ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂವಿಧಾನದ ಮಹತ್ವ

ಜನವರಿ 26ನೇ ದಿನಾಂಕವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ. ಎಲ್ಲಾ ಗಣರಾಜ್ಯ ಹೊಂದಿರುವ ದೇಶಗಳು ಪ್ರಜಾಪ್ರಭುತ್ವ ದೇಶಗಳೇ. ಆದರೆ ಎಲ್ಲಾ ಪ್ರಜಾಪ್ರಭುತ್ವ ದೇಶಗಳು ಗಣರಾಜ್ಯವನ್ನು ಹೊಂದಿಲ್ಲ. ಭಾರತ ಗಣರಾಜ್ಯ ಅಂದರೆ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ದೇಶ. ದಿನಾಂಕ 26.1. 1950 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನ.

Image

ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ

ನಂಜನಗೂಡಿಗೆ ಗರಳಪುರಿ, ದಕ್ಷಿಣಕಾಶಿ ಎಂದೂ ಮುಂತಾದ ಹೆಸರುಗಳಿವೆ. ಇಲ್ಲಿಯ ಕಪಿಲಾ ನದಿಯ ದಡದಲ್ಲಿ ಶ್ರೀಕಂಠೇಶ್ವರ ಅಥವಾ ನಂಜುಂಡೇಶ್ವರ ದೇವಾಲಯವಿದೆ. ಇದು ಕರ್ನಾಟಕದಲ್ಲಿ ಅತಿ ದೊಡ್ಡ ದೇವಾಲಯ. 385 ಅಡಿ ಉದ್ದ 160 ಅಡಿ ಅಗಲದ ವಿಸ್ತಾರದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ದೊಡ್ಡ 120 ಅಡಿಯ ಎತ್ತರದ ಗೋಪುರವಿದೆ. ಗೋಪುರದ ಮೇಲೆ 3 ಮೀಟರ್ ಎತ್ತರದ ಚಿನ್ನದ ಕಲಶಗಳಿವೆ ಹಾಗೂ ಎರಡು ಕೊಂಬುಗಳಿವೆ.

Image

ಬೇಂದ್ರೆ ಅಜ್ಜ ಇಲ್ಲದಿದ್ದರೇನಂತೆ, ಅವರಿತ್ತ ಕಲ್ಲುಸಕ್ಕರೆ ಇನ್ನೂ ಅಂಗೈಯಲ್ಲಿದೆ...

"ನಮ್ಮ ಸಾಲಿಗೆ ಒಮ್ಮೆ ಬೇಂದ್ರೆಯವರು ಬಂದಿದ್ದರು. ಹೆಣ್ಣು ಮಕ್ಕಳ ಸಾಲೀ. ಏನು ಭಾಷಣಾ ಮಾಡಬೇಕು ಪಾಪ ಅವರೇ. ಅರಿಬಿ ಭಾಳ ದಿನಾ ಬಾಳಿಕಿ ಬರಬೇಕಂದರ 'ಐದು ಬ' ಮಾಡಬಾರದು. ಭಾಳ ಬಿಸಿನೀರಾಗ ನೆನಸಬಾರದು. ಬಡದ ಬಡದ ಒಗೀಬಾರದು. ಬಿಗಿಯಾಗಿ ಹಿಂಡಬಾರದು. ಭಾಳ ಝಾಡಿಸಬಾರದು.

Image

ಹುತಾತ್ಮರ ದಿನದಂದು ಭಾರತೀಯ ನೆಲದ ಮಹಾತ್ಮರ ಹುಡುಕುತ್ತಾ....

ಯಾರು ಮಹಾತ್ಮರು ಯಾರು ಹುತಾತ್ಮರು? ಒಂದು ಹುಚ್ಚು ಪ್ರಶ್ನೆಗೆ ಸತ್ಯದ ಉತ್ತರ ಹುಡುಕುತ್ತಾ… 2025 ರ ವರೆಗಿನ ಭಾರತದ ಒಟ್ಟು ಇತಿಹಾಸದ ಪುಟಗಳಲ್ಲಿ ದಾಖಲಾದ ವ್ಯಕ್ತಿ ಮತ್ತು ಘಟನೆಗಳ ಆಧಾರದಲ್ಲಿ… ಜೊತೆಗೆ ಹೆಚ್ಚು ಜನರ ಮನಸ್ಸಿನಲ್ಲಿ ಈಗಲೂ ಹರಿದಾಡುತ್ತಿರುವ ಜನಪ್ರಿಯತೆಯ ಮಾನದಂಡದಲ್ಲಿ,... ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವ್ಯಕ್ತಿತ್ವಗಳ ‌ಆಧಾರದಲ್ಲಿ....

Image

ಸ್ಟೇಟಸ್ ಕತೆಗಳು (ಭಾಗ ೧೨೨೦) - ಅಹಂಕಾರ

ನಮ್ಮೊಳಗೆ ಒಬ್ಬ ಕುಳಿತವನಿದ್ದನಲ್ಲ ಹಾ ಅಹಂಕಾರ ಅಂತ ಅವನ ಹೆಸರು. ಅವನ ಜೊತೆಗೆ‌ ಕೈ ಮಿಲಾಯಿಸಿಕೊಂಡು ಅವನು ಹೇಳಿದಂತೆ ನಾವು ‌ನಡೆಯಲಾರಂಬಿಸಿದರೆ ನಮ್ಮನ್ನ ಖಂಡಿತಾ ಸರ್ವನಾಶ ಮಾಡುತ್ತಾನೆ. ನನಗೂ ಅವನ‌ ಪರಿಚಯವಾದದ್ದು ಇತ್ತೀಚಿಗೆ. ಮನೆಯವರ ಜೊತೆ ಕುಶಲೋಪರಿ ಮಾತನಾಡುವಾಗ ಹಾಸ್ಯದ ವಿಚಾರಗಳನ್ನ ಒಮ್ಮೆಲೆ ತಲೆಗೇರಿಸಿಕೊಂಡು ನಾನೇ ದೊಡ್ಡವ ಅನ್ನುವ ಅಹಂನಿಂದ, ನಾನೊಬ್ಬ ಸಾಧಕ, ನನಗೆ‌ ಹೇಳೋದ್ದಕ್ಕೆ ಇವರ್ಯಾರು?

Image

ನೆಲಬಸಳೆ ಸೊಪ್ಪಿನ ಮೊಸರು ಬಜ್ಜಿ

Image

ನೆಲಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ತಣಿದ ಮೇಲೆ ಇದಕ್ಕೆ ನೀರುಳ್ಳಿ, ಹಸಿಮೆಣಸನ್ನು ಹೆಚ್ಚಿ ಹಾಕಿ ಉಪ್ಪು, ಮೊಸರು ಬೆರೆಸಿ. ಉದ್ದಿನಬೇಳೆ, ಸಾಸಿವೆಯ ಒಗ್ಗರಣೆ ಕೊಡಿ. ಅನ್ನ ಅಥವಾ ಪಲಾವ್ ಜೊತೆ ಸವಿಯಿರಿ. ನೆಲಬಸಳೆ ಸೊಪ್ಪಿನಲ್ಲಿ ಖನಿಜಾಂಶ ಹೇರಳವಾಗಿದೆ.

ಬೇಕಿರುವ ಸಾಮಗ್ರಿ

ನೆಲಬಸಳೆ ಸೊಪ್ಪು ೧ ಮುಷ್ಟಿ, ನೀರುಳ್ಳಿ ೧, ಹಸಿಮೆಣಸು ೧, ಮೊಸರು ೧ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಉದ್ದಿನಬೇಳೆ ೧/೨ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧.

ಮಾತೃ ಛಾಯ (ಭಾಗ 2)

ಕಣ್ಣು ಮುಚ್ಚಿ ಕುಳಿತ ಛಾಯಾಳಿಗೆ ಹಾಗೆಯೇ ನಿದ್ದೆ ಹತ್ತಿತ್ತು. ಅಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಉದಾಸೀನದಿಂದಲೇ ಎದ್ದು ಚಾರ್ಜಿಗೆ ಹಾಕಿದ್ದ ಮೊಬೈಲ್ ಕೈಗೆ ಎತ್ತಿ ಕೊಂಡಳು. ರೋಹನ್ ನ ಕರೆ. ಬಸವಳಿದ ಇವಳ ಮುಖದಲ್ಲಿ ಕಿರುನಗೆ ಒಂದು ಮಿಂಚಿತು. ತಕ್ಷಣವೇ ಕಾಲ್ ರಿಸೀವ್ ಮಾಡಿ ' ಹಲೋ' ಎಂದಳು. ಅತ್ತ ಕಡೆಯಿಂದ ಅದೇ ಸ್ಟೈಲಿಶ್ ಧಾಟಿಯಲ್ಲಿ ' ಹಲೋ ಮ್ಯಾಮ್.. ಹೌ ಆರ್ ಯ..?

Image