ವಿಧ: ಬ್ಲಾಗ್ ಬರಹ
August 16, 2018
ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು
ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು |
ಬೇವು-ಬೆಲ್ಲಗಳೆ ಜೀವನದ ಚೌಕಟ್ಟು
ಬಂದುದನೆ ಕಂಡುಂಡು ತಾಳುತಿರು ಮೂಢ ||
ವಿಧ: ಬ್ಲಾಗ್ ಬರಹ
August 14, 2018
ಜಾಣೆ..!!
ಇದು ನನ್ನ ಕನಸಿನ ಕೂಸು ಜಾಣೆಯೆಂಬ ಕವನ ಸಂಕಲನದ ಮೂಲಕ ಸಾಹಿತ್ಯಲೋಕಕ್ಕೆ ಕಾಲಿಡಲು ನಾನು ಈಗಷ್ಟೇ ತಯಾರಾಗಿ ನಿಂತಿರುವೆ ನಿಮ್ಮೆಲ್ಲರ ಮುಂದೆ.
ಸರಿಯಾಗಿ ಒಂದು ವರ್ಷ ಸಾಹಿತ್ಯಲೋಕದಲ್ಲಿ ಏನಾದರೂ ಸಾಧನೆ ಮಾಡಲೆ ಬೇಕೆಂಬ ಕನಸು ಕಂಡಿದ್ದೆ. ಅದು ನನಸಾಗಿದೆ ಎಂದು ನಾ ಹೇಳುವುದಿಲ್ಲ ಇದು ನನ್ನ ಪ್ರಥಮ ಹೆಜ್ಜೆ ಅದೆಷ್ಟೋ ಕನಸುಗಳು ನನ್ನ ಜೊತೆಯಾಗಿವೆ. ಅವುಗಳಿಗೆ ಜೀವ ತುಂಬಿ ನಿಮ್ಮ ಮುಂದಿಡುವ ಹೆಬ್ಬಯಕೆ ನನ್ನದು..
ಇನ್ನು ನನ್ನ ಈ ಪಯಣದ ಹಿಂದೆ ಅದೊಂದು ಶಕ್ತಿ ಇದೆ. ಸಾಮಾನ್ಯವಾಗಿ…
ವಿಧ: ಬ್ಲಾಗ್ ಬರಹ
August 12, 2018
ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು
ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ |
ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ
ಹಿತವಾದ ದಾರಿಯನು ಆರಿಸಿಕೊ ಮೂಢ ||
ವಿಧ: ಬ್ಲಾಗ್ ಬರಹ
August 10, 2018
ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು
ಅಂತರಂಗದೊಳಿರಿಸೆ ದೇವನವ ಕಾಣುವನು |
ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು
ಪಾಪಮಾರ್ಗದಿ ನಡೆದು ಬೀಳುವನು ಮೂಢ ||
ವಿಧ: ಬ್ಲಾಗ್ ಬರಹ
August 08, 2018
- - ಏನ್ರೀ , ಕಾಣಿಸೋದೇ ಇಲ್ಲ ?
- - ಹಾಗೇನಿಲ್ಲ , ಇಲ್ಲೇ ಇದ್ದೀನಿ, ಅದೇ ಟ್ರೇನು, ಅದೇ ಬಸ್ಸು ( 'ಅದೇ ಭೂಮಿ, ಅದೇ ಬಾನು !')
- - ನಂದು ಬರೀ ಟೂರ್ ಆಗಿ ಬಿಟ್ಟಿದೆ . ಈಗ ದೇಶಾದ್ಯಂತ 15 ಊರಿಗೆ ಹೋಗಬೇಕು.
( ಬಾನಲ್ಲಿ ಓಡೋ ಮೇಘ, ಗಿರಿಗೋ ನಿಂತಲ್ಲೇ ಯೋಗ ! )
ವಿಧ: ಬ್ಲಾಗ್ ಬರಹ
August 05, 2018
ಮೇಲೇರು ಎಲೆ ಜೀವ ಕೆಳಗೆ ಜಾರದಿರು
ಜೀವಿಸುವ ದಾರಿಯನು ದೇವ ತೋರುವನು |
ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ
ಅನುಭವದ ಪಾಕವನು ವಿತರಿಸೆಲೊ ಮೂಢ ||
ವಿಧ: ಬ್ಲಾಗ್ ಬರಹ
August 01, 2018
ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ
ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ |
ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು
ಬೆಳಗುವಂತಹ ವರವ ಕೋರಿಕೊಳೊ ಮೂಢ ||
ವಿಧ: ಬ್ಲಾಗ್ ಬರಹ
July 30, 2018
ಗುರು ಒಂದು ಟೀ ಕೊಡಮ್ಮ...
ಉರಿಯುತ್ತಿದ್ದ ಸೀಮೆ ಎಣ್ಣೆ ಸ್ಟವ್ ಮೇಲೆ ಇಟ್ಟಿದ್ದ ಟೀ ಪಾತ್ರೆಯಲ್ಲಿದ್ದ ಕೆನೆ ಕಟ್ಟಿದ್ದ ಟೀ ಅನ್ನು ಒಮ್ಮೆ ಸೌಟಿನಿಂದ ಕದಡಿ ಒಂದು ಗ್ಲಾಸಿಗೆ ಸುರಿದು ಕೊಟ್ಟ.... ನಾನು ಅವನು ಕೊಟ್ಟ ಟೀ ಅನ್ನು ಮೆಲ್ಲಗೆ ಸುರ್ ಎಂದು ಸೌಂಡ್ ಮಾಡಿಕೊಂಡು ಕುಡಿಯುತ್ತಾ ಹಾಗೇ ಅಲ್ಲಿದ್ದ ಪೇಪರ್ ಕೈಗೆತ್ತಿಕೊಂಡು ಕಣ್ಣಾಡಿಸುತ್ತಿದ್ದೆ.
ಸ್ವಲ್ಪ ಹೊತ್ತಿನ ನಂತರ ಅವನು ಏನ್ಸಾರ್ ಈ ಸಲ ಸ್ವಾತಂತ್ರ್ಯ ದಿನಾಚರಣೆ ಜೋರಾ ಎಂದು ಕೇಳಿದ. ನಾನು ಪೇಪರ್ ಪಕ್ಕಕ್ಕಿಟ್ಟು ಅಯ್ಯೋ…
ವಿಧ: ಬ್ಲಾಗ್ ಬರಹ
July 29, 2018
ಸಾಧಕನು ಬಲ್ಲಿದರ ನೆರವನ್ನು ಕೋರುವನು
ಸನ್ಮಾರ್ಗ ತೋರೆಂದು ಬಿನ್ನಹವ ಮಾಡುವನು |
ತಿಳಿದವರ ಆಶ್ರಯದಿ ತಿಳಿವು ಪಡೆಯುವನವನು
ಮುಕ್ತಿ ಮಾರ್ಗಕೆ ದಾರಿ ಕಾಣುವನು ಮೂಢ ||
ವಿಧ: ಬ್ಲಾಗ್ ಬರಹ
July 27, 2018
ಮೊದಲಿನಂತುದಿಸುವರು ರವಿ ಸೋಮರು
ತಿರುತಿರುಗಿ ಜನಿಸುವುವು ಭೂಮ್ಯಾಕಾಶಗಳು |
ಎಡೆಬಿಡದ ಸೋಜಿಗಕೆ ಮೊದಲು ಕೊನೆಯಿಲ್ಲ
ಕೊನೆ ಮೊದಲಿರದವನ ಆಟವಿದು ಮೂಢ ||