ಹಾಡು ಹಕ್ಕಿಯೆ ನೀ ಹಾಡು…
ಕವನ
ಹಾಡು ಹಕ್ಕಿಯೆ ನೀ ಹಾಡು
ಎನ್ನ ಒಲವಿನ ನೀ ಹಾಡು
ಹಾಡುತಲೆ ನೀ ಸಾಗುತಲೆ
ಎನ್ನ ಪ್ರೇಯಸಿಗೆ ನೀ ಹಾಡು
ಮನೆಯ ಹಿಂದಿನ ಒಂಟಿ ಕಲ್ಲಲಿ
ಕುಳಿತು ನನ್ನನೆ ನೋಡುತಿದ್ದೆ
ಕಣ್ಣ ಸನ್ನೆಲಿ ಕರೆದು ನನ್ನನು
ಹತ್ತಿರಕೆ ಸೆಳೆದೆಯೇಕೆ ?
ಹೇಳೆ ನನ್ನ ಕೋಮಲೆ ?
ರಾತ್ರಿ ಚೆಲ್ಲಿದ ಚಂದ್ರ ಬೆಳಕಲಿ
ಮನೆಯ ಮುಂದಿನ ಜಾಲಲಿದ್ದೆ
ಹಾಲ ಬಣ್ಣದಿ ಹೊಳೆಯುತಿದ್ದೆ
ನಿನ್ನ ಚೆಲುವಿಗೆ ಮರುಳನಾಗಿ
ಬಂದು ನಿಂತಿಹೆ ಸನಿಹದಲ್ಲೆ
ಹೇಳೆ ನನ್ನ ಕೋಮಲೆ ?
ಮನದ ಮೂಲೆಲಿ ಪ್ರೇಮದೊರತೆಯ
ಚಿಮ್ಮಿಸಿ ನೀ ದೂರ ಸಾಗಿದೆ
ನನ್ನ ಮರೆತರೂ ನಿನ್ನ ಮರೆಯದೆ
ಜೀವ ಸವೆಸಲು ಸಾಧ್ಯವಾಗದೆ
ನಿನ್ನ ಹುಡುಕಲು ಹೃದಯದಕ್ಕಿಯ
ಕಳಿಸುತಿರುವೆನು ನನ್ನ ಚೆಲುವೆಯೆ
ಹೇಳು ನನ್ನ ಕೋಮಲೆ ?
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
