ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಿಸುಮಾತು

ಹಿಡಿವೆ ನಿನ್ನ ನಾ ನಿದಿರೆಯಲಿ ಮರೆಯಲಾರೆ ನನ್ನನ್ನೀಗ ಬೇಡುವೆ ನೀನು ಭಯದಲಿ ಕಪಿಮುಷ್ಟಿಯಿದು ಸರಳವಲ್ಲ ಎಲುಬುಗಳು ನಿನ್ನವು ಚೂರಾಗುವುದು ಎನಗೆ ಚಿಂತೆಯಿಲ್ಲ ಉರಿಯುವುದೀಗ ನಿನ್ನಾತ್ಮ ನನ್ನ ರೋಷದ ಬೆಂಕಿಯಲಿ ಮೋಕ್ಷ ದೊರಕಬಹುದು ನಿನಗೂ ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ ಇದ್ದಾಗ ಕೇಳಲಿಲ್ಲ... ಈಗ ಆಲಿಸು ನೀ ಹುಲುಮಾನವ

ಆತ್ಮಹತ್ಯೆಯ ಸುತ್ತಮುತ್ತ

ಪೋಲು ಮಾಡಲು ಇರುವುದಿಷ್ಟು ಗಳಿಗೆ ಮುಚ್ಚುತಿಹುದು ನನ್ನ ಯೋಚನೆಗಳ ಮಳಿಗೆ ಕೆಲಸಕ್ಕೆ ಬಾರದ ಕಸ, ಆಚೆ ಹಾಕಿದ್ದಷ್ಟೇ ಏಳಿಗೆ ಸಾಧನೆಗಳು ಸಾಧನೆಗಳೋ ಆಕಸ್ಮ್ಕಿಕ ಘಟನೆಗಳೋ ? ವೀರ, ಈಗ್ಯಾಕೆ ಈ ಯೋಚನೆ, ನನ್ನ ಅಹಮ್ಮಿಗೂ ಬೇಕು ಸಾಧನೆಗಳ ಸೇವನೆ ಹೊರಗೆ ತೊಡಲು ಖಾದಿ ಒಳಗೆ ಹುಳುಕು ದೇಹ, ಕೊಳೆತ ಮನಸ್ಸು ಸಾಯಲು ಇದು ಒಳ್ಳೆಯ ವಯಸ್ಸು

ನಗುತಿಹ ಕುಂಕುಮ

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.

ಅರಗು

ಅರಗು

(ವೈಜ್ಞಾನಿಕ ಲೇಖನ)

ಪ್ರಾಚೀನ ಕಾಲದಲ್ಲಿಯೆ ಅರಗು ಮತ್ತು ಅರಗಿನ ಹಲವು ಉಪಯೋಗಗಳನ್ನು ಭಾರತೀಯರು ಅರಿತುಕೊಂಡಿದ್ದರೆಂದು ಅಥರ್ವವೇದದಲ್ಲಿ ಅರಗಿನ ಕುರಿತಾದ ಉಲ್ಲೇಖದಿಂದ ತಿಳಿದುಬರುತ್ತದೆ. ಮಹಾಭಾರತದ ಅರಗಿನ ಮನೆ (ಲಾಕ್ಷಾಗೃಹ)ಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು.

ಕರ್ಮಯೋಗಿ-ಭಾಗ ೨(ಚಿತ್ತ)

ಅಷ್ಟು ಸಣ್ಣ ಹುಡುಗನ ಬಾಯಿಂದ ಈ ತರಹದ ಮಾತುಗಳನ್ನು ಕೇಳಿದ ಭಾಗೀರಥಮ್ಮನವರು, ಮಗ ಎಷ್ಟು ಬೇಗ ಮಾನಸಿಕವಾಗಿ ಬೆಳೆದು ಬಿಟ್ಟಿದ್ದಾನೆ,ನಮ್ಮೆಲ್ಲರ ಕಷ್ಟಗಳನ್ನು, ದುಃಖವನ್ನೂ  ಅರಿತು ಈ ರೀತಿಯ ಮಾತನಾಡುತ್ತಿದ್ದಾನೆ ಎಂದು ಮನಗಂಡು, ಆನಂದದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಗದ್ಗದಿತರಾಗಿ ಹೇಳಿದರು "ಬೇಡ ಕಣೋ ಮಾರುತಿ.ಈ ತರ ಎಲ್ಲಾ ಮಾತಾಡಬೇಡ. ನೀನು ನಮ್ಮಗಳಿಗೋಸ್ಕರ ಇಲ್ಲಿಯ ತನಕ ಪಟ್ಟ ಶ್ರಮವೇ ಸಾಕಪ್ಪ. ನಮ್ಮದು ಹೇಗೋ ನಡೆಯುತ್ತೆ.ನೀನಿನ್ನೂ ಬೆಳೆದು ಫಲ ನೀಡಬೇಕಾದ ಮರ. ಈ ಸಸಿಯನ್ನ ಇಲ್ಲಿಯೇ ಚಿವುಟಿದರೆ ಆ ದೇವನೂ ನಮ್ಮನ್ನ ಮೆಚ್ಚಲಾರ. ಆದ್ದರಿಂದ ನೀನು ಶಿವಮೊಗ್ಗಾಕ್ಕೋ, ಮೈಸೂರಿಗೋ ಹೋಗಿ ಕಾಲೇಜು ಸೇರಿಕೊಂಡು ನಿನ್ನ ಓದನ್ನು ಮುಂದುವರೆಸು. ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ನಿನ್ನ ಬಾಳನ್ನು ಹಸನು ಮಾಡಿಕೋ. ಆಮೇಲೆ ನಮ್ಮ ಬಗ್ಗೆ ಯೋಚನೆ ಮಾಡು.ಅಲ್ಲಿಯವರೆಗೆ ನಮ್ಮಗಳ ಯೋಚನೆಯನ್ನು ಬಿಟ್ಟುಬಿಡು".

ಮನೆಗೆ ತಲುಪಿದ 'ಡಿಸ್ಕವರಿ'

ಸಂಯುಕ್ತ ರಾಷ್ಟ್ರದ 'ಡಿಸ್ಕವರಿ' ಸ್ಪೇಸ್ ಶಟ್ಟಲ್ [:http://today.reuters.com/news/NewsArticle.aspx?type=topNews&storyID=2005-08-09T122153Z_01_N09265357_RTRIDST_0_NEWS-SPACE-SHUTTLE-DC.XML|ಕ್ಷೇಮದಿಂದ ಬಂದಿಳಿಯಿತೆಂದು ರಾಯ್ಟರ್ಸ್ ವರದಿ ಮಾಡಿದೆ]. ಕೊಲಂಬಿಯಾ ದುರಂತದ ೨.೫ ವರ್ಷಗಳ ನಂತರ ನಡೆದ ಈ ಕಾರ್ನಾಮೆಗೆ ನಾಸಾ ೧ ಬಿಲ್ಲಿಯನ್ ಡಾಲರ್ ಖರ್ಚು ಮಾಡಿದೆಯಂತೆ!