ವಿಧ: ಬ್ಲಾಗ್ ಬರಹ
July 08, 2018
ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ !
ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ. ಕೆಲವರು ಟ್ರೈನ್‌ಗಳಿಗೆ ಹೋದರೆ, ಇನ್ನೂ ಕೆಲವರು ಮಕ್ಕಳುಮರಿಗಳನ್ನು ಕಟ್ಟಿಿಕೊಂಡವರು, ವೃದ್ಧರು, ಅಕ್ಕಿಿ, ಜೋಳ, ಮೂಟೆಗಳೊಂದಿಗೆ ಬೆಂಗಳೂರಿಗೆ ಹೊರಟುನಿಂತವರು, ಕುಟುಂಬ ಸಮೇತ ಹೋಗುವವರೆಲ್ಲ ಗಬ್ಬು ನಾರುವ, ಯಾವಾಗಲೂ ತುಂಬಿ ತುಳುಕುವ ರೈಲಿನಲ್ಲಿ ಹೋಗುವ ದುಸ್ಸಾಾಹಸ…
ವಿಧ: ಬ್ಲಾಗ್ ಬರಹ
July 08, 2018
ಸತ್ವ ರಜೋ ತಮಗಳ ಕಟ್ಟುಗಳು ಬಿಗಿದಿರಲು
ತನು ಮನ ವಚನಗಳು ಬಿಡದೆ ಕಾಡಿರಲು |
ವಿಚಾರಿ ತಾನವನು ದೇವನ ಮೊರೆ ಹೊಕ್ಕು
ತನ್ನ ಬಂಧನವ ತಾನೆ ಮುರಿವನೋ ಮೂಢ ||
ವಿಧ: ಬ್ಲಾಗ್ ಬರಹ
July 07, 2018
ದೇವನಿಟ್ಟ ಪಾತ್ರೆಯದು ಅಂಕಿಲ್ಲ ಡೊಂಕಿಲ್ಲ
ಬೇಯುತಿಹುದು ಪಾತ್ರೆಯಲಿ ಮಾಡಿದಡುಗೆಯೆಲ್ಲ |
ಮಾಡಿದ ಕರ್ಮವದು ಬೆನ್ನನು ಬಿಡದು
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||
ವಿಧ: ಬ್ಲಾಗ್ ಬರಹ
June 30, 2018
ಬಲಶಾಲಿ ನೀನಾಗು ನಿನ್ನ ಬಲವೇ ಬಲವು
ಸುಕರ್ಮವನೆ ಮಾಡಿ ಸಂತಸವ ನೀ ಕಾಣು |
ಉತ್ಥಾನ ಪತನಕ್ಕೆ ಪರರು ಕಾರಣರಲ್ಲ
ನಿನ್ನುದ್ಧಾರ ನಿನ್ನಿಂದಲೇ ಮೂಢ ||
ವಿಧ: ಬ್ಲಾಗ್ ಬರಹ
June 30, 2018
IMDb: https://www.imdb.com/title/tt0395169/?ref_=nv_sr_1
ಆಫ್ರಿಕಾ ಎಂದ ಕೂಡಲೆ ನಮಗೆ ಥಟ್ಟನೆ ನೆನಪಾಗುವುದು ಎರಡು. ಕಾಡಿನ ಸಫಾರಿ ಮತ್ತು ಅಲ್ಲಿನ ಜನರ ಬಡತನ, ಹಸಿವು. ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನೋಡುವ ಹವ್ಯಾಸ ಉಳ್ಳವರಿಗೆ ಅಲ್ಲಿನ ಕೆಲವು ಆಂತರಿಕ ಸಮಸ್ಯೆಗಳ ಬಗ್ಗೆ ಸ್ಥೂಲವಾಗಿ ಒಂದು ಚಿತ್ರಣವೂ ಇರಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳು ಅಬ್ಬರದಿಂದ ವರದಿಯಾಗುವಂತೆ, ಆಫ್ರಿಕಾದ ದೇಶಗಳ ಬಗ್ಗೆಯೂ…
ವಿಧ: ಬ್ಲಾಗ್ ಬರಹ
June 27, 2018
ಸಕಲ ರಕ್ಷಕ ಸಕಲ ಪೋಷಕ ಸೃಷ್ಟಿಕರ್ತನೆ ದೇವನು
ತಂದೆಯವನೆ ತಾಯಿಯವನೆ ಅವನೆ ಸಕಲಕೆ ಕಾರಕ |
ಹಿತವ ಕಾಯುವ ಮಹಿಮನ ಹಿತವನಾರು ಕಾಯ್ವರು
ಗೂಢಾತಿಗೂಢವೋ ಅವನಾಟ ಮೂಢ ||
ವಿಧ: ಬ್ಲಾಗ್ ಬರಹ
June 23, 2018
ನೀ ತಂದೆ ಒಬ್ಬನಿಗೆ ಒಬ್ಬನಿಗೆ ಮಗನು
ಒಬ್ಬನಿಗೆ ಅಣ್ಣ ನೀನೊಬ್ಬನಿಗೆ ತಮ್ಮನು |
ನೀನೊಬ್ಬನೇ ಇದ್ದರೇನ್ ಪಾತ್ರಗಳು ಹಲವು
ಜನ್ಮಗಳು ಹಲವಿರಲು ಜೀವವೊಂದೇ ಮೂಢ ||
ವಿಧ: ಬ್ಲಾಗ್ ಬರಹ
June 21, 2018
ನೀನೆ ಹೆಣ್ಣಾಗಿರುವೆ ನೀನೆ ಗಂಡಾಗಿರುವೆ
ಎಲೆ ಜೀವ ನೀನಪ್ಪಿ ಒಪ್ಪಿದಾ ತನುವಿನಂತಪ್ಪೆ |
ಮುಪ್ಪಡರಿ ಕೋಲೂರಿ ಹೊಸ ದಾರಿ ಅರಸಿರಲು
ಲೋಕದೆಲ್ಲೆಡೆ ನಿನ್ನ ದಿಟ್ಟಿಯೋ ಮೂಢ ||
ವಿಧ: ಬ್ಲಾಗ್ ಬರಹ
June 18, 2018
ಆ ಮಾರ್ಗ ಈ ಮಾರ್ಗ ಸುತ್ತಿ ಬರುವುದು ಜೀವ
ಮನುಜನೋ ಪ್ರಾಣಿಯೋ ಮತ್ತೊಂದು ಮಗದೊಂದು |
ಇಂದ್ರಿಯಕೆ ಇಂದ್ರನ ಅಮರ ಜೀವಾತ್ಮನ
ನಡೆಗೆ ಕಾರಣವು ಗೂಢವೋ ಮೂಢ ||
ವಿಧ: ರುಚಿ
June 16, 2018
1.ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ,ಮೈದಾ ಹಿಟ್ಟಿಗೆ ಹಾಕಿ ,ಚಿಟಿಕಿ ಉಪ್ಪು ಸೇರಿಸಿ ,ನೀರು ಹಾಕಿ ಹದವಾಗಿ ಕಲಸಿ[ಚಪಾತಿ ಹಿಟ್ಟಿನ ಹದ] . ಕನಿಷ್ಟ ಅರ್ಧ ಗಂಟೆ ನೆನೆದರ ಒಳ್ಳೆಯದು.
2.ಕಡ್ಲೆಬೀಜವನ್ನು ಬಾಣಲಿಯಲ್ಲಿ ಹಾಕಿ ಉರಿದುಕೊಳ್ಳಿ,ಸ್ವಲ್ಪ ಕೆಂಪಾಗುವಷ್ಟು , ನಂತರ ಬೇರೆ ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಎಳ್ಳನ್ನು ಬಾಣಲಿಗೆ ಹಾಕಿ , ಸ್ವಲ್ಪ ಸಿಡಿಯಲು ಶುರುವಾದಾಗ ,ಅದೇ ಪಾತ್ರೆಗೆ ಅಥವಾ ಬೇರೆ ಪಾತ್ರೆಗೆ ತಣ್ಣಗಾಗಲು ಹಾಕಿ. ಬಿಸಿ ಇದ್ದಾಗಲೇ ಪುಡಿ ಮಾಡಿಕೊಂಡರೆ ಪುಡಿ ಮೆತ್ತಗಾಗಿ…