ಎಲ್ಲ ಪುಟಗಳು

ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
July 25, 2018
ಕೆಲಸ ಮುಗಿಸಿ ಮನೆಗೆ ಹೊರಟ ಕೂಡಲೇ ಜಿನುಗಲು ಆರಂಭವಾಯಿತು, ಸಣ್ಣಗೆ ತುಂತುರು ತುಂತುರು ಹನಿಯಿಂದ ಶುರುವಾದ ಮಳೆ ಕೆಲವೇ ನಿಮಿಷಗಳಲ್ಲಿ ಧೋ ಎಂದು ಸುರಿಯಲು ಆರಂಭವಾಯಿತು. ವಿಧಿಯಿಲ್ಲದೇ ಬಸ್ ತಂಗುದಾಣವೊಂದನ್ನು ಆಶ್ರಯಿಸಬೇಕಾಯಿತು. ಹಾಗೇ ಕುಳಿತು ಬೀದಿ ದೀಪದ ಬೆಳಕಿನಲ್ಲಿ ಬೀಳುತ್ತಿದ್ದ ಮಳೆಯನ್ನು ನೋಡುತ್ತಾ ನೆನಪಿನ ಸುರುಳಿ ಬಿಚ್ಚಿಕೊಂಡಿತು. ಸಣ್ಣವರಿದ್ದಾಗ ಅಂದರೆ ತೀರಾ ಚಿಕ್ಕಮಕ್ಕಳಲ್ಲ...ಪ್ರೌಢಾವಸ್ಥೆಯ ದಿನಗಳವು.. ಮಳೆ ಎಂದರೆ ಅದೊಂಥರಾ ಖುಷಿ, ಅದೇನೋ ಆನಂದ... ಇನ್ನೇನು ಮೋಡ ಕವಿದು…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
July 24, 2018
ಸಕಲಕೆಲ್ಲಕು ಮೊದಲು ತಾಯಿ ತಾ ಪ್ರಕೃತಿಯು ಆದಿಯೇ ಇರದುದಕೆ ಕೊನೆಯೆಂಬ ಸೊಲ್ಲಿಲ್ಲ | ದೇವನೊಲುಮೆಯಿದು ಜೀವಕಾಶ್ರಯದಾತೆ ಜೀವಿಗಳೆ ಮಾಧ್ಯಮವು ಪ್ರಕೃತಿಗೆ ಮೂಢ || 
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
July 24, 2018
ಶುರುವಾಗಿದೆ ಮತ್ತೊಮ್ಮೆ ಜಿಟಿಜಿಟಿ,ಜಿನುಗುಟ್ಟುವ ಮಳೆ... ಒಂದೆರೆಡು ಹನಿ ಮಳೆ ಬಿದ್ದರೆ ಸಾಕು, ಕಪಾಟಿನಲ್ಲಿದ್ದ ರೈನ್ ಕೋಟ್ ಗಳಿಗೆ ಬಿಡುಗಡೆ ಭಾಗ್ಯ, ಮುದುಡಿ ಮೂಲೆಗುಂಪಾಗಿದ್ದ ಕೊಡೆಗಳಿಗೆ ಅರಳುವ ಸೌಭಾಗ್ಯ...ಒಂದು ಹದ ಮಳೆ ಜೋರಾಗಿ ಬಿದ್ದರೆ ಸುನಾಮಿಯೇ ಬಂದಂತೆ ಆಡುವ ಜನರನ್ನು ಕಂಡರೆ ನಗು ಬರುತ್ತದೆ. ಭಾಗಶಃ ಈಗಿನ ಬೆಂಗಳೂರಿನ ಜನಕ್ಕೆ ೯೦ರ ದಶಕದ ಮಳೆಯ ಪರಿಚಯವೇ ಇರುವುದಿಲ್ಲ.... ಏಕೆಂದರೆ ಮುಕ್ಕಾಲು ಪಾಲು ಬೆಂಗಳೂರನ್ನು ವಲಸಿಗರೇ ಆಕ್ರಮಿಸಿಕೊಂಡಿದ್ದಾರೆ. ಇವರಿಗೆ ಬೆಂಗಳೂರಿನ ಅಸಲಿ…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
July 20, 2018
ಇದ್ದುದೆಲ್ಲವು ಅಂದೊಮ್ಮೆ ಜಡರೂಪಿ ದ್ರವವಂತೆ ಕತ್ತಲೆಯ ಮಡುವಿನಲಿ ಲಕ್ಷಣವೆ ಇರದಿರಲು | ಸುತ್ತೆಲ್ಲ ಮುಚ್ಚಿರಲು ತಾಮಸವೆ ಮೆರೆದಿರಲು ಒಂದಾಗಿಸಿದ ಮಹಿಮೆ ಅವನೊಲುಮೆ ಮೂಢ ||
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 19, 2018
ತುಂಬಿದ ಮದುವೆ ಮನೆ. ಯಜಮಾನನ ಮಗಳ ಮದುವೆ ನಡೆದಿದೆ. ಎಲ್ಲರ ಹಾಗೆ ಯಜಮಾನನ ತಂಗಿ ಬಹಳಷ್ಟು ದುಡಿದಿದ್ದಾಳೆ. ಆದರೆ ಬೀಗರು ಬಂದಾಗ, ಆಕೆಯ ಗಂಡ - ಆತನ ತಲೆ ಸರಿಯಿಲ್ಲ - ನಡೆದುಕೊಂಡ ರೀತಿಯಿಂದ ಯಜಮಾನನಿಗೆ ತಲೆ ತಗ್ಗಿಸುವಂತಾಗಿ ತಂಗಿಯ ಗಂಡನನ್ನು ಬೈದಿದ್ದಾನೆ. ಯಜಮಾನನ ತಂಗಿ - ಆಕೆಯ ಹೆಸರು ಛವಿ - ಸ್ವಾಭಿಮಾನಿ, ತನ್ನ ಗಂಡನೊಂದಿಗೆ ಅಟ್ಟದ ಮೇಲಿನ ಕೋಣೆ ಸೇರಿದ್ದಾಳೆ. ಯಾವುದೇ ಶಾಸ್ತ್ರಗಳಲ್ಲೂ ಪಾಲುಗೊಳ್ಳುತ್ತಿಲ್ಲ. ಯಾರು ಹೋಗಿ ಕರೆದರೂ ಬರುತ್ತಿಲ್ಲ , ಊಟಕ್ಕೂ ಕೆಳಗಿಳಿಯಲಿಲ್ಲ.…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
July 16, 2018
ಸಾವೆಂಬುದಿರಲಿಲ್ಲ ಅಮರತ್ವವಿನ್ನೆಲ್ಲಿ ರಾತ್ರಿಯೇ ಇರದಾಗ ಹಗಲು ಮತ್ತೆಲ್ಲಿ | ಉಸಿರೆಂಬುದಿರದೆ ಬದುಕಿದ್ದ ವಿಸ್ಮಯಕೆ ಕಾರಣವು ಅಮರ ಸಂಗತಿಯೊ ಮೂಢ || 
ಲೇಖಕರು: vishu7334
ವಿಧ: ಬ್ಲಾಗ್ ಬರಹ
July 15, 2018
IMDb:  http://www.imdb.com/title/tt0096548/?ref_=nv_sr_1   ಈ ಬಾರಿ ಒಂದು ಚಲನಚಿತ್ರದ ಬದಲಿಗೆ ಟಿವಿ ಸೀರಯಲ್ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಬ್ಲಾಗ್ ಅನ್ನು ಚಲನಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದುಕೊಂಡಿದ್ದೆನಾದರೂ ಕೆಲವು ಟಿವಿ ಕಾರ್ಯಕ್ರಮಗಳ ಬಗ್ಗೆ ಹೇಳಲೇ ಬೇಕು ಎನಿಸಿದ್ದರಿಂದ ನನಗೆ ಇಷ್ಟವಾದ ಮತ್ತು ಹಾಸ್ಯ ಧಾರಾವಾಹಿಗಳಲ್ಲಿ ಸದಾ ಎತ್ತರದ ಸ್ಥಾನದಲ್ಲಿ ನಿಲ್ಲುವ ಕೆಲವು ಶೋಗಳ ಬಗ್ಗೆಯೂ ಹಂಚಿಕೊಳ್ಳುತ್ತಿದ್ದೇನೆ.    ಹಾಸ್ಯ ಟಿವಿ ಧಾರಾವಾಹಿಗಳಲ್ಲಿ ಇತ್ತೀಚೆಗೆ…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
July 14, 2018
                       (ಗಝಲ್)  ನೀನು ಏಳುವ ಮುನ್ನವೇ ಎದ್ದು ಸದ್ದಿಲ್ಲದೆಕಾಫ಼ಿ ಗುಟುಕರಿಸಿ ನಿನಗೂ ತಂದಿದ್ದೇನೆ ಏತಕೀ ಮುನಿಸು  ಕೈದೋಟದಿಂದ ಅರಳಿದ ಹೂಗಳ ತಂದುಪೂಜೆಗಲ್ಲದೆ ನಿನ್ನ ಮುಡಿಗೂ ಮಿಗಿಸಿದ್ದೇನೆ ಏತಕೀ ಮುನಿಸು  ಹರಡಿ ಚೆಲ್ಲಾಪಿಲ್ಲಿ ಬಿದ್ದ ನಿನ್ನ ವರ್ಣವಸ್ತ್ರಗಳನ್ನುಬೇಸರಿಸದೆ ಒಪ್ಪ ಓರಣವಾಗಿರಿಸಿದ್ದೇನೆ ಏತಕೀ ಮುನಿಸು  ಜಳಕ ಮುಗಿಸಿದ್ದೇನೆ ಪೂಜೆಗೂ ಕುಳಿತೆಧ್ಯಾನದಲೂ ಕಾಡುತ್ತಿದೆ ಮನಸ್ಸು ಏತಕೀ ಮುನಿಸು  ಆರತಿಯನೆತ್ತಿ ಮಂತ್ರ ಮೊಳಗಿದ ಘಳಿಗೆಹೊಳೆಸಿಬಿಟ್ಟನು ಕಾರಣ  ’…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
July 12, 2018
ಸತ್ಯಾಸತ್ಯವಿರಲಿಲ್ಲ ಶೂನ್ಯ ತಾ ಮೊದಲು ಇರಲಿಲ್ಲವಂತೆ ಲೋಕವೆಲ್ಲಿಯದಂತೆ ಆಗಸವು ಮೇಲೆ ಇರಲಿಲ್ಲವಂತೆ | ಇದ್ದಂತಹುದೇನೋ ಗಹನ ಗಂಭೀರ ವಿಸ್ಮಯವದಂತೆ ಆರ ಆಶ್ರಯದಲಿತ್ತೋ ಅರಿತವರಿಹರೆ ಮೂಢ || 
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
July 11, 2018
ಅಮರನಲ್ತೆ ಕತ್ತಲೆಯನೋಡಿಸುವ ಬೆಳಕು ನೀನಲ್ತೆ ನೀನಲ್ತೆ ನಿರ್ಮಲನು ತಿಳಿವು ತೋರುವ ಅರಿವು ನೀನಲ್ತೆ | ಸರಿದಾರಿಯಲಿ ಸಮನಿಹನ ಹಿಂದಿಕ್ಕಿ ಅಡಿಯಿಡಲು ಅಡ್ಡಿ ನಿನಗೇನಿಹುದೊ ಕಾಣೆ ಮೂಢ ||