ಸ್ಟೇಟಸ್ ಕತೆಗಳು (ಭಾಗ ೧೧೯೪) - ಅರ್ಥ ಮಾಡಿಕೋ

ಸ್ಟೇಟಸ್ ಕತೆಗಳು (ಭಾಗ ೧೧೯೪) - ಅರ್ಥ ಮಾಡಿಕೋ

ನಿನಗರ್ಥವಾಗುವುದಿಲ್ಲ. ಮೊದಲು ಜನ‌ ಸಂಪಾದಿಸು. ಒಳಿತು ನುಡಿಯುವವರನ್ನು, ಜೊತೆಗೆ ನಿಲ್ಲುವವರನ್ನು, ತಪ್ಪು ಹೇಳುವವರನ್ನ,, ಬೆನ್ನೆಲುಬಾಗುವವರನ್ನ, ನಿನ್ನ ಮನೆಯೇ ತಮ್ಮ‌ಮನೆಯೆಂಬವರನ್ನ, ಮೋಸವಿಲ್ಲದವರನ್ನ, ನಂಬಿಕೆ ಉಳಿಸುವವರನ್ನ, ಇವರನ್ನ ಸಂಪಾದಿಸು. ಇವರಿಂದ ಮುಂದೊಂದು ದಿನ ನಿನಗೆ ದುಡ್ಡಿನ‌ ಮಾರ್ಗವೂ ಸಿಗಬಹುದು , ಕೋಟಿ ಒಡೆಯನ ಹೆಣ ಎತ್ತಲೂ ಮನೆಯವರಿಲ್ಲದ‌ ಕಾಲವಿದು, ಹಾಗಾಗಿ ಜನ‌ಸಂಪಾದನೆಗೆ ಸ್ವಲ್ಪ ಸಮಯ ನೀಡು. ನೀನು ಅವರಿಗಾದರೆ ಅವರು‌ ನಿನಗಾಗುತ್ತಾರೆ. ಮನೆಯೊಳಗೆ ಎಷ್ಟು‌ ಇರ್ತೀಯಾ ಹೊರಗೆ ಹೋಗು, ನಾಲ್ಕು‌ಜನರ ಜೊತೆ ಓಡಾಡು. ನಿನಗೆ ಈಗ ಅರ್ಥ ಆಗೋಲ್ಲ. ಇಲ್ಲವಾದರೆ ನನ್ನ ಹಾಗೆ ಆಗ್ತೀಯಾ... ಹೀಗಂದವರ ನೋವಿನ‌ ಕಣ್ಣೀರು ಇಳಿಯುತ್ತಿತ್ತು . ದುಡ್ಡು ಸಂಪಾದನೆ‌ ಮಾಡಿದ್ದಾರೆ ಜೊತೆಗಾರರಿಲ್ಲದೇ ಅನಾಥರಾಗಿ ದೊಡ್ಡ ಬಂಗಲೆಯೊಳಗೆ ಕೃಶವಾಗುತ್ತಿದ್ದಾರೆ. ದುಡ್ಡು ಕೊಟ್ಟರೆ ಕೆಲಸಕ್ಕೆ‌ ಜನ‌ಸಿಗುತ್ತಾರೆ ಬದುಕಿಗಲ್ಲ ಅನ್ನುತ್ತಾರೆ ಶ್ರೀದರ ರಾಯರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ