ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮಗಿದರ ಅರಿವಿರಲಿ !

ಭಾರತದಲ್ಲಿ ಕಲಬೆರಕೆ ಹೇರಳವಾಗಿದೆ. ನಮ್ಮ ರಕ್ತದ ಕಣ ಕಣವೂ ಕಲಬೆರಕೆ ಮತ್ತು ಭ್ರಷ್ಟಾಚಾರಮಯ. ದೇವಸ್ಥಾನದ ಪ್ರಸಾದವೂ ಲಾಭದ ಮೂಲವಾಗಿ ಕಲಬೆರಕೆ ಗೊಳಗಾಗುತ್ತಿರುವುದು ಧಾರ್ಮಿಕ ಶ್ರದ್ಧೆಯೂ ನಮಗಿಲ್ಲ. ಜೊತೆಗೆ ಭಗವಂತನ ಭಯವೂ ನಮಗಿಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಇದರಿಂದಾಗಿ ಆಸ್ತಿಕ ಮನಸ್ಸುಗಳು ಕಂಗೆಡುತ್ತಿವೆ.

Image

ಪೇರಳೆ ಗಿಡದ ಎಲೆಗಳನ್ನು ಸೇವಿಸುವುದರಿಂದ ಪ್ರಯೋಜನಗಳು

ಪೇರಳೆ ಅಥವಾ ಸೀಬೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಸೇಬಿನ ಹಣ್ಣಿನಲ್ಲಿರುವಷ್ಟೇ ಪೋಷಕಾಂಶಗಳು ಸೀಬೆ ಹಣ್ಣಿನಲ್ಲಿವೆ ಎನ್ನುವುದು ಆಹಾರ ತಜ್ಞರ ಅಭಿಮತ. ಬಡವರ ಹಣ್ಣು ಎಂದೂ ಪೇರಳೆ ಹಣ್ಣನ್ನು ಕರೆಯುತ್ತಾರೆ. ಹಿಂದೆಲ್ಲಾ ಪ್ರತೀ ಮನೆಗಳಲ್ಲಿ ಪೇರಳೆಯ ಮರ ಇರುತ್ತಿತ್ತು. ಪುಟ್ಟ ಪುಟ್ಟ ಪೇರಳೆ ಹಣ್ಣು, ಕೆಲವು ಒಳಗಡೆ ಕೆಂಪು ಬಣ್ಣ, ತಿನ್ನಲು ಬಹಳ ರುಚಿಕರವಾಗಿರುತ್ತಿತ್ತು.

Image

ತೆರಿಗೆ ಬಾಕಿ ವಸೂಲಿಗೆ ಸ್ತ್ರೀಶಕ್ತಿ ಅಸ್ತ್ರ ಸೂಕ್ತ

ಹಣ ಸೋರಿಕೆಯಾಗದಂತೆ, ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಸ್ತ್ರೀಗೆ ಸ್ವಭಾವತ ಒಲಿದು ಬಂದಿದೆ. ಮಹಿಳೆಯರ ಈ ಗುಣವೇ ವರದಾನವಾಗಿ ಸಮಾಜದಲ್ಲಿ ಎಷ್ಟೋ ಸಂಸಾರಗಳು ಆರ್ಥಿಕವಾಗಿ ಸುಧಾರಣಾ ಹಳಿಗೆ ಬಂದಿವೆ. ಈ ಸೂಕ್ಷ್ಮತೆಯನ್ನು ಗಮನಿಸಿಯೇ ರಾಜ್ಯ ಸರಕಾರವು ೨೦೨೪-೨೫ರ ಬಜೆಟ್ ನಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಿ ಜವಾಬ್ದಾರಿಯನ್ನು ಮಹಿಳಾ ಸ್ವಸಹಾಯ ಗುಂಪುಗಳ ಹೆಗಲಿಗೆ ವಹಿಸಿತ್ತು.

Image

ಸ್ಟೇಟಸ್ ಕತೆಗಳು (ಭಾಗ ೧೧೯೪) - ಅರ್ಥ ಮಾಡಿಕೋ

ನಿನಗರ್ಥವಾಗುವುದಿಲ್ಲ. ಮೊದಲು ಜನ‌ ಸಂಪಾದಿಸು. ಒಳಿತು ನುಡಿಯುವವರನ್ನು, ಜೊತೆಗೆ ನಿಲ್ಲುವವರನ್ನು, ತಪ್ಪು ಹೇಳುವವರನ್ನ,, ಬೆನ್ನೆಲುಬಾಗುವವರನ್ನ, ನಿನ್ನ ಮನೆಯೇ ತಮ್ಮ‌ಮನೆಯೆಂಬವರನ್ನ, ಮೋಸವಿಲ್ಲದವರನ್ನ, ನಂಬಿಕೆ ಉಳಿಸುವವರನ್ನ, ಇವರನ್ನ ಸಂಪಾದಿಸು.

Image

ಓಝೋನ್ ಪದರ ಮತ್ತು ನೇರಳಾತೀತ ಕಿರಣ

ಒಬ್ಬ ರಕ್ಕಸನಿದ್ದಾನೆ. ಬಹಳ ಬಲಶಾಲಿ ಅಲ್ಲ ಎನ್ನಬಹುದಾದರೂ ರಕ್ಕಸ ಕುಲವಲ್ಲವೇ? ಹಾನಿ ಉಂಟುಮಾಡದೇ ಬಿಡುವವನಲ್ಲ. ಆದರೆ ಇವನ ವಿರೋಧಿಯನ್ನು ಇವನೇ ಹುಟ್ಟಿಸುತ್ತಾನೆ. ಆ ವಿರೋಧಿಯಿಂದ ತಾನೇ ಬಂಧಿಯಾಗುತ್ತಾನೆ. ವೈರಿಯ ವೈರಿಗೂ ತಾನೇ ಜನ್ಮ ನೀಡುತ್ತಾನೆ. ಆತನಿಂದ ವೈರಿ ಸಂಹಾರ ಮಾಡಿಸುತ್ತಾನೆ. ಈ ತಲೆ ತಿರುಕನ ಕಥೆ ಇವತ್ತು ನಮ್ಮ ಕಥಾ ವಸ್ತು.

Image

ಬೆಳಕು ಚೆಲ್ಲುವ ಹುಡುಗಿ (ಕಥಾ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಟಿ. ಪದ್ಮನಾಭನ್
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ. 65/-

ಮಲಯಾಳಂ ಭಾಷೆಯ ಪ್ರಮುಖ ಕಥೆಗಾರ ಟಿ. ಪದ್ಮನಾಭನ್ ಅವರ 12 ಕಥೆಗಳ ಸಂಕಲನವಿದು. ಡಾ. ಅಶೋಕ್ ಕುಮಾರ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪದ್ಮನಾಭನ್ ಅವರ ಕತೆಗಳಲ್ಲಿ ಶೋಷಿತರ, ನೊಂದವರ, ಅಸಹಾಯಕರ ಬದುಕಿನ ಚಿತ್ರಣವಿದೆ. ಕತೆಗಳ ಸನ್ನಿವೇಶ, ಪಾತ್ರಚಿತ್ರಣ, ಸಂವಾದ ಹಾಗೂ ಭಾವತೀವ್ರತೆ ಓದುಗರ ಮನತಟ್ಟುತ್ತವೆ.

ಕೊಕ್ಕೋ - ಸಸ್ಯ ಹೇನು ಮತ್ತು ಟಿ-ಸೊಳ್ಳೆ ನಿಯಂತ್ರಣ

ಕೊಕ್ಕೋ ತೆಂಗು ಅಡಿಕೆ ಬೆಳೆಯ ಮಧ್ಯಂತರದಲ್ಲಿ ಅಧಿಕ ವರಮಾನ ತಂದುಕೊಡುವ ಬೆಳೆ. ಈ ವರ್ಷ ಕೊಕ್ಕೋ ಬೀಜಕ್ಕೆ ಉತ್ತಮ ಬೇಡಿಕೆ ಇದ್ದು, ವಿದೇಶದಿಂದ ಬರುವ ಕೊಕ್ಕೋ ಪ್ರಮಾಣ ಕಡಿಮೆಯಾದ ಕಾರಣ  ಬೆಲೆ ಉತ್ತಮವಾಗಿದೆ. ಈಗ ಕೊಕ್ಕೋದ ದೊಡ್ದ ಕೊಯಿಲಿನ ಸೀಸನ್ ಅಲ್ಲದಿದ್ದರೂ ಸಹ ಕಿಲೋ ಹಸಿ ಬೀಜಕ್ಕೆ ೧೯೦ - ೨೧೦ ರೂ. ಬೆಲೆ ಇದೆ.

Image