O L Nagabhushanaswami and Yeats
ವರ್ಷ: ೧೯೮೮. ಊರು: ಮೈಸೂರು. ಸ್ಥಳ: ಸರಸ್ವತಿಪುರಮ. ಮನೆ: ರಾಮಸ್ವಾಮಿಯವರ ಮನೆಯ ಹೊರ ಕೊಠಡಿ. ಪಾತ್ರಗಳು: ನಾನು, ಶಿವು, ರಾಮು ಹಾಗೂ ಓ. ಎಲ್. ನಾಗಭೂಷಣಸ್ವಾಮಿ. ಹಿನ್ನೆಲೆ: ಯೇಟ್ಸ್ ನ Prayer for my daughterನ ಚರ್ಚೆ. ಈ ಪ್ರಖ್ಯಾತ ಪದ್ಯ ಆಗ ನಮಗೆ ಬಿ.ಎ. ಪಠ್ಯದಲ್ಲಿತ್ತು. ರಾಮು ಮನೆಗೆ ಬಂದಿದ್ದ OLN ಅದು ಹೇಗೋ ಆ ಪದ್ಯವನ್ನು ನಮಗೆ ಕಲಿಸಲು ತೊಡಗಿದ್ದರು. ಅವರಾಗ ಶಿವಮೊಗ್ಗದಲ್ಲಿದ್ದರು ಅಂತ ನನ್ನ ನೆನಪು. ಅವರು ರಾಮುರ ಮಿತ್ರರು. ನಾವು ರಾಮುರ ಬಳಿ ಹೋಗಲು ಕಾರಣ ನಮ್ಮಲ್ಲಿ ಹುಟ್ಟಿದ್ದ ಸಾಹಿತ್ಯದಾಸಕ್ತಿ. ಶಿವು ಅದು ಹೇಗೋ ರಾಮುರ ಕಂಡು ಹಿಡಿದಿದ್ದ. ಅವರು ನಾನು ಈ ವರೆಗೆ ಕಂಡ ಸಜ್ಜನರಲ್ಲಿ ಮೇಲಿನವರು. ಸಚ್ಚಾ ದಿಲ್ ವಾಲಾ. ಶಿವು ಹೀಗೆ ಸಾಹಿತಿಗಳನ್ನು ಹುಡುಕುವಲ್ಲಿ ಚೆನ್ನಾಗಿದ್ದ. (ಈಗ ಎಲ್ಲಿದ್ದೀಯೋ ಮಾರಾಯನೇ)
ಮಹಾರಾಜಾ ಕಾಲೇಜಲ್ಲಿ ಒಳ್ಳೊಳ್ಳೆ ಅಧ್ಯಾಪಕರಿದ್ದರು. ಆದರೆ ಅಂದು OLN ಯೇಟ್ಸ್ ಪದ್ಯ ಕಲಿಸಿದಷ್ಟು ಸುಂದರವಾಗಿ, ವಿಷದವಾಗಿ ಯಾರೂ ಕಲಿಸಿರಲಿಲ್ಲ. ಈಗಲೂ ನನಗೆ ಆ ಪದ್ಯ ಇಷ್ಟವಾಗಲು OLN ರೇ ಕಾರಣ. ಅವರಲ್ಲಿ ಇದ್ದ ಪದ್ಯದ ಕುರಿತಾದ ಉಮ್ಮೀದು ಮಸ್ತಾಗಿತ್ತು. ಅಪಾರ ಮಾಹಿತಿ ಹಾಗೂ ವಿಷಯ ಕುರಿತ ಪ್ರೀತಿ ಅವರ ಆ ಅನಧಿಕೃತ ವರ್ಗದಲ್ಲಿಯೂ ತುಂಬಿ ಕಾಣುತ್ತಿತ್ತು. ನನಗೆ ಹಾಗೂ ಶಿವುಗೆ, ಅಂದಿನಿಂದ Yeats ಎಂದರೆ OLN ಪಾಠ ನೆನಪಾಗುತ್ತಿತ್ತು.
ಈಗ ಅವರು, ರಾಮು, ಶಿವು ಎಲ್ಲ ಎಲ್ಲಿ, ಎಲ್ಲಿ ಇದ್ದಾರೆ ಗೊತ್ತಿಲ್ಲ. ಇತ್ತೀಚೆ ಸಂಪದದಲ್ಲಿ OLN Swamy ಅವರ blog ಓದಿದಾಗ ಅವರೇ ಇರಬಹುದಾ ಅನಿಸಿತು. ಹೌದಾ, ನೀವೇನಾ?
Comments
ಓ ಎಲ್ ಎನ್ ಸ್ವಾಮಿಯವರು