಅಲ್ಲಿ ಇರುವುದಕ್ಕೆ ಅದೇ ಕಾರಣವೇ ? .... ಎಂಬ ಪ್ರಶ್ನೆಗಳು ತಲೆಗೆ ತುಂಬಿದವು ........
ಅಷ್ಟರಲ್ಲಿ "ಲೋ ನಾಣಿ, ನೋಡೊದು ಬಹಳ ಇದೇ ಬಾರಪ್ಪ, " ಅಂತ ಸ್ನೇಹಿತರು ಕರೆದ್ಯೊದರು ...
ಸಂಸ್ಕೃತ-ಕನ್ನಡ ಉಭಯಭಾಷಾ ಕೋವಿದರಾದ ನನ್ನ ಅಜ್ಜ ಬೀರೂರು ಚಿದಂಬರ ಜೋಯಿಸರು ವನಸುಮದಂತೆ ಬಾಳಿ-ಬದುಕಿದವರು. ಕಾಶೀಪಂಡಿತಸಭಾದಿಂದ "ಸಂಸ್ಕೃತಕವಿಕಂಠೀರವ" ಎಂಬ ಬಿರುದನ್ನೂ, ಕರ್ನಾಟಕ ಸರ್ಕಾರ-ಗಾಂಧೀ ಸ್ಮಾರಕ ನಿಧಿಯ ವತಿಯಿಂದ ಸುವರ್ಣ ಪದಕವನ್ನೂ ಗಳಿಸಿದ್ದ ಅಜ್ಜನ ಲೇಖನಿಯಿಂದ ಹಲವಾರು ಅತ್ಯುತ್ತಮ ಕೀರ್ತನೆ,ಭಜನೆ,ಕಾವ್ಯಗಳು ಹೊರಹೊಮ್ಮಿವೆ. ಇವರ ಆಯ್ದ ಭಜನೆ-ಕೀರ್ತನೆಗಳ ಸಂಕಲನವಾದ "ಭಜನಮಣಿಮಾಲಾ" ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಇದರಿಂದ ಆಯ್ದ ಗಣಪತಿಯನ್ನು ಸ್ತುತಿಸುವ ಕೀರ್ತನೆ "ಗಣೇಶ ಪಂಚರತ್ನ"ವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸಂಪೂರ್ಣ "ಗಣೇಶ ಅಥರ್ವಶೀರ್ಷ"ದ ಸಾರವನ್ನು ಈ ಭಜನೆಯ ಐದು ಚರಣಗಳಲ್ಲಿ ಕಾಣಬಹುದಾಗಿದೆ.