ನನ್ನ ಇತ್ತೀಚಿನ ಓದು .
ಇಲ್ಲಿನ ( ಮುಂಬೈನ) ಸಾಹಿತ್ಯ ಅಕ್ಯಾಡೆಮಿಯಿಂದ ಇಪ್ಪತ್ತು ಪುಸ್ತಕಗಳನ್ನು ತಂದಿದ್ದೆನಲ್ಲ , ಅವು ಪೆಂಡಿಂಗ್ ಆಗಿ ಕೂತಿದ್ದವು.
ಅವುಗಳಲ್ಲಿ ಹಾವಿನ ಡೊಂಕು ಎಂಬುದೊಂದು ಸ್ವೀಡಿಶ್ ಕಾದಂಬರಿಯ ಅನುವಾದ . ಹಿಂದೆ ಮಯೂರದಲ್ಲಿ ಅದರ ಬಗ್ಗೆ ಬರೆದಿದ್ದರು . ಅವರ ದೈವಭಕ್ತಿ , ನಂಬುಗೆಗಳನ್ನೇ ಶೋಷಣೆಗೆ ಆಧಾರ ಮಾಡಲಾಗುತ್ತಿದೆ. ದೇವರಲ್ಲಿ ಅಚಲ ವಿಶ್ವಾಸ ಹೊಂದಿದ ಜನರನ್ನು ಶೋಷಿಸಲಾಗುತ್ತಿದೆ. ಅವರಿಗಾಗಲಿರುವ ತೀವ್ರ ಅನ್ಯಾಯವನ್ನು ತಪ್ಪಿಸಲು ದೇವರು ಹಸ್ತಕ್ಷೇಪ ಮಾಡುವನೇ ? ದೇವರು ಅವರ ಅನ್ಯಾಯವನ್ನು ತಡೆಗಟ್ಟದಿರಲು ಅವರು ಏನು ಮಾಡುತ್ತಾರೆ? ಹೃದಯಸ್ಪರ್ಶಿಯಾಗಿದ್ದು ಚೆನ್ನಾಗಿದೆ .
ಜತೆಗೆ ಉತ್ತರ ಕರ್ನಾಟಕದ ಜನಪದ ಕತೆಗಳು ಮತ್ತು ಜಾನಪದ ಮತ್ತು ಗಿರಿಜನರ ಕಥೆಗಳು ಎಂಬ ಪುಸ್ತಕಗಳು .ಒಟ್ಟು ೫೦೦ ಪುಟಗಳು ಇವನ್ನೂ ಓದಿ ಮುಗಿಸಿದೆ. ಇಲ್ಲಿ ಕೆಲವು ಕುತೂಹಲಕರ ಕಥೆಗಳು , ಶಬ್ದ ಸಮೂಹಗಳೂ ಸಿಕ್ಕವು.
ಭೀಮಾಯಣ ಎಂಬುದು ಮಲೆಯಾಳದಿಂದ ಅನುವಾದಗೊಂಡ ಕಾದಂಬರಿ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ತಕಳಿ ಶಿವಶಂಕರ ಪಿಳ್ಳೆಯವರು ಬರೆದದ್ದು . ಭೀಮನ ದೃಷ್ಟಿಕೋನದ ಕಥೆ ಎಂಬುದನ್ನು ಬಿಟ್ಟರೆ ವಿಶೇಷವೇನಿಲ್ಲ .
ಈಗ ಸದ್ಯ ಜಯಂತ್ ಕಾಯ್ಕಿಣಿಯವರ ಹೊಸ ಪುಸ್ತಕ 'ಶಬ್ದತೀರ' ಮತ್ತು ಅವರ ಅನೇಕ ಕತೆಗಳ ಇಂಗ್ಲೀಷ್ ಅನುವಾದ- 'DOTS AND LINES' ನನ್ನ ಕನ್ನಡೇತರ ಮಿತ್ರರಿಗಾಗಿ ತರಿಸಿದ್ದು -(ಮೂಲದ ಕತೆಗಳನ್ನು ನಾನೀಗಲೇ ಓದಿದ್ದರೂ ಇಂಗ್ಲೀಷಿನಲ್ಲಿ ಮತ್ತೆ ಓದುತ್ತಿದ್ದೇನೆ . ಮತ್ತು ನನ್ನ ಮಿತ್ರರೂ ಮಧ್ಯೆ ಮಧ್ಯೆ ಓದುತ್ತಿದ್ದಾರೆ . ) ಕಣ್ಣ ಮುಂದಿವೆ.