ಕನ್ನಡ ನೆಲದ ಚಂದದ ಮಲ್ಲಿಗೆ ಕುಸುಮ- 'ಇನ್ ಫೊಸಿಸ್' ಬೆಳ್ಳಿ- ಹಬ್ಬ ಆಚರಿಸಿತು ! !
ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ' ಮೈಸೂರಿನಲ್ಲಿ, ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಂಗ ಸಜ್ಜಿಕೆ ಎಲ್ಲಾ ವ್ಯವಸ್ಥಿತವಾಗಿದೆ. ಸ್ಥಳ : ಮೈಸೂರಿನ ಇನ್ಫೋಸಿಸ್ ಸಂಸ್ಥೆಯ, ೩೦೦ ಎಕರೆ ವಿಶಾಲ ವಿಶಾಲ ಭವ್ಯಾಂಗಣ ! ಪ್ಲ್ಯಾನಿಂಗ್ ಕಮೀಶನ್ ಉಪ ಅಧ್ಯಕ್ಷ, ಮೋನ್ಟೆಕ್ ಸಿಂಗ್ ಅಹ್ಲು ವಾಲಿಯ, ಕರ್ನಾಟಕದ ಮುಖ್ಯ ಮಂತ್ರಿ, ಕುಮಾರಸ್ವಾಮಿ, ನ್ಯಾಸ್ಡಾಕ್ ಸಿ.ಇ.ಒ, ಗ್ರೆವೀಲ್ಡ್, ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸಾ.೭-೩೦ ಕ್ಕೆ, ಶ್ರಿ. ನಾರಾಯಣಮೂರ್ತಿ ಯವರು, ಘಂಟೆ ಜಗ್ಗಿ ಬಾರಿಸಿದಾಗ, ನ್ಯೂಯಾರ್ಕ್ ನ, 'ಟೈಮ್ಸ್ ಸ್ಕ್ವೇರ್' ನಲ್ಲಿರುವ ೭ ಅಂತಸ್ತಿನ ಭವ್ಯ ಕಟ್ಟಡದಲ್ಲಿ ನ ತೆರೆಯಮೇಲೆ ಬೆಳ್ಳಿಹಬ್ಬದ ಸಮಾರಂಭದ ದೃಷ್ಯಗಳು ಮೂಡಿ ಬಂದವು ! ಮೈಸುರಿನ ೩,೦೦೦ 'ಇನ್ಫೋಶಿಯನ್ಸ್' ಸಂಭ್ರಮದಿಂದ ಹರ್ಷೋದ್ಗಾರ ಮಾಡಿ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಹೀಗೆ 'ಬೆಳ್ಳಿ ಹಬ್ಬ'ದ ಶುಭಾರಂಭವಾಯಿತು.