ಅಪರಾಧಿ
ಚಿತ್ರ
(ಗಝಲ್)
ನೀನು ಏಳುವ ಮುನ್ನವೇ ಎದ್ದು ಸದ್ದಿಲ್ಲದೆ
ಕಾಫ಼ಿ ಗುಟುಕರಿಸಿ ನಿನಗೂ ತಂದಿದ್ದೇನೆ ಏತಕೀ ಮುನಿಸು
ಕೈದೋಟದಿಂದ ಅರಳಿದ ಹೂಗಳ ತಂದು
ಪೂಜೆಗಲ್ಲದೆ ನಿನ್ನ ಮುಡಿಗೂ ಮಿಗಿಸಿದ್ದೇನೆ ಏತಕೀ ಮುನಿಸು
ಹರಡಿ ಚೆಲ್ಲಾಪಿಲ್ಲಿ ಬಿದ್ದ ನಿನ್ನ ವರ್ಣವಸ್ತ್ರಗಳನ್ನು
ಬೇಸರಿಸದೆ ಒಪ್ಪ ಓರಣವಾಗಿರಿಸಿದ್ದೇನೆ ಏತಕೀ ಮುನಿಸು
ಜಳಕ ಮುಗಿಸಿದ್ದೇನೆ ಪೂಜೆಗೂ ಕುಳಿತೆ
ಧ್ಯಾನದಲೂ ಕಾಡುತ್ತಿದೆ ಮನಸ್ಸು ಏತಕೀ ಮುನಿಸು
ಆರತಿಯನೆತ್ತಿ ಮಂತ್ರ ಮೊಳಗಿದ ಘಳಿಗೆ
ಹೊಳೆಸಿಬಿಟ್ಟನು ಕಾರಣ ’ಅನಂತ’ ಏತಕೀ ಮುನಿಸು!
ನಿನ್ನ ನಾಸಿಕದಣುಗಾತ್ರ ಮೊಡವೆ ಕಂಡೂ ನಾನು
ಕಳಕಳಿಸದ ಘೋರ ಅಪರಾಧಿ! ಮನ್ನಿಸು, ಕಳೆದು ಮುನಿಸು!
- ಅನಂತ ರಮೇಶ್
Rating
Comments
ಉ: ಅಪರಾಧಿ
ಹುಸಿ ಮುನಿಸು! ರಸಿಕ ಓಲೈಕೆ! ಚೆನ್ನಾಗಿದೆ.
In reply to ಉ: ಅಪರಾಧಿ by kavinagaraj
ಉ: ಅಪರಾಧಿ
ಧನ್ಯವಾದಗಳು.