ಸ್ಟೇಟಸ್ ಕತೆಗಳು (ಭಾಗ ೧೨೨೦) - ಅಹಂಕಾರ

ಸ್ಟೇಟಸ್ ಕತೆಗಳು (ಭಾಗ ೧೨೨೦) - ಅಹಂಕಾರ

ನಮ್ಮೊಳಗೆ ಒಬ್ಬ ಕುಳಿತವನಿದ್ದನಲ್ಲ ಹಾ ಅಹಂಕಾರ ಅಂತ ಅವನ ಹೆಸರು. ಅವನ ಜೊತೆಗೆ‌ ಕೈ ಮಿಲಾಯಿಸಿಕೊಂಡು ಅವನು ಹೇಳಿದಂತೆ ನಾವು ‌ನಡೆಯಲಾರಂಬಿಸಿದರೆ ನಮ್ಮನ್ನ ಖಂಡಿತಾ ಸರ್ವನಾಶ ಮಾಡುತ್ತಾನೆ. ನನಗೂ ಅವನ‌ ಪರಿಚಯವಾದದ್ದು ಇತ್ತೀಚಿಗೆ. ಮನೆಯವರ ಜೊತೆ ಕುಶಲೋಪರಿ ಮಾತನಾಡುವಾಗ ಹಾಸ್ಯದ ವಿಚಾರಗಳನ್ನ ಒಮ್ಮೆಲೆ ತಲೆಗೇರಿಸಿಕೊಂಡು ನಾನೇ ದೊಡ್ಡವ ಅನ್ನುವ ಅಹಂನಿಂದ, ನಾನೊಬ್ಬ ಸಾಧಕ, ನನಗೆ‌ ಹೇಳೋದ್ದಕ್ಕೆ ಇವರ್ಯಾರು? ಈ ಮಾತುಗಳನ್ನ ಒಳಗಿದ್ದ ಅಹಂಕಾರದ ಮಾನವ ತನ್ನೊಳಗೆ ಸೃಷ್ಟಿಸಿ ಬೇರೆ ರೂಪದಲ್ಲಿ ಹೊರಗೆ ಹಾಕಿದ. ನಗುತ್ತಿದ್ದ ಮುಖ ಗಂಟು ಕಟ್ಟಿತು. ಮಾತು ಮೌನದ ಪಾಲಾಯಿತು. ಕಣ್ಣಾಲಿಗಳು ತುಂಬಿಕೊಂಡವು , ಪ್ರೀತಿ ಉಸಿರಾಡಬೇಕಾದ ಸ್ಥಳದಲ್ಲಿ ಕೋಪ‌ ನಲಿದಾಡಿತು. ಅಹಂಕಾರಕ್ಕೆ ಒಳಗೊಳಗೆ ಅಧ್ಭುತವಾದದ್ದನ್ನ ಸಾಧಿಸಿದ ತೃಪ್ತಿ. ನಾನು ಕೊರಗುತ್ತಿದ್ದೇನೆ. ಅಹಂಕಾರ ನಮ್ಮನ್ನ ಮುಗಿಸಲು ಕಾಯುತ್ತಿದೆ. ನೀವು ಎಚ್ಚರವಾಗಿರಿ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ