ಕಲ್ಲೆಂದು ತಿಳಿದು ವಜ್ರವನ್ನು ಎಸೆದೆನೇ ?
ಇತ್ತೀಚೆಗೆ ಜಯಂತ ಕಾಯ್ಕಿಣಿಯವರ ' ಶಬ್ದತೀರ' ಪುಸ್ತಕ ಬಂದಿದ್ದು ಅವರ Dots and lines ಜತೆ ಬೆಂಗಳೂರಿನಿಂದ ತರಿಸಿದ್ದೇನೆ. Dots and lines ಅನ್ನು ನನ್ನ ಅನೇಕ ಮಿತ್ರರು ಓದಿ ಸಂತೋಷಪಡುತ್ತಿದ್ದಾರೆ.
ಅದರಲ್ಲಿನ ಮುನ್ನುಡಿಯಿಂದ ನನಗೆ ಒಂದು ಲಾಭವಾಯಿತು . ಅವರ ಕಥೆಗಳು ನನಗೆ ಬಹಳ ಸೇರಿವೆ. ಅವರ ಪುಸ್ತಕಗಳನ್ನು ಇನ್ನು ಕೆಲ ಪುಸ್ತಕಗಳ ಜತೆಗೆ ಕೈಗೆಟುಕುವ ಹಾಗೆ ಇಟ್ಟುಕೊಂಡಿರುತ್ತೇನೆ. ಏನಾದರೂ ಬೇಸರವಾಗಿದ್ದರೆ ಅವನ್ನು ತೆಗೆದು ಕೆಲ ಪುಟ ಓದಿದರೂ ಸಾಕು ಮನಸ್ಸು ಪ್ರಫುಲ್ಲವಾಗುತ್ತದೆ.
ಅವರ ಕಥೆಗಳು ನನಗೆ ಸೇರಿವೆ. ಏಕೆ ? ಎಂದರೆ ನನ್ನಲ್ಲಿ ಉತ್ತರವಿಲ್ಲ. ಇಂಥ ಸಮಯ ಮುನ್ನುಡಿಗಳು , ವಿಮರ್ಶೆಗಳು ಹೆಚ್ಚಿನ ಬೆಲಕನ್ನು ಚೆಲ್ಲುತ್ತವೆ. ಹೀಗಾಗಿ ಕನ್ನಡದಲ್ಲೇ ಅವರ ಕಥೆಗಳನ್ನು ಓದಿದ್ದರೂ Dots and lines ಕೊಂಡಿದ್ದರಿಂದ ಅದರ ಮುನ್ನುಡಿಯ ಓದಿನ ಲಾಭವಾಯಿತು, ಕನ್ನಡೇತರರಿಗೆ ಈ ಪುಸ್ತಕ ಕೊಟ್ಟು ಕನ್ನಡ ಸಾಹಿತ್ಯದ ಕಿರು ಪರಿಚಯವನ್ನೂ ಮಾಡಿದಂತಾಯಿತು.
'ಶಬ್ದತೀರ' ಎರಡು ಭಾಗಗಳುಳ್ಳ ಪುಸ್ತಕ . ಮೊದಲ ಭಾಗ ಅವರ 'ಬೊಗಸೆಯಲ್ಲಿ ಮಳೆ'( ಅಂಕಣ ಸಾಹಿತ್ಯ) ಮಾದರಿಯ ಲೇಖನಗಳನ್ನು ಹೊಂದಿದೆ . ಎರಡನೆಯ ಭಾಗ ಇತರರ ಬರಹಗಳಿಗೆ ಅವರ ಟಿಪ್ಪಣಿ ಮತ್ತು ಪ್ರತಿಕ್ರಿಯೆಗಳನ್ನು ಹೊಂದಿದೆ.
ಅಯ್ಯೋ ನನ್ನ ಮೂರ್ಖತನವೇ , ಕಲ್ಲೆಂದು ತಿಳಿದು ವಜ್ರವನ್ನು ಎಸೆದೆನೇ ?
ಅಲ್ಲಿ ಶ್ರೀ ವ್ಯಾಸರಾವ್ ನಿಂಜೂರರ 'ಉಸಿರು' ಕಾದಂಬರಿಯನ್ನು ಅದ್ಭುತ ಎಂದು ಹೇಳಿದ್ದಾರೆ . ಇದೇ ಕಾದಂಬರಿಯನ್ನು ಓದಲು ಯತ್ನಿಸಿ ಓದಲಾಗದೆ ರದ್ದಿಗೆ ಹಾಕಿಬಿಟ್ಟಿದ್ದೇನೆ! .