ಒಂದಿಷ್ಟು ಹನಿಗಳು !
ಕವನ
ಕಮಾಲ್
ಅಬಕಾರಿ
ಇತಿಹಾಸದಲ್ಲಿ
ಒಂದೇ ದಿನ
ನಾನೂರಾ ಎಂಟು
ಕೋಟಿ ಮೌಲ್ಯದ
ಮದ್ಯದ ಸೇಲ್...
ಇದು-
ಅಬಕಾರಿ ಇಲಾಖೆ
ಮಾರಾಟಗಾರರಿಗೆ
ಕೊಟ್ಟ ಕ್ರೆಡಿಟ್
ಸೌಲಭ್ಯದ
ವಿಶೇಷ ಕಮಾಲ್!
***
ಕಳವಳ...
ಸರ್ಕಾರೀ ಶಾಲೆಗಳಲ್ಲಿ
ವಿದ್ಯಾರ್ಥಿಗಳ
ಸಂಖ್ಯೆ ಇಳಿಮುಖ;
ಏಕ ಶಿಕ್ಷಕ ಶಾಲೆಗಳ
ಸಂಖ್ಯೆಯಲ್ಲಿ
ಹೆಚ್ಚಳ...
ಖಾಸಗೀ ಶಾಲೆಗಳ
ಒಡೆಯರ
ಮುಖದಲ್ಲಿ-
ಮಂದಹಾಸ;
ಸಂಭ್ರಮದ
ಖುಷಿ ನಿಚ್ಚಳ!
***
ವಿದಾಯ
ಅಂದು-
2024
ವರ್ಷವ
ಅದೆನಿತು
ಸಂಭ್ರಮದಲಿ
ಸ್ವಾಗತಿಸಿದ್ದೆವು...
ನಿನಗೊಂದು
ಕೃತಜ್ಞತೆಯ ನಮಸ್ಕಾರ-
ನಮ್ಮನ್ನೆಲ್ಲಾ
ಜೀವಂತವಿಟ್ಟು
ಅನುಭವಗಳ
ತುಂಬಿದ್ದಕ್ಕೆ!
***
ಹೊಸ ವರುಷದ ಶುಭಾಶಯ...
ಹೊಸವರುಷವಿದು
ತರಲಿ
ಎಲ್ಲರಿಗೂ ಹರುಷ;
ತುಂಬಿರಲಿ
ಬಾಳಿನಲಿ
ಸರಸ...
ಜಗದ
ಜನತೆಯೆಲ್ಲ-
ವಿಶ್ವಮಾನವರಾಗಿ
ಒಂದಾಗಿ ಬಾಳಿ
ತುಂಬಿ ಹರಿಯಲಿ
ಎಲ್ಲೆಡೆ ಸಂತಸ!
***
ಬಾಣಂತಿಯರ ಸಾವು
ಏನೋ...
ವಿಜ್ಞಾನ ಬಹು
ಬೆಳದಿದೆ
ಎನ್ನುವಿರಲ್ಲೋ-
ಸಾಯುತಿರುವರು
ಮಗು ಬಾಣಂತಿ....
ಸಮಾಜದ ಸ್ವಾಸ್ಥ್ಯ
ಮಾನವೀಯತೆ
ಕಾಪಾಡಲಾಗದ
ನಾಗರೀಕತೆ-
ಇದ್ದೂ ಸತ್ತಂತೆ
ನೀ ಏನಂತಿ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್