ಎರಡು ಗಝಲ್ ಗಳು.....
ಕವನ
ಗಝಲ್ ೧
ನಮ್ಮವರ ಸಾಧನೆಯ ನಾವು ಹೊಗಳುವುದಿಲ್ಲ ಹೀಗೆ
ಸುಮ್ಮ ಸುಮ್ಮನೆಯೇ ಯಾವತ್ತೂ ತೆಗಳುವುದಿಲ್ಲ ಹೀಗೆ
ಮನುಷ್ಯ ತತ್ವ ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆಯೇ
ಗೊತ್ತು ಗುರಿಗಳಿಲ್ಲದ ಉದ್ದೇಶವು ಮುಳುಗುವುದಿಲ್ಲ ಹೀಗೆ
ಎಚ್ಚರಿಸಿದ ನಂತರವೂ ಬದುಕಲ್ಲಿ ಮುರುಟಿದರೆ ಏನನ್ನಲಿ
ಬಂಧನದಿಂದ ತಪ್ಪಿಸಿಕೊಂಡರೂ ಸೆಳೆಯುವುದಿಲ್ಲ ಹೀಗೆ
ಮನೆಯ ಜನರ ಹುಚ್ಚರೆಂದ ಮನುಜ ಕೊಚ್ಚೆಯಲ್ಲಿಹನು
ಹೇಳಲಾರದ ನೋವಿದ್ದರೂ ಹಲ್ಲು ಮಸೆಯುವುದಿಲ್ಲ ಹೀಗೆ
ಹುಟ್ಟಿದವನಿಗೆ ಮಸಣದ ದಾರಿ ಹತ್ತಿರದಲ್ಲೇ ಇರುತ್ತದೆ ಈಶಾ
ಸಾವಿರುವ ಮನೆಯ ದೇಹ ಮನವು ಸವೆಯುವುದಿಲ್ಲ ಹೀಗೆ
***
ಗಝಲ್ ೨
ಬದುಕು ಬದಲಾಗಲೇ ಇಲ್ಲ ಈಶಾ
ನಲಿವು ಸವಿಯಾಗಲೇ ಇಲ್ಲ ಈಶಾ
ಕಬ್ಬದು ಸಕ್ಕರೆಯಾಗಲೇ ಇಲ್ಲ ಈಶಾ
ಬತ್ತವು ಸಿರಿಯಾಗಲೇ ಇಲ್ಲ ಈಶಾ
ಒನಪು ಒಲವಾಗಲೇ ಇಲ್ಲ ಈಶಾ
ಸುಖವು ಗೆಲುವಾಗಲೇ ಇಲ್ಲ ಈಶಾ
ಚಿನ್ನವು ಹೊಳಪಾಗಲೇ ಇಲ್ಲ ಈಶಾ
ರನ್ನವು ಚೆಲುವಾಗಲೇ ಇಲ್ಲ ಈಶಾ
ಮನುಜ ದೇವನಾಗಲೇ ಇಲ್ಲ ಈಶಾ
ಜೀವನ ಬೆಳಕಾಗಲೇ ಇಲ್ಲ ಈಶಾ
-ಹಾ ಮ ಸತೀಶ ಬೆಂಗಳೂರು*
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
